/newsfirstlive-kannada/media/post_attachments/wp-content/uploads/2024/07/bigg-boss2.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್ಬಾಸ್ ಮುಗಿದ ಬಳಿಕ ಸ್ಪರ್ಧಿಗಳು ಆಗಾಗ ಭೇಟಿಯಾಗುತ್ತಲೇ ಇರುತ್ತಿದ್ದರು. ಆದರೆ ಈ ಬಾರಿ ಎಲ್ಲಾ ಸ್ಪರ್ಧಿಗಳು ಭೇಟಿಯಾಗಿದ್ದು ತುಂಬಾನೇ ಸ್ಪೆಷಲ್ ಆಗಿತ್ತು.
ಇದನ್ನೂ ಓದಿ:ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ.. ನಾಯಕತ್ವದ ಬಗ್ಗೆ ಸೂರ್ಯ ಕುಮಾರ್ ಏನಂದ್ರು ಗೊತ್ತಾ?
ಹೌದು, ಬಿಗ್ಬಾಸ್ ಖ್ಯಾತಿಯ ನಟಿ ಸಿರಿ ಅವರು ಇತ್ತೀಚೆಗೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚಿಕ್ಕಬಳ್ಳಾಪುರದ ನಂದಿ ಗ್ರಾಮದ ದೇವಸ್ಥಾನದಲ್ಲಿ ಕುಟುಂಬ ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಜೂನ್ 13 ರಂದು ಸಪ್ತಪದಿ ತುಳಿದಿದ್ದರು ಸಿರಿ. ನಟಿ ಸಿರಿ ಹಾಗೂ ಪ್ರಭಾಕರ್ ಬೋರೆಗೌಡ ದಂಪತಿಗೆ ಶುಭಾಶಯಗಳು ಮಾಹಾಪೂರವೇ ಹರಿದು ಬಂದಿತ್ತು. ಜೊತೆಗೆ ನಟಿ ಅವರು ವರಿಸಿದ್ದ ವಧು ಯಾರು ಎಂಬೆಲ್ಲಾ ಪ್ರಶ್ನೆಗಳು ಮೂಡಿ ಬಂದಿದ್ದವು. ಹೀಗಾಗಿ ಬಿಗ್ಬಾಸ್ ಸ್ಪರ್ಧಿಗಳಿಗಾಗಿಯೇ ನಟಿ ಸಿರಿ ಪ್ರಭಾಕರ್ ಅವರು ಪಾರ್ಟಿವೊಂದನ್ನು ಅರೆಂಜ್ ಮಾಡಿದ್ದರು. ಬೆಂಗಳೂರಿನ ಹಾಲ್ವೊಂದರಲ್ಲಿ ಬಿಗ್ಬಾಸ್ ಮಾಜಿ ಸ್ಪರ್ಧಿಗಳು ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಇನ್ನು, ನವ ಜೋಡಿಗೆ ಶುಭಕೋರಲು ಬಿಗ್ಬಾಸ್ನ ಆಲ್ಮೋಸ್ಟ್ ಎಲ್ಲಾ ಸ್ಪರ್ಧಿಗಳು ಪಾರ್ಟಿ ಹಾಲ್ನಲ್ಲಿ ಹಾಜರಾಗಿದ್ದರು. ಕಾರ್ತಿಕ್ ಗೌಡ, ವಿನಯ್ ಗೌಡ, ನೀತು ವನಜಾಕ್ಷಿ, ಪವಿ, ಸ್ನೇಹಿತ್ ಗೌಡ, ನಮ್ರತಾ ಗೌಡ, ತನಿಷಾ ಕುಪ್ಪಂಡ. ಆದರೆ ಸಂಗೀತಾ ಶೃಂಗೇರಿ ಬದಲು ಅವರ ಅಣ್ಣ ಹಾಗೂ ಅತ್ತಿಗೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ಅಕ್ಕನ ರೀತಿ ಎಲ್ಲರಿಗೂ ಖುಷಿ ಹಂಚಿದ ಸಿರಿ ಅಕ್ಕನ ಮದುವೆ ಪಾರ್ಟಿನ ಸಖತ್ ಆಗಿಯೇ ಎಂಜಾಯ್ ಮಾಡಿದ್ದಾರೆ ಬಿಗ್ ಮಂದಿ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಒಂದೇ ಕಡೆ ಬಿಗ್ಬಾಸ್ ಸ್ಪರ್ಧಿಗಳನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ