/newsfirstlive-kannada/media/post_attachments/wp-content/uploads/2024/12/BBK-11-Chaitra-Kundapura-3.jpg)
ಬೆಂಗಳೂರು: ಹೊರಗಡೆ ಹೇಗೋ ಬಿಗ್‌ಬಾಸ್‌ನಲ್ಲೂ ತಮ್ಮ ಮಾತುಗಳಿಂದಲೇ ಚೈತ್ರಾ ಕುಂದಾಪುರ ಫೇಮಸ್ ಆಗಿದ್ದಾರೆ. ಆಟ ಸುಮಾರಾಗಿದ್ರೂ ಅವರ ಮಾತುಗಳು ಮಾರುದ್ಧ ಅನ್ನೋದು ವೀಕ್ಷಕರ ಮಾತು.
ಇತ್ತೀಚೆಗೆ ನಡೆದ ಎಪಿಸೋಡ್‌ನಲ್ಲಿ ನ್ಯೂಸ್ ಹೆಡ್‌ಲೈನ್ಸ್ ಓದಿದ್ದ ಚೈತ್ರಾ ಕುಂದಾಪುರ ಇವತ್ತು ಅವರೇ ಹೆಡ್‌ಲೈನ್ಸ್ ಆಗಿದ್ದಾರೆ. ವಂಚನೆ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗಲು ಬಿಗ್ ಮನೆಯಿಂದ ಆಚೆಬಂದು ಸುದ್ದಿಯಾಗಿದ್ದಾರೆ.
ಚೈತ್ರಾ ಹೊರಬಂದಿದ್ದೇಕೆ?
2023ರಲ್ಲಿ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸೋದಾಗಿ ಉದ್ಯಮಿ ಗೋವಿಂದ ಪೂಜಾರಿಗೆ 5 ಕೋಟಿ ರೂಪಾಯಿ ವಂಚಿಸಿದ ಆರೋಪ ಚೈತ್ರಾ ಕುಂದಾಪುರ ಮೇಲಿದೆ. ಈ ಕೇಸ್‌ನಲ್ಲಿ ಚೈತ್ರಾ ಜೈಲುವಾಸ ಅನುಭವಿಸಿ ಜಾಮೀನು ಪಡೆದು ಹೊರಬಂದಿದ್ದಾರೆ. 2023ರ ಸೆಪ್ಟೆಂಬರ್‌ನಲ್ಲಿ ಬಂಧನವಾಗಿದ್ದ ಚೈತ್ರಾ ಡಿಸೆಂಬರ್‌ನಲ್ಲಿ ರಿಲೀಸ್ ಆಗಿದ್ರು.
ಬಳಿಕ ಬಿಗ್‌ಬಾಸ್ 11ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ರು. ಈಗ ವಂಚನೆ ಕೇಸ್‌ನಲ್ಲಿ ಬಿಗ್‌ಬಾಸ್ ಮನೆಯಿಂದ ಹೊರಬಂದು 3ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದಾರೆ. ಸದ್ಯ ಕೇಸ್ ವಿಚಾರಣೆಯನ್ನ ಕೋರ್ಟ್ ಜನವರಿ 13ಕ್ಕೆ ಮುಂದೂಡಿದೆ. ಹೀಗಾಗಿ ಚೈತ್ರಾ ಕುಂದಾಪುರ ವಾರಂಟ್ ರೀಕಾಲ್ ಮಾಡಿಕೊಂಡು ಮತ್ತೆ ಬಿಗ್ ಮನೆಗೆ ತೆರಳಿದ್ದಾರೆ ಅಂತ ತಿಳಿದುಬಂದಿದೆ. ಜನವರಿ 13ರವರೆಗೆ ಚೈತ್ರಾ ಬಿಗ್ ಬಾಸ್ ಮನೆಯಲ್ಲೇ ಇದ್ದರೆ ಮತ್ತೊಮ್ಮೆ ಬಿಗ್‌ಬಾಸ್ ಮನೆಯಿಂದಲೇ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.
ಬಿಗ್‌ಬಾಸ್ ಮನೆ ಸೇರಿದ ಚೈತ್ರಾ
ಇತ್ತೀಚೆಗಷ್ಟೇ ಚೈತ್ರಾ ಕುಂದಾಪುರ ಅನಾರೋಗ್ಯ ಕಾರಣ ಹೇಳಿ ಬಿಗ್ ಬಾಸ್ನಿಂದ ಹೊರ ಬಂದಿದ್ರು. ಬಳಿಕ ಮತ್ತೆ ಆರೋಗ್ಯ ಚೇತರಿಸಿಕೊಂಡ ಬಳಿಕ ಒಂಟಿ ಮನೆಗೆ ಎಂಟ್ರಿ ಕೊಟ್ಟಿದ್ರು. ಆದ್ರೆ, ಹೊರಗಿನ ವಿಚಾರಗಳ ಬಗ್ಗೆ ಇತರೆ ಸ್ಪರ್ಧಿಗಳಿಗೆ ಹೇಳಿ ತಲೆಗೆ ಹುಳ ಬಿಟ್ಟಿದ್ರು. ಈ ಕಾರಣಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ರು. ಇದೀಗ ಹೊರಬಂದು ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ: ಇಂದು ಭಾರೀ ಮಳೆಗೆ ತತ್ತರಿಸಿದ ಕರ್ನಾಟಕ; ಬೆಚ್ಚಿಬಿದ್ದ ಜನ; ಎಲ್ಲೆಲ್ಲಿ ಏನಾಯ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ