ಧನರಾಜ್ ಮೇಲೆ ಮೋಕ್ಷಿತಾ ಫೈರ್​; ಆ ಒಂದು ಮಾತಿಗೆ ಕಣ್ಣೀರಿಟ್ಟ ಧನು..!

author-image
Ganesh
Updated On
ಧನರಾಜ್ ಮೇಲೆ ಮೋಕ್ಷಿತಾ ಫೈರ್​; ಆ ಒಂದು ಮಾತಿಗೆ ಕಣ್ಣೀರಿಟ್ಟ ಧನು..!
Advertisment
  • ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ವಿಚಾರಕ್ಕೆ ಗಲಾಟೆ
  • ಧನರಾಜ್​ಗೆ ಮಾತಲ್ಲೇ ಹಿಗ್ಗಾಮುಗ್ಗಾ ಜಾಡಿಸಿದ ಸ್ಪರ್ಧಿಗಳು
  • ನೆಟ್ಟುಗೆ ಡಿಸಿಷನ್ ತೆಗೆದುಕೊಳ್ಳಲು ಬರಲ್ಲ ಎಂದು ಆವಾಜ್

ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಹೊತ್ತಿ ಉರಿದಿದೆ. ಬಿಗ್​​ಬಾಸ್​ ಕ್ಯಾಪ್ಟನ್ಸಿ ಗಲಾಟೆಯ ಪ್ರೊಮೋ ರಿಲೀಸ್ ಮಾಡಿದ್ದು, ಪ್ರತಿಸ್ಪರ್ಧಿಗಳ ಮಾತಿಗೆ ಧನರಾಜ್ ಕಣ್ಣೀರು ಇಟ್ಟಿದ್ದಾರೆ.

ಇಬ್ಬರು ಸ್ಪರ್ಧಿಗಳನ್ನು ಕ್ಯಾಪ್ಟನ್ಸಿ ರೇಸ್​ನಿಂದ ಹೊರಗೆ ಇಡುವಂತೆ ಬಿಗ್​ಬಾಸ್​ ಸ್ಪರ್ಧಿಗಳಿಗೆ ಸೂಚಿಸುತ್ತಾರೆ. ಅಂತೆಯೇ ಧನರಾಜ್​, ಅನುಷಾ ಮತ್ತು ತ್ರಿವಿಕ್ರಮ್ ಹೆಸರನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ಕೂಡ ನೀಡುತ್ತಾರೆ. ಅನುಷಾಗೆ ಕ್ಯಾಪ್ಟನ್ಸಿ ಆಗುವ ಅರ್ಹತೆ ಇಲ್ಲ ಎಂಬ ಕಾರಣ ನೀಡಿದ್ದರು.

ಅದು ಅನುಷಾರ ಕೋಪಕ್ಕೆ ಕಾರಣವಾಗಿದೆ. ನಿಮಗಿಂತ ನನಗೆ ಅರ್ಹತೆ ಇದೆ. ಹೇಗೆ ನೀವು ನನ್ನನ್ನು ಕ್ಯಾಪ್ಟನ್ಸಿಯಿಂದ ಹೊರಗೆ ಇಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇದೇ ವೇಳೆ ಉಗ್ರಂ ಮಂಜು ಕೂಡ, ಧನರಾಜ್ ಅವರು ಮೆಚುರಿಟಿಯಿಂದ ಆಟವನ್ನು ಆಡಬೇಕು ಎಂದಿದ್ದಾರೆ. ಅದೇ ರೀತಿ ಗೌತಮಿ, ಮೋಕ್ಷಿತಾ ಕೂಡ ಗರಂ ಆಗಿದ್ದಾರೆ.

ಇದನ್ನೂ ಓದಿ:BBK11: ಅಬ್ಬಾ.. ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಅತಿ ದೊಡ್ಡ 6 ಆಫರ್​ ಕೊಟ್ಟ ಬಿಗ್​ಬಾಸ್​; ಏನದು?

ನೆಟ್ಟುಗೆ ಡಿಸಿಷನ್ ತೆಗೆದುಕೊಳ್ಳಲು ಬರಲ್ಲ. ತಲೆಯಲ್ಲಿ ಸೆನ್ಸ್ ಇದೆಯಾ. ಮತ್ತೆ ನೀನು ಕ್ಯಾಪ್ಟನ್, ನಿನ್ನಂತವರು ಕ್ಯಾಪ್ಟನ್​ ಎಂದು ಧನರಾಜ್ ಮೇಲೆ ಮೋಕ್ಷಿತ ಮುಗಿ ಬಿದ್ದಿದ್ದಾರೆ. ಆಗ ಸಮರ್ಥಿಸಿಕೊಳ್ಳುವ ಧನರಾಜ್, ಹಿಂದಿನ ಧನರಾಜ್ ಈಗ ಇಲ್ಲ. ಧನರಾಜ್ ಜೋರಾಗಿದ್ದಾನೆ. ಭಯಪಟ್ಟುಕೊಳ್ಳುವ ಧನರಾಜ್​ ನಿಮ್ಮ ಮುಂದೆ ಇಲ್ಲ ಎಂದಿದ್ದಾರೆ. ಕೊನೆಗೆ ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ:ವಕ್ಫ್​​ನಿಂದ ರೈತರ ಆಸ್ತಿ ಮೇಲೆ ಹಕ್ಕು, ಇದು ವಿಷಾದಕರ.. ಬಾಳೆಹೊನ್ನೂರು ಶ್ರೀ ಇನ್ನೇನು ಹೇಳಿದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment