/newsfirstlive-kannada/media/post_attachments/wp-content/uploads/2025/05/drone-prathap10.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಮೂಲಕ ಸಖತ್ ಫೇಮಸ್ ಆಗಿದ್ದಾರೆ ಡ್ರೋನ್ ಪ್ರತಾಪ್. ಈಗಂತೂ ಡ್ರೋನ್ ಪ್ರತಾಪ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ.
ಇದನ್ನೂ ಓದಿ: ಇವತ್ತೇ SSLC ಫಲಿತಾಂಶ ಪ್ರಕಟ; ಮಕ್ಕಳೇ ನಿಮ್ಮ ರಿಸಲ್ಟ್ ನೋಡೋದು ಹೇಗೆ..?
ಸದ್ಯ ಬಿಗ್ಬಾಸ್ ಮುಕ್ತಾಯದ ಬೆನ್ನಲ್ಲೇ ಡ್ರೋನ್ ಪ್ರತಾಪ್ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟು ಕಮಾಲ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ.
ಡ್ರೋನ್ ಪ್ರತಾಪ್ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದವರು. ಈಗ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನೆಟ್ಕಲ್ ಗ್ರಾಮದಲ್ಲಿರೋ ಮನೆಯನ್ನು ಪ್ರೋಮೋ ಮೂಲಕ ತೋರಿಸಿದ್ದಾರೆ. ಅದರಲ್ಲಿ ತಾವು ಕಟ್ಟಿದ ಮನೆಯನ್ನು ತೋರಿಸಿದ್ದಾರೆ.
ಅಲ್ಲದೇ ಡ್ರೋನ್ ಪ್ರತಾಪ್ ಊರಲ್ಲಿ ಈಗಲೂ ಕರೆಂಟ್ ಇಲ್ಲ ಎಂದು ಅವರ ತಂದೆ ಬೇಸರ ಹೊರ ಹಾಕಿದ್ದಾರೆ. ಹಾಗೂ ತಾವು ಜೀವನ ಮಾಡುತ್ತಿರುವುದು ರೇಷ್ಮೆ ಬೆಳೆಯುವುದರಿಂದ ಎಂದು ಹೇಳಿಕೊಂಡಿದ್ದಾರೆ.
ಹಳ್ಳಿ ಜೀವನ ಅಂದ್ರೆ ಶುದ್ಧ ಗಾಳಿ, ಮುಗ್ಧ ಮತ್ತು ಶುದ್ಧ ಮನಸ್ಸಿನ ಜನ. ಡ್ರೋನ್ ಪ್ರತಾಪ್ ಬದುಕಿನ ಒಂದು ಭಾಗ ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ