newsfirstkannada.com

ವಿನಯ್​​ಗೆ ಕೊನೆಯ ಸ್ಥಾನ ಕೊಟ್ಟ ಪ್ರತಾಪ್​.. ಫಿನಾಲೆ ವಾರದಲ್ಲಿ ಡ್ರೋನ್​ ಪಂಚ್​ ಮೇಲೆ ಪಂಚ್​

Share :

Published January 23, 2024 at 2:30pm

  ಫಿನಾಲೆ ವಾರದಲ್ಲಿದೆ ಬಿಗ್​ ಬಾಸ್​ ಸೀಸನ್​ 10

  ಟಾಪ್​ ಸ್ಪರ್ಧಿಯಾಗಲು ನಡೆಯುತ್ತಿದೆ ಪ್ರಬಲ ಪೈಪೋಟಿ

  ವಿನಯ್​ ಮೇಲೆ ಡ್ರೋನ್​ ಅಟ್ಯಾಕ್.. ಮುಂದೇನಾಯ್ತು?​

ಬಿಗ್​​ ಬಾಸ್​ ಸೀಸನ್​ 10 ಫಿನಾಲೆ ವಾರದಲ್ಲಿದೆ. ಕೊನೆಯ ವಾರದಲ್ಲಿ ಸ್ಪರ್ಧಿಗಳ ಆಟದ ಜೊತೆಗೆ ಅಬ್ಬರವು ಜೋರಾಗಿಯೇ ಇದೆ. ನಿನ್ನೆಯ ಸಂಚಿಕೆಯಲ್ಲಿ ಮನೆಯ ಸ್ಪರ್ಧಿಗಳು ತಮ್ಮ ಸ್ಥಾನ ಪಲ್ಲಟವನ್ನ ತಾವೇ ಆಯ್ದುಕೊಂಡು ನಿಲ್ಲಬೇಕು ಎಂಬ ಟಾಸ್ಕ್​ ಅನ್ನು ಬಿಗ್​ ಬಾಸ್​ ನೀಡಿದ್ದರು. ಅದರಂತೆಯೇ ವಿನಯ್​ ಗೌಡರನ್ನು ಡ್ರೋನ್​ ಪ್ರತಾಪ್​ನ ಕೊನೆಯ ಸ್ಥಾನದವರು ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಕೊನೆಯ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

ಪ್ರತಾಪ್​ ಕೊಟ್ಟ ಸ್ಥಾನಕ್ಕೆ ಸಿಟ್ಟಿಗೆದ್ದ ವಿನಯ್ ಮಾತಿನ ಯುದ್ಧ ಸಾರಿದ್ದಾರೆ. ನನ್ನನ್ನೇ ಯಾವಾಗಲೂ ಯಾಕೆ ಟಾರ್ಗೆಟ್ ಮಾಡ್ತೀಯಾ ಎಂದು ಕೇಳಿದ್ದಾರೆ. ಬಳಿಕ ನಾನೇನು ಅಂತ ಅಸಭ್ಯ ವರ್ತನೆ ಮಾಡಿದ್ದೀನಿ? ಬಳಸೋ ಪದಗಳು ಎಲ್ಲಿ ತಪ್ಪಿದೆ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಾಪ್ ಬಳಸೋ ಪದಗಳಲ್ಲಿ ಹಿಡಿತ ಇಲ್ಲ ಅಂದಿದ್ದು ಎಂದು ಮರು ಉತ್ತರ ನೀಡಿದ್ದಾರೆ.

ಇಷ್ಟಕ್ಕೆ ನಿಲ್ಲದ ವಿನಯ್​ ಮಾತು, ನಾನ್ ಹೇಗೆ ಮಾತಾಡ್ಬೇಕು ಅನ್ನೋದನ್ನ ನಾನು ನಿನ್ನತ್ರ ಕೇಳಿ ತಿಳ್ಕೋಬೇಕಾ?. ನಿನ್ಗೆ ಏನೋ ಯೋಗ್ಯತೆ ಇದೆ ಎಂದು ಪ್ರತಾಪ್ ಮೇಲೆ ವಿನಯ್ ಕೋಪಗೊಂಡಿದ್ಧಾರೆ.

ವಿನಯ್​ ಮಾತಿಗೆ ಡ್ರೋನ್​ ಪ್ರತಾಪ್ ಯೋಗ್ಯತೆ ಬಗ್ಗೆ ಎಲ್ಲಾ ಮಾತಾಡ್ಬೇಡಿ ಎಂದು ತಿರುಗೇಟು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಕೊನೆಯ ವಾರದಲ್ಲಿ ಪ್ರತಾಪ್​ನ ವರಸೆ ಬದಲಾಗಿದ್ದು ವಿನಯ್​​ನ ಟಾರ್ಗೆಟ್ ಮಾಡಿದ್ಧಾರೆ. ಫಿನಾಲೆ ವಾರದಲ್ಲಿ ಪ್ರಬಲ ಪೈಪೋಟಿ ನಡೆಯುತ್ತಿದ್ದು, ಗೆಲುವಿಗಾಗಿ ಎಲ್ಲಾ ಸ್ಪರ್ಧಿಗಳು ಜೊತೆಗೆ ಪ್ರತಾಪ್​ ಕೂಡ ಪಂಚ್​ ಮೇಲೆ ಪಂಚ್​ ಕೊಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿನಯ್​​ಗೆ ಕೊನೆಯ ಸ್ಥಾನ ಕೊಟ್ಟ ಪ್ರತಾಪ್​.. ಫಿನಾಲೆ ವಾರದಲ್ಲಿ ಡ್ರೋನ್​ ಪಂಚ್​ ಮೇಲೆ ಪಂಚ್​

https://newsfirstlive.com/wp-content/uploads/2024/01/BBK10-3.jpg

Load More