newsfirstkannada.com

VIDEO: ಬಂಡೀಪುರಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಸಿಂಹಿಣಿ.. ಸಫಾರಿ ಗೆಟಪ್​ನಲ್ಲಿ ಸಂಗೀತಾ ಮಾಡಿದ್ದೇನು?

Share :

Published April 29, 2024 at 6:18pm

    ಮೈಸೂರಿನ ಬಂಡೀಪುರಕ್ಕೆ ಭೇಟಿ ಕೊಟ್ಟ ಬಿಗ್​ಬಾಸ್​ ಚಲುವೆ

    ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದೇ ರೀತಿ ಸಂಗೀತಾ ಶೃಂಗೇರಿ ಅವರು ಕೂಡ ಸುದ್ದಿಯಲ್ಲಿ ಇರುವಂತ ನಟಿ. ಬಿಗ್​ಬಾಸ್​ ಸೀಸನ್​ 10ರಿಂದ ಅತಿ ಹೆಚ್ಚು ಫ್ಯಾನ್ಸ್​​ಗಳನ್ನು ಗಳಿಸಿಕೊಂಡಿದ್ದಾರೆ ನಟಿ ಸಂಗೀತಾ. ಬಿಗ್​ಬಾಸ್​ ಮೂಲಕ ಸಿಂಹಿಣಿ ಅಂತಲೇ ಖ್ಯಾತಿ ಪಡೆದಿರೋ ಸಂಗೀತಾ ಶೃಂಗೇರಿ ಅವರು ವಿಶೇಷವಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಮದುವೆಯ ಗೌನ್​ಗೆ ಹೊಸ ರೂಪ ಕೊಟ್ಟ ಸೌತ್​ ಸ್ಯಾಮ್‌; ಫ್ಯಾನ್ಸ್​ ಫುಲ್​ ಶಾಕ್​.. ಕಾರಣವೇನು?

ಇದೀಗ ಬಿಗ್​ಬಾಸ್​ ಬೆಡಗಿ ಮೈಸೂರಿನ ಬಂಡೀಪುರಕ್ಕೆ ತೆರಳಿದ್ದಾರೆ. ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ಕೊಟ್ಟು ಒಂದು ಗಂಟೆಗೂ ಹೆಚ್ಚು ಕಾಲ ಸಫಾರಿ ಮಾಡಿದ್ದಾರೆ. ಅದಕ್ಕಾಗಿಯೇ ಸಫಾರಿ ಉಡುಗೆ ತೊಟ್ಟು ಜೀಪ್​ನಲ್ಲಿ ಸುತ್ತಲಿನ ದೃಶ್ಯಗಳನ್ನು ನೋಡುತ್ತಾ ಅಭಯಾರಣ್ಯದ ಸುತ್ತು ಹಾಕಿದ್ದಾರೆ. ಇದೇ ವಿಡಿಯೋವನ್ನು ನಟಿ ಸಂಗೀತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅತ್ಯಂತ ಅದ್ಭುತವಾದ ಸಫಾರಿ ಅನುಭವ ಇದು. ಒಂದು ಗಂಟೆಗೂ ಹೆಚ್ಚು ಕಾಲ ಹುಲಿಗಳನ್ನು ನೋಡುವುದೇ ಒಂದು ಆನಂದ ಎಂದು ಬರೆದುಕೊಂಡಿದ್ದಾರೆ.

ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕರ್ನಾಟಕ ಸಿಂಹಿಣಿ, ಸಿಂಹಿಣಿ ಹುಲಿಯನ್ನು ಸೆರೆ ಹಿಡಿಯುವ ದೃಶ್ಯ ಅದ್ಭುತವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ಬಿಗ್​ಬಾಸ್​ನಿಂದ ಹೊರಬಂದ ಕೂಡಲೇ ಸಂಗೀತಾ ಶೃಂಗೇರಿ ನಟನೆಯ ಮಾರಿಗೋಲ್ಡ್ ಸಿನಿಮಾ ರಿಲೀಸ್​​ ಆಗಿತ್ತು. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ ನಾಯಕನಾಗಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಂಡೀಪುರಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಸಿಂಹಿಣಿ.. ಸಫಾರಿ ಗೆಟಪ್​ನಲ್ಲಿ ಸಂಗೀತಾ ಮಾಡಿದ್ದೇನು?

https://newsfirstlive.com/wp-content/uploads/2024/04/safari2.jpg

Load More