/newsfirstlive-kannada/media/post_attachments/wp-content/uploads/2025/03/namrutha4.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ ನಮ್ರತಾ ಗೌಡ ಸಖತ್ ಖುಷಿಯಲ್ಲಿದ್ದಾರೆ. ಇಂದು ಮಾರ್ಚ್ 17. ಸ್ಯಾಂಡಲ್ವುಡ್ನ ಪ್ರೀತಿಯ ಪವರ್ ಸ್ಟಾರ್ ಅಪ್ಪು ಅವರ ಹುಟ್ಟುಹಬ್ಬ. ಅಪ್ಪು ಅವರ ಹುಟ್ಟು ಹಬ್ಬದಂದ್ದೇ ನಮ್ರತಾ ಗೌಡಗೆ ಸರ್ಪ್ರೈಸ್ ಗಿಫ್ಟ್ವೊಂದು ಅವರ ಕೈ ಸೇರಿದೆ.
ಇದನ್ನೂ ಓದಿ:ಅಪ್ಪು ಹೆಸರಲ್ಲಿ ಪ್ರತಿ ತಿಂಗಳು ಬಡವರಿಗೆ ಊಟ; ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ಮಹತ್ವದ ನಿರ್ಧಾರ!
ಹೌದು, ಪುನೀತ್ ರಾಜ್‌ಕುಮಾರ್ ಅವರಿಗೆ ದೇಶಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕೇವಲ ಜನಸಾಮಾನ್ಯರ ಅಷ್ಟೇ ಅಲ್ಲದೇ ದೊಡ್ಡ ಸ್ಟಾರ್ ನಟ ನಟಿಯರು ಕೂಡ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅದರಲ್ಲಿ ನಮ್ರತ ಗೌಡ ಕೂಡ ಒಬ್ಬರು. ಈ ಹಿಂದೆ ಅಪ್ಪು ಅವರ ಮೇಲಿನ ಪ್ರೀತಿಗೆ ಹಾಗೂ ಪುನೀತ್ ಸರ್ ಯಾವಾಗಲೂ ನನ್ನ ಜೊತೆನೇ ಇರಬೇಕು ಎಂಬ ಕಾರಣಕ್ಕೆ ಅವರ ಕೈ ಮೇಲೆ ಪುನೀತ್ ರಾಜ್‌ಕುಮಾರ್ ಅಂತ ಟ್ಯಾಟೂ ಹಾಕಿಸಿಕೊಂಡಿದ್ದರು.
View this post on Instagram
ಇದೀಗ ಚಿಕ್ಕ ವಯಸ್ಸಿನಿಂದಲೂ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರೋ ನಮ್ರತಾ ಗೌಡ ಅವರಿಗೆ ಗಿಫ್ಟ್ವೊಂದು ಸಿಕ್ಕಿದೆ. ಅಪ್ಪು ಅವರು ಧರಿಸುತ್ತಿದ್ದ ಟೀ ಶರ್ಟ್ವೊಂದನ್ನು ನಮ್ರತಾ ಗೌಡ ಅವರಿಗೆ ಆಪ್ತರೊಬ್ಬರು ಗಿಫ್ಟ್ ಆಗಿ ನೀಡಿದ್ದಾರಂತೆ. ಈ ಬಗ್ಗೆ ಖುದ್ದು ನಮ್ರತಾ ಗೌಡ ಅವರೇ ಹೇಳಿಕೊಂಡಿದ್ದಾರೆ. ಇಂದು ಪುನೀತ್ ರಾಜ್‌ಕುಮಾರ್ ಅವರಿಗೆ ಇಂದು 50ನೇ ವರ್ಷದ ಹುಟ್ಟು ಹಬ್ಬ. ಹೀಗಾಗಿ ನಗರದ ಕಂಠೀರವ ಸ್ಟುಡಿಯೋಗೆ ಅಪ್ಪು ಅಭಿಮಾನಿಗಳು, ಸ್ಟಾರ್ ನಟ ನಟಿಯರು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ