ಹೊಸ ಮನೆಗೆ ಕಾಲಿಟ್ಟ ಬಿಗ್​ಬಾಸ್​ ಖ್ಯಾತಿಯ ಧನರಾಜ್ ದಂಪತಿ; ಫೋಟೋಸ್ ನೋಡಿ!​

author-image
Veena Gangani
Updated On
ಹೊಸ ಮನೆಗೆ ಕಾಲಿಟ್ಟ ಬಿಗ್​ಬಾಸ್​ ಖ್ಯಾತಿಯ ಧನರಾಜ್ ದಂಪತಿ; ಫೋಟೋಸ್ ನೋಡಿ!​
Advertisment
  • ರಾಜಾ ರಾಣಿ ಶೋನಲ್ಲಿ ಕಾಣಿಸಿಕೊಂಡಿದ್ದ ದಂಪತಿ
  • ಬಿಗ್​ಬಾಸ್​ ಸೀಸನ್ 6ಕ್ಕೆ ಎಂಟ್ರಿ ಕೊಟ್ಟಿದ್ದ ಧನ್‌ರಾಜ್‌
  • ಧನ್‌ರಾಜ್‌ ಅವರು ಹೊಸ ಮನೆಗೆ ಇಟ್ಟ ಹೆಸರೇನು?

ಈಗಂತೂ ಕಿರುತೆರೆ ಹಾಗೂ ಬೆಳ್ಳಿತೆರೆ ಕಲಾವಿದರು ಹೊಸ ಮನೆಗಳನ್ನು ಕಟ್ಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ಅಣ್ಣಯ್ಯ ಸೀರಿಯಲ್​ ಖ್ಯಾತಿಯ ನಿಶಾ ರವಿಕೃಷ್ಣನ್ ಹೊಸ ಮನೆಗೆ ಕಾಲಿಟ್ಟಿದ್ದರು.

ಇದನ್ನೂ ಓದಿ:ರಕ್ಷಿತ್ ಶೆಟ್ಟಿಗೆ ಪಂಜುರ್ಲಿ ಆಶೀರ್ವಾದ.. ಕುಟುಂಬಸ್ಥರ ವಿಶೇಷ ಹರಕೆ ಉತ್ಸವದಲ್ಲಿ ಸಿಂಪಲ್ ಸ್ಟಾರ್​..!

publive-image

ಗಿಚ್ಚಿ ಗಿಲಿಗಿಲಿ ಖ್ಯಾತಿಯ ರಾಘವೇಂದ್ರ, ಚಂದ್ರಪ್ರಭ, ಸ್ಯಾಂಡಲ್​ವುಡ್ ನಟ ಧರ್ಮಣ ಸೇರಿದಂತೆ ಸಾಕಷ್ಟು ಮಂದಿ ಗೃಹ ಪ್ರವೇಶ ಮಾಡಿದ್ದರು. ಇದೀಗ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 6 ಖ್ಯಾತಿಯ ಧನ್‌ರಾಜ್‌ ಹಾಗೂ ಪತ್ನಿ ಶಾಲಿನಿ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.

publive-image

ಹೌದು, ಬಿಗ್​ಬಾಸ್​, ರಾಜಾ ರಾಣಿ ಸೀಸನ್​ 2ರಲ್ಲಿ ಕಾಣಿಸಿಕೊಂಡಿದ್ದ ದಂಪತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಧನ್‌ರಾಜ್‌ ಅವರು ಹೊಸ ಮನೆಗೆ ಅಗಸ್ತ್ಯ ಎಂದು ಹೆಸರನ್ನು ಇಟ್ಟಿದ್ದಾರೆ.

publive-image

ಇನ್ನು, ಧನ್‌ರಾಜ್‌ ಅವರ ಗೃಹ ಪ್ರವೇಶಕ್ಕೆ ರಜತ್​ ಕಿಶನ್​ ಪತ್ನಿ, ಐಶ್ವರ್ಯ ಸಾಲಿಮಠ ಹಾಗೂ ವಿನಯ್ ದಂಪತಿ ಆಗಮಿಸಿದ್ದರು. ಧನ್‌ರಾಜ್‌ ಅವರ ಗೃಹ ಪ್ರವೇಶದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment