ಕೈಯಲ್ಲಿ ಲಾಂಗ್​ ಹಿಡಿದು ಖಡಕ್​ ವಿಲನ್​ಗಳಾದ ವಿನಯ್​ ಗೌಡ, ರಜತ್​ ಕಿಶನ್;​ ಏನಿದರ ವಿಶೇಷ?

author-image
Veena Gangani
Updated On
BREAKING: ವಿನಯ್ ​ಗೌಡ, ರಜತ್ ಕಿಶನ್ ಬಂಧನ.. ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಶಾಕ್! ಮುಂದೇನು?
Advertisment
  • ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡ ಆಪ್ತ ಸ್ನೇಹಿತರು
  • ವಿನಯ್​ ಗೌಡ ಪುಷ್ಪ ಗೆಟಪ್​ಗೆ ಫ್ಯಾನ್ಸ್​ ಫುಲ್ ಫಿದಾ
  • ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಹಾಕಿ ಬಂದ ಬ್ರದರ್ಸ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸ್ಪರ್ಧಿಗಳು ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಆದ್ರೆ ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿಗಳನ್ನು ವೀಕ್ಷಕರು ಮರೆತ್ತಿಲ್ಲ. ಅದರಲ್ಲೂ ಬಿಗ್​ಬಾಸ್​ನಿಂದಲೇ ಆನೆ ಅಂತಲೇ ಫೇಮಸ್​ ಆಗಿರೋ ವಿನಯ್​ ಗೌಡ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:ಮುದ್ದು ಮಗನ ಜೊತೆಗೆ ಮುದ್ದಾದ ಕುಟುಂಬ.. ಕವಿತಾ ಗೌಡ ದಂಪತಿ ಗುಂಡಪ್ಪನ ಬಗ್ಗೆ ಏನಂದ್ರು?

publive-image

ಇದರ ಮಧ್ಯೆ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ರಜತ್​ ಕಿಶನ್​ ಜೊತೆಗೆ ವಿನಯ್​ ಗೌಡ ಭರ್ಜರಿ ರೀಲ್ಸ್ ಮಾಡಿದ್ದಾರೆ. ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ನಟ ದರ್ಶನ್​ ಅವರ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಸ್ಲೋ ಮೋಷನ್ ವಾಕ್​ ಮಾಡಿದ್ದಾರೆ.

ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ವಿನಯ್​ ಹಾಗೂ ರಜತ್​ ಲುಕ್​ಗೆ ಫಿದಾ ಆಗಿದ್ದಾರೆ. ಅಲ್ಲದೇ ವಿನಯ್​​ ಅವರ ಪುಷ್ಪ ರಾಜ್ ಲುಕ್​ಗೆ ಬೆಂಕಿ ಅಂತೆಲ್ಲಾ ಕಾಮೆಂಟ್ಸ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment