BIGG BOSS: ಕಾರ್ತಿಕ್​​ನನ್ನು 10 ರೂಪಾಯಿಗೂ ಖರೀದಿ ಮಾಡಲಿಲ್ಲ; ತನಿಷಾ, ಸಂಗೀತಾ ಕೊಟ್ಟ ಕಾರಣವೇನು?

author-image
Veena Gangani
Updated On
BIGG BOSS: ಕಾರ್ತಿಕ್​​ನನ್ನು 10 ರೂಪಾಯಿಗೂ ಖರೀದಿ ಮಾಡಲಿಲ್ಲ; ತನಿಷಾ, ಸಂಗೀತಾ ಕೊಟ್ಟ ಕಾರಣವೇನು?
Advertisment
  • ಆಟದಲ್ಲಿ ಸಂಗೀತಾ ಹಾಗೂ ತನಿಶಾ ಇಬ್ಬರಿಗೂ ಬೇಡವಾದ ಕಾರ್ತಿಕ್ ಮಹೇಶ್​
  • ಈ ಹಿಂದೆ ತಮ್ಮ ತಂಡಕ್ಕೆ ಬರುವಂತೆ ಕಾರ್ತಿಕ್​ನನ್ನು ಮನವೊಲಿಸಿದ ಸಂಗೀತಾ!
  • ತನಿಶಾ ಹಾಗೂ ಸಂಗೀತಾ ತಂಡಕ್ಕೆ ಮತ್ತೆ ಆಟಗಾರರನ್ನು ಖರೀದಿಸಿ ಎಂದ ಬಿಗ್​ಬಾಸ್​

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಮನೆಯ ಆಟ ಮುಗೀತಾ ಬಂದಂತೆ ಬಲು ರೋಚಕವಾಗ್ತಿದೆ. ಆಟ, ಕಿತ್ತಾಟಗಳ ಮಧ್ಯೆ ಫ್ರೆಂಡ್​ಶಿಪ್, ರಿಲೇಷನ್‌​ಶಿಪ್, ಬಾಡಿಂಗ್ ಎಲ್ಲವೂ ಸೈಡ್​ಲೈನ್ ಆಗುತ್ತಿದೆ. ಸದ್ಯ ಬಿಗ್​​​ ಮನೆಯಲ್ಲಿ 11 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.

ಇದನ್ನು ಓದಿ:Bigg Boss: ಸಂಗೀತಾಗೆ ಸಡನ್ ಶಾಕ್ ಕೊಟ್ಟ ಕಾರ್ತಿಕ್​​​; ಬಿಗ್‌ಬಾಸ್‌ ಮನೆಯಲ್ಲಿ ಶುರು ಹೊಸ ಆಟ; ಏನದು?

ಸದ್ಯ ಸಂಗೀತಾ ಹಾಗೂ ತನಿಶಾ ತಂಡಕ್ಕೆ ಬಿಗ್​​ಬಾಸ್​ ಮತ್ತೆ​ ಅವಕಾಶವೊಂದನ್ನು ನೀಡಿರುತ್ತಾರೆ. ತನಿಶಾ ಹಾಗೂ ಸಂಗೀತಾ ತಂಡಕ್ಕೆ ಆಟಗಾರರನ್ನು ಖರೀದಿಸಬೇಕು​ ಸೂಚನೆ ನೀಡಿದ್ದರು. ಅದರಂತೆ ಸಂಗೀತಾ ಮತ್ತು ತನಿಶಾ ಹರಾಜು ಪ್ರಕ್ರಿಯೆಯಲ್ಲಿ ಕಾರ್ತಿಕ್​​ಗೆ ಯಾವುದೇ ಮೊತ್ತವನ್ನು ನೀಡಿಲ್ಲ. ಈ ಹಿಂದೆ ಇದೇ ಹರಾಜು ಪ್ರಕ್ರಿಯೆಯಲ್ಲಿ ಕಾರ್ತಿಕ್​​ ನನ್ನ ತಂಡಕ್ಕೆ ಬನ್ನಿ ಎಂಬ ಪೈಪೋಟಿ ನಡೆದಿತ್ತು.

ಇದೀಗ ​​​​ ಹರಾಜು ಪ್ರಕ್ರಿಯೆ ಎರಡನೇ ಹಂತದಲ್ಲಿ ಕಾರ್ತಿಕ್​ ಕಳಪೆ ಖರೀದಿ ಎಂದು ಹೆಸರು ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ವರ್ತೂರು ಸಂತೋಷ್​ ಹಾಗೂ ತುಕಾಲಿ ಸಂತೋಷ್​, ಇವತ್ತು ಅವನನ್ನು 10 ರೂಪಾಯಿಗೂ ಕೇಳಲಿಲ್ಲ. ಅವನಿಗೆ ಓಡಲು ಆಗುತ್ತಿಲ್ಲ, ಟಾಸ್ಕ್​​ ಆಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಕಾರ್ತಿಕ್​​ನನ್ನು ಖರೀದಿ ಮಾಡಲಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment