/newsfirstlive-kannada/media/post_attachments/wp-content/uploads/2024/12/BBK11_8.jpg)
ಬಿಗ್​ಬಾಸ್​ನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಸುದೀಪ್ ಅವರ ಒಂದೊಂದು ಮಾತು ಸ್ಪರ್ಧಿಗಳು ಮನೆ ಮೂಲೆ ಸೇರುವಂತೆ ಇತ್ತು. ನಿಮ್ಮ ಆಟ ನೀವು ಆಡಿ, ಇನ್ನೊಬ್ಬರ ಮಾತು ಕೇಳಬೇಡಿ. ಮನೆಯಲ್ಲಿ ರಜತ್ ಹಾಗೂ ಧನರಾಜ್ ಮಧ್ಯೆ ನಡೆದ ಘರ್ಷಣೆ ಬಗ್ಗೆ ಕಿಚ್ಚ ತುಸು ಖಾರವಾಗಿಯೇ ಸುದೀಪ್ ಮಾತನಾಡಿದರು.
ರಜತ್, ಧನರಾಜ್ ಹೊಡೆದಾಡಿದ್ದರೇ ರಜತ್ ಹೊರಗಡೆ ಹೋಗಿರುತ್ತಿದ್ದರು. ಏಟು ತಿಂದುಕೊಂಡು ನೀವು ಮನೆಯೊಳಗೆ ಇರಬೇಕು ಎಂದು ಹನುಮಂತು ಮಾತನಾಡಿದ್ದನ್ನ ಸುದೀಪ್ ನೆನಪಿಸಿದರು. ಇದಕ್ಕೆ ಧನರಾಜ್ ನಾನು ಜೋರಾಗಿ ಹೊಡೆದಿರಲಿಲ್ಲ ಸರ್. ಜಗಳ ಅಂತ ಬಂದಾಗ.. ಎಂದು ಹೇಳುವಾಗ ಧನರಾಜ್ ಕಣ್ಣೀರು ಹಾಕಿದ್ದು ರಜತ್​ಗೆ ಐ ಆ್ಯಮ್ ಸ್ವಾರಿ ಎಂದು ಥ್ಯಾಂಕ್ಸ್ ಕೊಟ್ಟಿದ್ದಾರೆ. ನನಗೆ ಯಾವ ತರ ಸ್ಟ್ಯಾಂಡ್ ತಗೋಬೇಕು ಎಂದು ಗೊತ್ತಾಗಲಿಲ್ಲ. ನನಗೂ ಇಷ್ಟ ಇರಲಿಲ್ಲ ಇದು. ಇಂತಹ ಸ್ವಿಚ್ಯುವೇಷನ್ ನಾನು ಯಾವತ್ತೂ ಫೇಸ್ ಮಾಡಿಲ್ಲ. ಆ ಮೇಲೆ ಅವರ ಸುದ್ದಿಗೆ ಹೋಗಿಲ್ಲ. ಕಳಪೆ ಆಗಬಾರದು ಎಂದು ಫನ್ ಆಗಿ ತಗೊಂಡೆ. ಆದರೆ ಇದು ಆಗಬಾರದಿತ್ತು, ಆಗಿದೆ ಎಂದು ಹೇಳುತ್ತಲೇ ಕಣ್ಣೀರು ಹಾಕಿದರು.
ಇದನ್ನೂ ಓದಿ: ತ್ರಿವಿಕ್ರಮ್ ನಾಮಿನೇಟ್​ ಹಿಂದೆ ದೊಡ್ಡ ರಣತಂತ್ರ..? ಮೋಕ್ಷಿತಾ, ಐಶ್ವರ್ಯ ಬಿಗ್ ಪ್ಲಾನ್ ರಿವೀಲ್ ಮಾಡಿದ ಕಿಚ್ಚ
/newsfirstlive-kannada/media/post_attachments/wp-content/uploads/2024/12/BBK11_9.jpg)
ರಜತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಆ ಮಟ್ಟದವರೆಗೆ ಹೋಗಬಾರದಿತ್ತು. ಅವನು ನನ್ನ ತಮ್ಮನ ತರನೆ ಇದ್ದೋನು. ದರ್ಪ ತೋರಿಸಿ ನಾನು ದೊಡ್ಡವನು ಎಂದು ತೋರಿಸಿಕೊಳ್ಳುವ ಅವಶ್ಯತೆ ಇರಲಿಲ್ಲ. ಆ ಘಟನೆ ನಡೆದಾಗ ಆಕಸ್ಮಿಕವಾಗಿ ಅದು ನಡೆಯಿತು. ಚೈತ್ರಾ ಹಾಗೂ ಗೌತಮಿ ಅವರು ತಲೆ ತುಂಬಿಸಿದ್ದಕ್ಕೆ ಧನರಾಜ್ ಆ ರೀತಿ ಮಾಡಿದನು ಎಂದು ಕೇಳಲ್ಪಟ್ಟೆ. ಆದರೆ ನಾನು ತಾಳ್ಮೆ ತೆಗೆದುಕೊಳ್ಳಬೇಕಿತ್ತು. ಆದರೆ ನಾನು ಅದನ್ನು ಕಳೆದುಕೊಂಡೆ ಅನಿಸುತ್ತದೆ. ಮತ್ತೆ ಇದು ರಿಪೀಟ್ ಆಗಲ್ಲ ಸರ್ ಎಂದು ರಜತ್ ಹೇಳಿದ್ದಾರೆ.
ಕೊನೆಗೆ ಸುದೀಪ್ ಅವರು ಇಬ್ಬರಿಗೂ ಎಚ್ಚರಿಸಿ, ಒಬ್ಬರನ್ನ ಒಬ್ಬರು ತಬ್ಬಿಕೊಳ್ಳಲು ಹೇಳಿದರು. ನಿಮಗೆ ನೆನಪಿರುವಂತೆ ಪನಿಶ್​ಮೆಂಟ್ ಕೊಡಲಾಗಿದೆ. ಅದನ್ನು ಪೂರೈಸಿ. ನಿಮ್ಮಲ್ಲಿ ಯಾರು ಉಳಿಯುತ್ತೀರಿ, ಯಾರು ಹೊರಗೆ ಹೋಗುತ್ತೀರಿ ಎಂದು ನೋಡೋಣ ಎಂದು ಯಾರನ್ನೂ ಎಲಿಮಿನೇಷನ್ ಮಾಡಲಿಲ್ಲ. ಆದರೆ ಭಾನುವಾರದ ಎಪಿಸೋಡ್​ನಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಎಂದು ಗೊತ್ತಗಲಿದೆ. ಇದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us