/newsfirstlive-kannada/media/post_attachments/wp-content/uploads/2024/10/bigg-boss-5-1.jpg)
ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​ ಸೀಸನ್ 11 ಬಾರಿ ಕುತೂಹಲತೆಯಿಂದ ಸಾಗುತ್ತಿದೆ. ಸ್ಪರ್ಧಿಗಳಾದ ಜಗದೀಶ್​ ಮತ್ತು ರಂಜಿತ್​ ಮಾಡಿದ ತಪ್ಪಿನಿಂದ ಶಿಕ್ಷೆಯಾಗಿ ಮನೆಯಿಂದ ಹೊರಹೋಗಿದ್ದಾರೆ. ಆದರೆ ಕಿಚ್ಚ ತನ್ನ ಪಂಚಾಯ್ತಿಯಲ್ಲಿ ಈ ಅಚ್ಚರಿಯ ಘಟನೆಯ ಬಗ್ಗೆ ಚರ್ಚಿಸಿದ್ದಾರೆ. ಚರ್ಚೆ ವೇಳೆ ಮನೆಯಿಂದ ಹೊರ ಹೋದ ಲಾಯರ್​ ಜಗದೀಶ್​ ಅವರ ಜೊತೆಗೆ ಮಾತನಾಡಿದ್ದಾರೆ.
ಲಾಯರ್​ ಜಗದೀಶ್​ ಏನಂದ್ರು?
ನನ್ನ ಆಟದ ಬಗ್ಗೆ ನನಗೆ ಖುಷಿ ಇದೆ. ಕೆಲವೊಂದು ಘಟನೆಗಳು ಆಗಬಾರದಿತ್ತು. ಕೆಲವೊಂದು ಬೇಸರವಿದೆ. ರಂಜಿತ್​ನ ಎಲ್ಲಾರು ಸೇರಿಕೊಂಡು ಬಲಿಪಶು ಮಾಡಿಬಿಟ್ರಲ್ಲ ಎಂದು ಲಾಯರ್​ ಜಗದೀಶ್​ ಹೇಳಿದ್ದಾರೆ.
ಇದನ್ನೂ ಓದಿ: ತುತ್ತಿಟ್ಟ, ಮುತ್ತಿಟ್ಟ ಹೆತ್ತಮ್ಮನನ್ನು ಕಳೆದುಕೊಂಡ ಕಿಚ್ಚ ಸುದೀಪ್​.. ಅಷ್ಟಕ್ಕೂ ಆಗಿದ್ದೇನು?
ಬಳಿಕ, ಹಂಸಾ ನಿನ್ನ ಕಣ್ಣಲ್ಲಿ ನೀರು ಬಂದಾಗ ನಾನು ಒರೆಸಿದ್ದೀನಿ ಎಂದಿದ್ದಾರೆ. ಒಬ್ಬ ಜೀವನದಲ್ಲಿ ಹೀರೋ ಆಗಬೇಕಾದ್ರೆ ಆಪೋಸ್​​ ಮಾಡಲು ಬೇಕೆ ಬೇಕು ಎಂದಿದ್ದಾರೆ. ಕೊನೆಯಲ್ಲಿ ನನದೊಂದು ರಿಕ್ವೆಸ್ಟ್​ ಇದೆ. ನಾನು ಮತ್ತೆ ಬಿಗ್​ ಬಾಸ್​ ಮನೆಗೆ ಹಿಂದಿರುಗಬಹುದಾ? ಎಂದು ಕಿಚ್ಚನ ಬಳಿ ಕೇಳಿದ್ದಾರೆ.
View this post on Instagram
ಇಂದು ಆದಿತ್ಯವಾರವಾಗಿದ್ದು, ವಾರದ ಪಂಚಾಯ್ತಿ ಇದೆ. ಆದರೆ ಬೇಸರದ ಸಂಗತಿ ಎಂದರೆ ಕಿಚ್ಚ ಸುದೀಪ್​ ತಾಯಿ ಸರೋಜಾ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೀಗಿರುವಾಗ ಇಂದಿನ ಬಿಗ್​ ಬಾಸ್​ ಕಾರ್ಯಕ್ರಮ ಬಗ್ಗೆ ಕೊಂಚ ಕುತೂಹಲವಿದೆ. ಕಿಚ್ಚ ಪಂಚಾಯ್ತಿ ಕತೆ ಚಿತ್ರೀಕರಣ ಆಗಿದೆಯಾ? ಅಥವಾ ಆಗಲು ಬಾಕಿ ಇದೆಯಾ? ತಳಿದುಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us