/newsfirstlive-kannada/media/post_attachments/wp-content/uploads/2025/05/michal.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 10ರ ಮಾಜಿ ಸ್ಪರ್ಧಿ ಮೈಕಲ್​ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಮಣ್ಣಿನ ಮಗ, ಕನ್ನಡದ ಕಂಡ ಅಂತಲೇ ಫೇಮಸ್​ ಆಗಿರೋ ಮೈಕಲ್​ ಹೀಗೆ ದಿಢೀರ್​ ಅಂತ ಇನ್​ಸ್ಟಾಗ್ರಾಮ್​ ಬಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಒಂದು ಕಾರಣ ಕೂಡ ಇದೆ.
ಇದನ್ನೂ ಓದಿ: ಜಸ್ಟ್ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್ ಸಿನಿಮಾನೂ ಮೀರಿಸಿದ ಸ್ಟೋರಿ!
/newsfirstlive-kannada/media/post_attachments/wp-content/uploads/2024/01/BIG_BOSS_MICHEL_1.jpg)
ಹೌದು, ಬಿಗ್​ಬಾಸ್​ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದರು ಮೈಕಲ್ ಅಜಯ್​. ​ಮೈಕಲ್​ ಅವರು ಬಿಗ್​​ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್​ ಆಗಿದ್ದರು. ಅದಕ್ಕೆ ಮುಖ್ಯ ಕಾರಣವೇ ಅವರ ಸ್ಟೈಲ್ ಹಾಗೂ ಮ್ಯಾನರಿಸಂ. ಅಷ್ಟೇ ಅಲ್ಲದೇ ಮೈಕಲ್ ಅಜಯ್ ಬಿಗ್ ಮನೆಯ ಟಾಸ್ಕ್ ಮಾಸ್ಟರ್ ಎಂದೇ ಫೇಮ್ ಪಡೆದುಕೊಂಡಿದ್ದರು. ಒಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಬಂದಿದ್ದರು.
/newsfirstlive-kannada/media/post_attachments/wp-content/uploads/2024/02/michael-1.jpg)
ಇನ್ನೂ, ಮೈಕಲ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅಳುತ್ತಿರೋ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಬ್ರೇಕಪ್ ಎಫೆಕ್ಟ್ ಅಂತ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಂದ್ರೆ ಮೈಕಲ್​ ಅವರಿಗೆ ವಲ್​ ಬ್ರೇಕಪ್ ಆಗಿದೆ. ಈ ಹಿಂದೆ ಯ್ಯೂಟೂಬ್ ಚಾನೆಲ್​​ನಲ್ಲಿ ತನ್ನ ಗರ್ಲ್ ಫ್ರೆಂಡ್​ ಜೊತೆ ಟ್ರೆಕ್ಕಿಂಗ್ ಹೋಗುವ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಈಕೆನೇ ನನ್ನ ಗರ್ಲ್ ಫ್ರೆಂಡ್​ ಅಂತ ಕೂಡ ಹೇಳಿಕೊಂಡಿದ್ದರು. ಆದ್ರೆ ಇದೀಗ ಈ ಇಬ್ಬರ ಮಧ್ಯೆ ಲವ್​ ಬ್ರೇಕಪ್​ ಉಂಟಾಗಿದೆ. ಈ ಬಗ್ಗೆ ಖುದ್ದು ಮೈಕಲ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಇದೇ ವಿಡಿಯೋ ನೋಡಿದ ಅಭಿಮಾನಿಗಳು ಮೈಕಲ್​ಗೆ ಧೈರ್ಯ ತುಂಬಿದ್ದಾರೆ.
View this post on Instagram
ಬಿಗ್​ಬಾಸ್ ಆರಂಭದಲ್ಲಿ ಮೈಕಲ್ ಅಜಯ್ ಯಾರೆಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರೂ ಕೂಡ ಕರ್ನಾಟಕದಲ್ಲಿ ಅವರಿಗೆ ಸಂಬಂಧಿಕರು ಇದ್ದರು.​ ಬಿಗ್​ಬಾಸ್​ ಮನೆಯಲ್ಲಿದ್ದಾಗ ದಿನ ಕಳೆದಂತೆ ಅವರು ಕನ್ನಡದಲ್ಲಿ ಮಾತಾಡಲು ಶುರು ಮಾಡಿದ್ದರು. ಬಳಿಕ ಕನ್ನಡವನ್ನು ಚೆನ್ನಾಗಿ ಮಾತಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಈ ಮೂಲಕ ಕನ್ನಡದ ಕಂದ ಎಂಬ ಹೆಸರನ್ನು ಪಡೆದುಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us