/newsfirstlive-kannada/media/post_attachments/wp-content/uploads/2024/10/manju-pavagad.jpg)
ಮಂಜು ಪಾವಗಡ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಂಜು ಪಾವಗಡ ಚಿರಪರಿಚಿತ. ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಬಿಗ್ಬಾಸ್ ಮೂಲಕ ಎಲ್ಲರ ಮನೆಮಾತಾಗಿರೋ ನಟ ಮಂಜು ಪಾವಗಡ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಬಹುದಿನದ ಕನಸು ನನಸು ಮಾಡಿಕೊಂಡ ಬಿಗ್ಬಾಸ್ ವಿನ್ನರ್ ಮಂಜು ಪಾವಗಡ; ಏನದು?
ಹೌದು, ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ಹಾಸ್ಯ ನಟ ಮಂಜು ಪಾವಗಡ ಸದ್ಯ ಜಂಟಿಯಾಗಿದ್ದಾರೆ. ಸದ್ಯ ಪಾವಗಡದಲ್ಲಿ ಮಂಜು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ನವೆಂಬರ್ನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಸದ್ಯ ಮಂಜು ಪಾವಗಡ ಅವರು ಕೈ ಹಿಡಿದ ಹುಡುಗಿ ಯಾರು ಅಂತ ಮಾಹಿತಿ ಸಿಕ್ಕಿಲ್ಲ. ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳು ನ್ಯೂಸ್ ಫಸ್ಟ್ಗೆ ಲಭ್ಯವಾಗಿವೆ.
ಇನ್ನು, ಮೊನ್ನೆಯಷ್ಟೇ ಮಂಜು ಪಾವಗಡ ಅವರು ಬೆಂಗಳೂರಿನಲ್ಲಿಯೇ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದರು. ಹೊಸ ಮನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನು ಮಂಜು ಪಾವಗಡ ಅವರ ಹೊಸ ಮನೆಗೆ ನಟ ರಾಜೀವ್, ಅಂಕಿತಾ ಜಯರಾಮ್ ಸೇರಿದಂತೆ ಮುಂತಾದವರು ಆಗಮಿಸಿ ಶುಭ ಹಾರೈಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ