newsfirstkannada.com

BBK10: ಇಂದು ಎಲಿಮಿನೇಟ್​​ ಆಗಲಿದ್ದಾರೆ ಈ ಸ್ಪರ್ಧಿಗಳು! ವಿನ್ನರ್​ ಅಕೌಂಟ್​ ಸೇರಲಿರೋ ಕಾಂಚಾಣ ಎಷ್ಟು ಗೊತ್ತಾ?

Share :

Published January 27, 2024 at 9:00am

    ಬಿಗ್​ ಬಾಸ್​ ಸೀಸನ್​ 10ಗೆ ತೆರೆ ಎಳೆಯುವ ಸಮಯ

    ಇಂದು ಮತ್ತು ನಾಳೆ ನಡೆಯಲಿದೆ ಗ್ರಾಂಡ್​ ಫಿನಾಲೆ

    ಇಂದು ಮನೆಯಿಂದ ಹೊರ ಹೋಗೋದು ಪಕ್ಕಾ ಇವರೇನಾ?

ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​​ ಸೀಸನ್​ 10 ಕಾರ್ಯಕ್ರಮಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ಇಂದು ಮತ್ತು ನಾಳೆ ಗ್ರಾಂಡ್​​ ಫಿನಾಲೆ ನಡೆಯುತ್ತಿದೆ. ವೀಕ್ಷಕರಂತೂ ಗ್ರಾಂಡ್​ ಫಿನಾಳೆ ಕಾಣಲು ಕುತೂಹಲದಿಂದ ಕಾಯುತ್ತಿದ್ದಾರೆ.

100 ದಿನಗಳನ್ನು ದಾಟಿ ಪ್ರಸಾರವಾದ ಬಿಗ್​ ಬಾಸ್​ ಸೀಸನ್​ 10ನಲ್ಲಿ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇಂದು ಮತ್ತು ನಾಳೆ ಫಿನಾಲೆ ಕಾರ್ಯಕ್ರಮ ನಡೆಯಲಿದ್ದು, ಕಿಚ್ಚ ಸುದೀಪ್​ ಬಿಗ್​ ಬಾಸ್ ಸೀಸನ್​ 10​ ವಿನ್ನರ್​ ಯಾರೆಂದು ಹೇಳುವ ಸಮಯ ಹತ್ರ ಬಂದಿದೆ.

ಸದ್ಯ ದೊಡ್ಮನೆಯಲ್ಲಿ ಆರು ಸ್ಪರ್ಧಿಗಳು ಉಳಿದಕೊಂಡಿದ್ದಾರೆ. ತುಕಾಲಿ ಸಂತೋಷ್​, ಡ್ರೋನ್​ ಪ್ರತಾಪ್​, ಕಾರ್ತಿಕ್​, ವರ್ತೂರ್​ ಸಂತೋಷ್​, ಸಂಗೀತಾ ಶೃಂಗೇರಿ, ವಿನಯ್ ಗೌಡ ಮನೆಯಲ್ಲಿದ್ದಾರೆ. ಇಂದು ನಡೆಯುವ ಫಿನಾಲೆ ವೀಕ್​ನಲ್ಲಿ ಒಂದಿಷ್ಟು ಸ್ಪರ್ಧಿಗಳು ಮನೆಯಿಂದ ಔಟ್​ ಆಗಲಿದ್ದಾರೆ.

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಇಂದು ಮೂವರು ಮನೆಯಿಂದ ಹೊರಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿನ್ನರ್​ ಸಿಗೋ ಮೊತ್ತವೆಷ್ಟು?

ಬಿಗ್​ ಬಾಸ್​ ಸೀಸನ್​ 10 ವಿನ್ನರ್​ ಯಾರೆಂಬ ಕುತೂಹಲತೆ ಪ್ರೇಕ್ಷಕರನ ಹಾಗೆಯೇ ಉಳಿದುಕೊಂಡಿದೆ. ವಿನಯ್​ ಗೌಡ, ಸಂಗೀತಾ, ಕಾರ್ತಿಕ್​, ವರ್ತೂರ್​, ಡ್ರೋನ್​, ತುಕಾಲಿ ಈ ಆರು ಮಂದಿಗೆ ಅತಿ ಹೆಚ್ಚಿನ ಫ್ಯಾನ್ಸ್​ ಇದ್ದಾರೆ. ಆದರೆ ಆರರಲ್ಲಿ ಒಬ್ಬ ವಿಜಯಶಾಲಿ ಇದ್ದಾರೆ. ಆದರೆ ಅವರು ಯಾರು ಎಂಬುದನ್ನು ಕಿಚ್ಚ ಸುದೀಪ್​ ಘೋಷಣೆ ಮಾಡಲಿದ್ದಾರೆ.

ಮತ್ತೊಂದು ಕುತೂಹಲ ಎಂದರೆ ಬಿಗ್​ ಬಾಸ್​ ವಿನ್ನರ್​ಗೆ ಸಿಗುವ ಮೊತ್ತದ ಬಗ್ಗೆಯೂ ಪ್ರೇಕ್ಷಕರಿಗೆ ಕುತೂಹಲ ಇದೆ. ಈ ಬಾರಿಯ ವಿಜಯಶಾಲಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ಮತ್ತು ಬಹುಮಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಇಂದು ಎಲಿಮಿನೇಟ್​​ ಆಗಲಿದ್ದಾರೆ ಈ ಸ್ಪರ್ಧಿಗಳು! ವಿನ್ನರ್​ ಅಕೌಂಟ್​ ಸೇರಲಿರೋ ಕಾಂಚಾಣ ಎಷ್ಟು ಗೊತ್ತಾ?

https://newsfirstlive.com/wp-content/uploads/2024/01/bigg-boss-2024-01-21T224500.923.jpg

Load More