/newsfirstlive-kannada/media/post_attachments/wp-content/uploads/2024/10/thanisha1.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಮಾಜಿ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಹೊಸ ಬಿಗ್​ಬಾಸ್​ನಿಂದ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ತನಿಷಾ ಈಗ ಹೊಸ ಕಾರಿನ ಒಡತಿಯಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/10/thanisha2.jpg)
ಹೌದು, ಈ ಹಿಂದೆ ವಿಜಯನಗರ ಕ್ಲಬ್​ ರೋಡ್​ನಲ್ಲಿ ಹೊಸ ಸಿಲ್ವರ್ ಜ್ಯುವೆಲರಿ ಶಾಪ್​ವೊಂದನ್ನು ಆರಂಭ ಮಾಡಿದ್ದಾರೆ. ಇದಾದ ಬಳಿಕ ಮತ್ತೊಂದು ಬಸವೇಶ್ವರನಗರದಲ್ಲೂ ಶಾಪ್ ಉದ್ಘಾಟನೆ ಮಾಡಿದ್ದರು. ಇದೀಗ ನಟಿ ತನಿಷಾ ಕುಪ್ಪಂಡ ಅವರು ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/thanisha4.jpg)
ಶೋ ರೂಂಗೆ ಹೋಗಿ ಲ್ಯಾಂಡ್ ರೋವರ್ ಡಿಸ್ಕವರಿ (land rover discovery) ಕಾರನ್ನು ಖರೀದಿ ಮಾಡಿದ್ದಾರೆ. ಇದರ ಜೊತೆಗೆ ಕನಸು ನನಸಾದ ಸಮಯ, ಸಂತೋಷ ಹೃದಯ ತುಂಬಿದ ಸಮಯ, ಮನಸು ಕುಣಿದಾಡಿದ ಸಮಯ, ನಿಮ್ಮೆಲ್ಲರ ಪ್ರೀತಿ ಆಶೀರ್ವಾದಕ್ಕೆ ಈ ಜೀವ ವಿಸ್ಮಯ ಅಂತ ಬರೆದುಕೊಂಡಿದ್ದಾರೆ.
View this post on Instagram
ಇನ್ನು ಇದೇ ವಿಡಿಯೋವನ್ನು ನಟಿ ತನಿಷಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ನಟ ನಟಿಯರು ಹಾಗೂ ಅಭಿಮಾನಿಗಳು ತನಿಷಾ ಕುಪ್ಪಂಡಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಇನ್ನು ನಟಿ ತನಿಷಾ ಕುಪ್ಪಂಡ ಪರ್ಚೆಸ್ ಮಾಡಿದ ಹೊಸ ಕಾರಿನ ಬೆಲೆಯೂ ಬರೋಬ್ಬರು 1 ಕೋಟಿ ರೂಪಾಯಿದ್ದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us