BIGG BOSS: ಬಿಗ್​ಬಾಸ್‌ಗೆ ಹೋಗಿ ಬಂದ್ಮೇಲೆ ಬದುಕು ಬದಲಾಗುತ್ತಾ? ಸೀಸನ್‌ 10 ಸ್ಪರ್ಧಿಗಳು ಹೇಳಿದ್ದೇನು?

author-image
Veena Gangani
Updated On
BBK10: ಬಿಗ್​​ಬಾಸ್​ನಲ್ಲಿ ಯಾರನ್ನಾದ್ರೂ ಹೊಡೆದು ಆಚೆ ಬರ್ತಿದ್ದೆ; ರಕ್ಷಕ ಬುಲೆಟ್​​ ಹೀಗೆ ಹೇಳಿದ್ದೇಕೆ?
Advertisment
  • ಒಂದೇ ಶೋ ಒಂದೇ ಟೇಬಲ್​ನಲ್ಲಿ ಬಿಗ್​​ಬಾಸ್​ ಕಂಟೆಸ್ಟಂಟ್​!
  • ಬಿಗ್​ಬಾಸ್​​ ಮನೆಯಲ್ಲಿ ಉಳಿದುಕೊಂಡ ಎಂಟು ಸ್ಪರ್ಧಿಗಳು
  • ಬಿಗ್​ಬಾಸ್​ಗೆ ಹೋದ್ಮೇಲೆ ಸ್ಪರ್ಧಿಗಳ ಬದುಕು ಬದಲಾಗುತ್ತಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ 17 ಸ್ಪರ್ಧಿಗಳ ಪೈಕಿ ನಮ್ರತಾ ಗೌಡ, ತನಿಷಾ, ಡ್ರೋನ್​ ಪ್ರಾತಾಪ್​​, ವಿನಯ್​ , ಸಂಗೀತಾ, ಕಾರ್ತಿಕ್​, ವರ್ತೂರು ಸಂತೋಷ್​​ ಹಾಗೂ ತುಕಾಲಿ ಸಂತೋಷ್​ ಉಳಿದುಕೊಂಡಿದ್ದಾರೆ.

ಬಿಗ್​ಬಾಸ್​ ಶುರುವಾದ ಮೊದಲ ವಾರದಿಂದ ಒಬ್ಬೊಬ್ಬರಾಗಿ ಆಚೆ ಹೋಗುತ್ತಿದ್ದರು. ಅವರ ಪೈಕಿ ಈಗ ಬಿಗ್​ಬಾಸ್​ನಿಂದ ಎಲಿಮಿನೇಟ್​ ಆದ 5 ಸ್ಪರ್ಧಿಗಳು ನ್ಯೂಸ್​​ಫಸ್ಟ್​ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಸ್ನೇಹಿತ್​​, ರಕ್ಷಕ್​​ ಬುಲೆಟ್​, ನೀತು, ಪವಿ ಹಾಗೂ ಮೈಕಲ್​ ನ್ಯೂಸ್​​ಫಸ್ಟ್​​ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್​ಬಾಸ್​​ 5 ಸ್ಪರ್ಧಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.

publive-image

ಇನ್ನು, ನ್ಯೂಸ್​​ಫಸ್ಟ್​​ ಸಂದರ್ಶನದಲ್ಲಿ ಭಾಗಿಯಾದ್ದ 5 ಬಿಗ್​ಬಾಸ್​​ ಸ್ಪರ್ಧಿಗಳಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲಿ ಬಿಗ್​ಬಾಸ್​ಗೆ ಹೋದ್ಮೇಲೆ ಸ್ಪರ್ಧಿಗಳ ಬದುಕು ಬದಲಾಗುತ್ತಾ?ಎಂಬ ಪ್ರಶ್ನೆಗೆ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಉತ್ತರ ಕೊಟ್ಟಿದ್ದು ಹೀಗೆ. ಈ ಪ್ರಶ್ನೆ ಉತ್ತರಿಸಿದ ರಕ್ಷಕ ಬುಲೆಟ್​, ಹೌದು ಬಿಗ್​ಬಾಸ್​ನಿಂದ ಹೊರ ಬಂದ ಮೇಲೆ ಕೆಲವು ಸ್ಪರ್ಧಿಗಳ ಬದುಕು ಬದಲಾಗುತ್ತೆ. ಬಿಗ್​ಬಾಸ್​​ ಎಲ್ಲ ಸ್ಪರ್ಧಿಗಳಿಗೆ ಬಂದು ಒಳ್ಳೆಯ ಹೆಸರನ್ನು ತಂದು ಕೊಟ್ಟಿದೆ ಎಂದು ಹೇಳಿದ್ದಾರೆ. ಉಳಿದ ಸ್ಪರ್ಧಿಗಳು ಕೂಡ ಬಿಗ್​ಬಾಸ್​ ಒಂದು ಒಳ್ಳೆಯ ವೇದಿಕೆ. ಅದಕ್ಕೆ ಅರ್ಹ ಇದ್ದವರು ಮಾತ್ರ ಹೋಗಿ ಜಯಶಾಲಿ ಆಗುತ್ತಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment