Advertisment

BBK11: ಬಿಗ್​ ಬಾಸ್​ ಮನೆಯಲ್ಲಿ ದೈಹಿಕ ಹಲ್ಲೆ.. ಮನೆಯಿಂದ ಕಿಕ್​ ಔಟ್​ ಆದವರ ಇತಿಹಾಸ ಹೀಗಿದೆ

author-image
AS Harshith
Updated On
BBK11: ಬಿಗ್​ ಬಾಸ್​ ಮನೆಯಲ್ಲಿ ದೈಹಿಕ ಹಲ್ಲೆ.. ಮನೆಯಿಂದ ಕಿಕ್​ ಔಟ್​ ಆದವರ ಇತಿಹಾಸ ಹೀಗಿದೆ
Advertisment
  • ಬಿಗ್​ ಬಾಸ್ ನಿಯಮವನ್ನು ಗಾಳಿಗೆ ತೂರಿದ ಸ್ಪರ್ಧಿಗಳು​
  • ದೈಹಿಕ ಹಲ್ಲೆ ನಡೆಸಿದ ಸ್ಪರ್ಧಿಗಳಿಗೆ ಮನೆಯಲ್ಲಿಲ್ಲ ಉಳಿಗಾಲ
  • ಕಿಚ್ಚನ ನಿರೂಪಣೆಯ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಕಿತ್ತಾಟ

ಕನ್ನಡ ಬಿಗ್​ ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡ ಕಾರ್ಯಕ್ರಮವೆಂದರೆ ಅದು ಬಿಗ್​ ಬಾಸ್​. ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ ಈ ಕಾರ್ಯಕ್ರಮ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಸೀಸನ್​ ಒಂದರಿಂದ ಪ್ರಾರಂಭವಾಗಿ ಇಂದು ಸೀಸನ್​ ಹನ್ನೊಂದನ್ನು ಮುನ್ನಡೆಸುತ್ತಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಇಂದು ಸ್ಪರ್ಧಿಗಳಿಬ್ಬರು ಕೈ-ಕೈ ಮಿಲಾಯಿಸಿದ್ದು, ಮನೆಯಿಂದ ಕಿಕ್​ ಔಟ್​ ಆಗಿದ್ದಾರೆ.

Advertisment

ಲಾಯರ್​ ಜಗದೀಶ್​ ಮತ್ತು ಸೀರಿಯಲ್​ ನಟ ರಂಜಿತ್​​ ಮನೆಯಲ್ಲಿ ಮಾತಿನ ಚಕಮಕಿ ನಡೆಸಿ ಹೊಡೆದಾಡಿಕೊಂಡಿದ್ದಾರೆ. ಬಿಗ್​ ಬಾಸ್​ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆ ಇಬ್ಬರನ್ನು ಮನೆಯಿಂದ ಹೊರ ಕಳುಹಿಸಲಾಗಿದೆ.

ಬಿಗ್​​ ಬಾಸ್ ನಿಯಮದ ಪ್ರಕಾರ ಮನೆಯೊಳಕ್ಕೆ ಸ್ಪರ್ಧಿಗಳು ದೈಹಿಕವಾಗಿ ನಲ್ಲೆ ನಡೆಸುವಂತಿಲ್ಲ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಕೆಲವು ಸ್ಪರ್ಧಿಗಳು ದೈಹಿಕ ಹಲ್ಲೆ ನಡೆಸಿದ ಉದಾಹರಣೆಗಳಿವೆ. ಈ ಹಿಂದೆ ಹುಚ್ಚಾ ವೆಂಕಟ್​ ಕೂಡ ಹೊಡೆದಾಡಿಕೊಂಡ ಹಿನ್ನೆಲೆ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಬಳಿಕ ಸಂಯುಕ್ತಾ ಹೆಗಡೆ ಕೂಡ ಈ ರೀತಿಯ ವರ್ತನೆಯಿಂದ ಹೊರಬಂದಿದ್ದರು. ಆದರೀಗ ಜಗದೀಶ್​ ಮತ್ತು ರಂಜಿತ್​ ಹೊಡೆದಾಡಿಕೊಂಡಿದ್ದು, ಮನೆಯಿಂದ ಔಟ್​ ಆಗಿದ್ದಾರೆ.

publive-image

ನನ್​ ಮಗಂದ್​ ಎಂದು ಬಾರಿಸಿ ಬಿಟ್ಟ

ಹುಚ್ಚಾ ವೆಂಕಟ್​ ಸೀಸನ್​ 8ರಲ್ಲಿ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆಯೊಳಕ್ಕೆ ಹೋಗಿದ್ದರು. ಈ ವೇಳೆ ರವಿ ಮುರೂರು ಎಂಬ ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ್ದರು. ಇವರ ವರ್ತನೆ ಕಂಡು ಬಿಗ್​ ಬಾಸ್​ ಮನೆಯಿಂದ ಹೊರ ಕಳುಹಿಸಿದ್ದರು.

Advertisment

ಇದನ್ನೂ ಓದಿ: Breaking: ಬಿಗ್​​ ಬಾಸ್​ನಲ್ಲಿ ಹೊಡೆದಾಡಿಕೊಂಡ ಸ್ಪರ್ಧಿಗಳು! ಜಗದೀಶ್​ ಮತ್ತು ರಂಜಿತ್​ ಔಟ್​ 

publive-image

ಸಂಯುಕ್ತಾ ಹೆಗಡೆ ಕೂಡ ಔಟ್​

ಕಿರಿಕ್​ ಪಾರ್ಟಿ, ಕಾಲೇಜು ಕುಮಾರ ಸಿನಿಮಾ ನಟಿ ಬಿಗ್​ ಬಾಸ್ ಸೀಸನ್​​ -5ರಲ್ಲಿ ಭಾಗವಹಿಸಿದ್ದರು. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಮನೆಯೊಳಕ್ಕೆ ಹೋದ ನಟಿಯು ಸಮೀರ್​ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಕಿಕ್​ ಔಟ್​ ಆಗಿದ್ದರು. ಮುಟ್ಟಿದ್ರೆ ತಟ್ಬಿಟ್ತೀನಿ ಎಂದವರು ನೇರವಾಗಿ ಅವರ ಕೆನ್ನೆಗೆ ಬಾರಿಸಿದ್ದರು. ಇದೇ ವಿಚಾರಕ್ಕೆ ಅವರನ್ನು ಮನೆಯಿಂದ ಕಿಕ್​ ಔಟ್​ ಮಾಡಲಾಗಿತ್ತು.

ಇದನ್ನೂ ಓದಿ: ಬಿಗ್​ಬಾಸ್​ ಮನೆಯಿಂದ ರಂಜಿತ್, ಜಗದೀಶ್ ಔಟ್​; ಗಲಾಟೆಗೆ ಕಾರಣ ಇಲ್ಲಿದೆ..!

Advertisment

publive-image

ಜಗದೀಶ್​ ಮತ್ತ ರಂಜಿತ್​ ಕಿಕ್​ ಔಟ್​

ಬಿಗ್​ ಬಾಸ್​​ ಸೀಸನ್​ 11 ಕಾರ್ಯಕ್ರಮದಿಂದ ಲಾಯರ್​ ಜಗದೀಶ್​ ಮತ್ತು ರಂಜಿತ್​ ​ಹೊರಬಂದಿದ್ದಾರೆ. ಕಿಚ್ಚ ನಿರೂಪಣೆಯ ರಿಯಾಲಿಟಿ ಶೋದಲ್ಲಿ ಹೊಡೆದಾಡಿಕೊಂಡ ಹಿನ್ನೆಲೆ ಇಬ್ಬರನ್ನು ಬಿಗ್​ಬಾಸ್​ ಮನೆಯಿಂದ ಹೊರ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment