/newsfirstlive-kannada/media/post_attachments/wp-content/uploads/2024/11/BBK1158.jpg)
ಕನ್ನಡದ ಬಿಗ್ಬಾಸ್ ಸೀಸನ್ 11 8ನೇ ವಾರಕ್ಕೆ ಕಾಲಿಡುತ್ತಿದೆ. ಇಂದು ಬಿಗ್ಬಾಸ್ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲೆಂದೇ ಇಬ್ಬರು ಸಖತ್ ಸ್ಟ್ರಾಂಗ್ ಕಂಟೆಸ್ಟೆಂಟ್ಗಳನ್ನು ದೊಡ್ಮನೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ:1000 ರೂಪಾಯಿ ಹೂಡಿಕೆ ಮಾಡಿ ಲಕ್ಷ ಲಕ್ಷ ಗಳಿಸುತ್ತಿರುವ ಮಹಿಳೆ! ಇದು ಗೃಹಿಣಿಯೊಬ್ಬಳ ಯಶೋಗಾಥೆ
ಬಿಗ್ಬಾಸ್ ಮನೆಗೆ 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಎಂಟ್ರಿ ಕೊಟ್ಟಿದ್ದಾರೆ. ಇವರ ಜೊತೆಗೆ ಶೋಭಾ ಶೆಟ್ಟಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ಬಿಗ್ಬಾಸ್ ಮನೆಗೆ ಈ ಇಬ್ಬರು ಎಂಟ್ರಿ ಕೊಡುತ್ತಿದ್ದಂತೆ ಮನೆ ಮಂದಿ ಫುಲ್ ಶಾಕ್ ಆದರು. ಇದಾದ ಬಳಿಕ ಶೋಭಾ ಶೆಟ್ಟಿ ಅವರು ತಮ್ಮ ಬಗ್ಗೆ ಕಿರು ಪರಿಚಯ ಮಾಡಿಕೊಂಡಿದ್ದರು. ಇನ್ನು 50ನೇ ದಿನಕ್ಕೆ ದೊಡ್ಮನೆಗೆ ಕಾಲಿಟ್ಟ ಶೋಭಾ ಶೆಟ್ಟಿ ಹಾಗೂ ರಜತ್ ಅವರಿಗೆ ಬಿಗ್ಬಾಸ್ ವಿಶೇಷ ಅಧಿಕಾರವೊಂದನ್ನು ಕೊಟ್ಟಿದ್ದಾರೆ. ಹೌದು, ಬಿಗ್ಬಾಸ್ ಮನೆಗೆ ಬರುತ್ತಿದ್ದಂತೆ ಮಸ್ತ್ ಜಾಕ್ ಪಾಟ್ ಹೊಡೆದಂತೆ ಆಗಿದೆ.
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಕೊಟ್ಟ ಅಧಿಕಾರವೇನು?
ಈ ಕ್ಷಣದಿಂದ ಬಿಗ್ಬಾಸ್ನ ಮುಂದಿನ ಆದೇಶದವರೆಗೂ ಅಡುಗೆ ಮನೆಯ ಸಂಪೂರ್ಣ ಅಧಿಕಾರ ನಿಮ್ಮಿಬ್ಬರ ಕೈಗೆ ಒಪ್ಪಿಸಲಾಗುತ್ತಿದೆ. ಮನೆಯ ಯಾವುದೇ ಸದಸ್ಯರು ನಿಮ್ಮ ಅನುಮತಿ ಇಲ್ಲದೇ ಏನನ್ನೂ ಪಡೆಯುವಂತಿಲ್ಲ. ಯಾವ ಅಡುಗೆ ಮಾಡಬೇಕು, ಏನು ಮಾಡಬೇಕು, ಯಾವಾಗ ಮಾಡಬೇಕು ಅಂತ ಎಲ್ಲ ನಿರ್ಧಾರಗಳು ನಿಮ್ಮಿಬ್ಬರದ್ದು ಆಗಿರಬೇಕು. ಅಡುಗೆ ಮನೆಯ ಎಲ್ಲಾ ಆಗು ಹೋಗುಗಳು ನಿಮ್ಮಿಬ್ಬರ ಇಚ್ಚೆಯಂತೆ ಆಗಬೇಕು ಅಂತ ಅಧಿಕಾರ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ