/newsfirstlive-kannada/media/post_attachments/wp-content/uploads/2024/08/NAMRUTHA.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಮತ್ತೆ ಸಖತ್​ ಸುದ್ದಿಯಾಗಿದ್ದಾರೆ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿಯೋ ಕಿರುತೆರೆ ನಟಿ ನಮ್ರತಾ ಗೌಡ ಡಿಫರೆಂಟ್ ಫೋಟೋಶೂಟ್​ ಮೂಲಕ ಫ್ಯಾನ್ಸ್​ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/NAMRUTHA2-1.jpg)
ಹೌದು, ಇಷ್ಟು ದಿನ ಸೀರೆ, ಸಿಂಗಲ್​ ಪಿಸ್​​ನಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದ ನಮ್ರತಾ ಗೌಡ ಇದೀಗ ಒಂಥರಾ ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೇಸರಿ ಬಣ್ಣದ ಹಾಫ್​​ ಸಾರಿಯನ್ನು ತೊಟ್ಟ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಮ್ರತಾ ಗೌಡ ಶೇರ್ ಮಾಡಿಕೊಂಡ ಫೋಟೋಸ್​ಗೆ ಫ್ಯಾನ್ಸ್ ಮನಸೋತಿದ್ದಾರೆ.
View this post on Instagram
ಪ್ರತಿ ದಿನ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರೋ ನಮ್ರತಾ ಗೌಡ ಅವರು ಮುಂದೆ ಬರೋ ದೊಡ್ಡ ಆಫರ್​ಗಾಗಿ ಕಾಯುತ್ತಿದ್ದಾರೆ. ಸೀರಿಯಲ್​ ಹಾಗೂ ಬಿಗ್​ಬಾಸ್​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು. ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಌಕ್ಟಿವ್ ಆಗಿದ್ದಾರೆ. ಸದ್ಯ ಹೊಸದಾಗಿ ಶೇರ್ ಮಾಡಿಕೊಂಡ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/NAMRUTHA2-1.jpg)
ಜೊತೆಗೆ ಕವಿಯ ಕಲ್ಪನೆಗೆ ನಿಲುಕದವಳೇ , ಪ್ರತಿ ಪದದಲ್ಲಿ ಅಡಗಿರುವ ನಿನ್ನನು ಏನೆಂದು ವರ್ಣಿಸಲಿ, ಸೋ ಬ್ಯೂಟಿಫುಲ್​ ನಮ್ಮು, ನಮ್ಮು ಏನಾದ್ರೂ ವಿಶೇಷ ಉಂಟಾ ಅಂತ ಕಾಮೆಂಟ್ಸ್ ಹಾಕಿದ್ದಾರೆ. ಇನ್ನು, ಮೊನ್ನೆಯಷ್ಟೇ ಕ್ಲಿಕ್ಕಿಸಿಕೊಂಡ ಫೋಟೋದಲ್ಲೂ ಕಿರುತೆರೆ ನಟಿ ಸಖತ್​ ಆಗಿ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಗೌನ್​ನಲ್ಲಿ ವಿಲನ್​ ರೀತಿಯಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದರು. ಆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us