/newsfirstlive-kannada/media/post_attachments/wp-content/uploads/2024/04/namrutha1.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಇದೇ ಖುಷಿಯಲ್ಲಿದ್ದ ನಮ್ರತಾ ಗೌಡ ಅವರು ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಹೌದು, ಇಂದು ಬಿಗ್ಬಾಸ್ ಬೆಡಗಿ ನಮ್ರತಾ ಗೌಡ ಅವರ ಹುಟ್ಟು ಹಬ್ಬ.
ಹೀಗಾಗಿ ನಮ್ರತಾ ಗೌಡ ಅವರ ಅಭಿಮಾನಿಗಳು ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಹುಟ್ಟು ಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ. ಇದೀಗ ನಮ್ರತಾ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಕಾರು ಖರೀದಿಸಿದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ನಮ್ರತಾ ಗೌಡ ತಮ್ಮ ಕುಟುಂಬಸ್ಥರ ಜತೆ ಹೋಗಿ ನೂತನ ಕಾರು ಖರೀದಿ ಮಾಡಿದ್ದಾರೆ.
ಇದನ್ನೂ ಓದಿ:ಕಹಿ ಘಟನೆ ನೆನೆದು ಕಣ್ಣೀರಿಟ್ಟ ನಟಿ ಬೇಬಿ ಇಂದಿರಾ; ಆ ದಿನಗಳ ಬಗ್ಗೆ ಹೇಳಿದ್ದೇನು?
View this post on Instagram
ಇನ್ನು ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ನೋಡಿದ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ನಮ್ರತಾ ಗೌಡ ಅವರು ಖರೀದಿಸಿದ ಕಾರಿನ ಬೆಲೆ 9.28 ಲಕ್ಷ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ