/newsfirstlive-kannada/media/post_attachments/wp-content/uploads/2024/10/jagadish-BBK11-1.jpg)
ಬಿಗ್ ಬಾಸ್ ಸೀಸನ್ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ದಿನವೂ ಜಗಳ, ಕೂಗಾಟ, ಕಣ್ಣೀರು ಕಾಣಿಸುತ್ತಿದೆ. ಇದೀಗ ಲಾಯರ್ ಜಗದೀಶ್ ಕೂಡ ದೊಡ್ಮನೆಯಲ್ಲಿ ಕಣ್ಣೀರು ಸುರಿಸಿದ್ದಾರೆ. ಸದ್ಯ ಅವರ ಕಣ್ಣೀರಿಗೆ ಕಾರಣರಾದವರು ಯಾರು? ಇಲ್ಲಿದೆ ಓದಿ.
ಲಾಯರ್ ಜಗದೀಶ್ ಮತ್ತು ಐಶ್ವರ್ಯಾರವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪೋಷಕರನ್ನು ನೆನೆಸಿಕೊಂಡಿದ್ದಾರೆ. ಜಗದೀಶ್ ತನ್ನ ತಾಯಿ-ತಂದೆಯನ್ನು ನೆನೆದು, ನಾನು ತುಂಬಾ ಲಕ್ಕಿ. ಆದ್ರೆ ತುಂಬಾ ದಿನ ಇರಲಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಕೆಂಡಸಂಪಿಗೆ ಸೀರಿಯಲ್ ಬಗ್ಗೆ ನಟಿ ಅಮೃತಾ ರಾಮಮೂರ್ತಿ ಪೋಸ್ಟ್; ಏನದು?
ಜಗದೀಶ್ ಕಣ್ಣೀರು ಸುರಿಸಿದ್ದನ್ನು ಕಂಡು ಐಶ್ವರ್ಯಾ ಸಮಧಾನ ಪಡಿಸಿದ್ದಾರೆ. ನನಗೂ ನಿಮ್ಮಹಾಗೆಯೇ ಆಗಿತ್ತು. ನಿಮ್ಮಷ್ಟು ಅನುಭವ ಇಲ್ಲದೆ ಇರಬಹುದು. ಚಿಕ್ಕ ವಯಸ್ಸಿನಲ್ಲೇ ಬೇರೆಯೇ ಅನುಭವ ಅನುಭವಿಸಿದ್ದೇನೆ. ಕೈ ಹಿಡಿದು ನಡೆಸೋಕೆ ಯಾರು ಬರಲಿಲ್ಲ. ಅದಕ್ಕೆ ಆ ಸಮಯದಲ್ಲಿ ಸಿವಿಕ್ ಸೆನ್ಸ್ ಮತ್ತು ಎಜುಕೇಶನ್ ಹೆಲ್ಪ್ ಆಗುತ್ತೆ ಎಂದು ಹೇಳಿದ್ದಾರೆ.
View this post on Instagram
ಇದನ್ನೂ ಓದಿ: ಭರತನಾಟ್ಯ ಮಾಡುತ್ತಾ ಬಂದ ಸಂಗೀತಾ ಶೃಂಗೇರಿ; ಧರೆಗಿಳಿದ ದೇವತೆ ನೀವು ಎಂದ ಫ್ಯಾನ್ಸ್
ಅಂದಹಾಗೆಯೇ ಬಿಗ್ ಬಾಸ್ ಪ್ರಾರಂಭವಾಗಿ ಮೊದಲ ವಾರಂತ್ಯದತ್ತ ಬರುತ್ತಿದೆ. ಅಭಿಮಾನಿಗಳು ಕಿಚ್ಚನ ಪಂಚಾಯ್ತಿ ಕಾಣಲು ಎದುರು ನೋಡುತ್ತಿದ್ದಾರೆ. ಅದರಲ್ಲೂ ಸ್ಪರ್ಧಿಗಳ ನಡತೆ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲತೆ ಎಲ್ಲರಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ