Advertisment

ಅಬ್ಬಬ್ಬಾ.. ಐಷಾರಾಮಿ ಕಾರು ಖರೀದಿಸಿದ ಬಿಗ್​ಬಾಸ್ ಖ್ಯಾತಿಯ​ ಲಾಯರ್ ಜಗದೀಶ್​; ಬೆಲೆ ಎಷ್ಟು?

author-image
Veena Gangani
Updated On
ಅಬ್ಬಬ್ಬಾ.. ಐಷಾರಾಮಿ ಕಾರು ಖರೀದಿಸಿದ ಬಿಗ್​ಬಾಸ್ ಖ್ಯಾತಿಯ​ ಲಾಯರ್ ಜಗದೀಶ್​; ಬೆಲೆ ಎಷ್ಟು?
Advertisment
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಹೊಸ ಫೋಟೋಸ್
  • ಬಿಗ್​ಬಾಸ್​ ಮನೆಗೆ ಅಚ್ಚರಿಯ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಜಗದೀಶ್
  • ಬಿಗ್​ಬಾಸ್​ ಮುಗಿದ ಬೆನ್ನಲ್ಲೇ ಜಗದೀಶ್​ ಮನೆಗೆ ಹೊಸ ಅತಿಥಿ ಆಗಮನ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ 11ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಸೀಸನ್​ಗೆ ಎಂಟ್ರಿ ಕೊಟ್ಟಿದ್ದ ಲಾಯರ್ ಜಗದೀಶ್​ ಸಖತ್​ ಸುದ್ದಿಯಲ್ಲಿದ್ದಾರೆ. ಬಿಗ್​ಬಾಸ್​ ಸೀಸನ್​ 11ರ ಎರಡನೇ ವಾರಕ್ಕೆ ಲಾಯರ್ ಜಗದೀಶ್​ ಆಚೆ ಬಂದಿದ್ದರು.

Advertisment

ಇದನ್ನೂ ಓದಿ:ಕನ್ನಡಿಗರ ಹೃದಯ ಗೆದ್ದ ದೀಪಿಕಾ ಪಡುಕೋಣೆ.. ಬೆಂಗಳೂರಲ್ಲಿ ದಿಲ್ಜಿತ್‌ಗೆ ಕನ್ನಡ ಪಾಠ; ವಿಡಿಯೋ ಸಖತ್ ವೈರಲ್‌!

ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಆಗಿ ಒಪನಿಂಗ್​ ದಿನ ವೇದಿಕೆಗೆ ಅಚ್ಚರಿಯ ರೀತಿಯಲ್ಲಿ ಜಗದೀಶ್ ಎಂಟ್ರಿ ಕೊಟ್ಟು ಕಮಾಲ್​ ಮಾಡಿದ್ದರು. ಕೆಲವು ದಿನಗಳ ಹಿಂದೆ ಮತ್ತೆ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುತ್ತೇನೆ ಅಂತ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಲಾಯರ್​ ಜಗದೀಶ್​ ಈಗ ಹೊಸ ಕಾರನ್ನು ಖರೀದಿ ಮಾಡಿದ್ದಾರೆ.

publive-image

ಹೌದು, ಲಾಯರ್ ಜಗದೀಶ್ ಅವರ ಮನೆಗೆ ಹೊಸದೊಂದು ಕಾರು ಆಗಮನವಾಗಿದೆ. ಬಿಎಂಡಬ್ಲ್ಯೂ ಕಂಪನಿಯ ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಹೊಚ್ಚ ಹೊಸ ಕಾರಿನ ಜೊತೆಗೆ ಪತ್ನಿ ಹಾಗೂ ಮಗನ ಜೊತೆಗೆ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. ಇನ್ನೂ ಮಾಹಿತಿ ಪ್ರಕಾರ, ಬಿಎಂಡಬ್ಲ್ಯೂ ಕಾರಿನ ಬೆಲೆಯೂ ಬರೋಬ್ಬರಿ 1 ಕೋಟಿ ರೂಪಾಯಿ ಬೆಲೆಯಾಗಿದೆ. ಹೊಸ ಕಾರಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Advertisment

publive-image

ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಲಾಯರ್​ ಜಗದೀಶ್​ ಒಂದು ಹವಾ ಕ್ರಿಯೇಟ್ ಮಾಡಿದ್ದರು. ಇದರಿಂದಲೇ ಕ್ರಶ್​ ಆಫ್​ ಕರ್ನಾಟಕ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ಬಿಗ್​ಬಾಸ್​ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಗ್​ಬಾಸ್​ ನಟ ರಂಜಿತ್ ಹಾಗೂ ಲಾಯರ್ ಜಗದೀಶ್​ ಅವರನ್ನು ಬಿಗ್​ಬಾಸ್​ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದರು. ಆದರೆ ಇದೀಗ ಮತ್ತೆ ಹಿಂದಿಯ ದೊಡ್ಡ ರಿಯಾಲಿಟಿ ಶೋ  ಬಿಗ್​ಬಾಸ್​ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿದ್ದಾರಂತೆ. ಈ ಬಗ್ಗೆ ಸಾಕಷ್ಟು ಪೋಸ್ಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಾ ಇವೆ. ಆದರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಹಿಂದಿ ಬಿಗ್​ಬಾಸ್​ಗೆ ಲಾಯರ್ ಜಗದೀಶ್​ ಹೋಗಿದ್ದೇ ಆದರೆ ಯಾವ ರೀತಿ ಹವಾ ಕ್ರೀಯೆಟ್ ಮಾಡ್ತಾರಾ ಅಂತ ಕಾದು ನೋಡಬೇಕಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment