newsfirstkannada.com

BIGG BOSS: ಮೈಕಲ್​ಗೆ ಮತ್ತೆ ಟ್ಯಾಟೂ ಹಾಕಿದ ಬಿಗ್‌ಬಾಸ್ ನೀತು; ಅದರಲ್ಲಿ ಏನಿದೆ ಗೊತ್ತಾ?

Share :

Published February 3, 2024 at 4:10pm

Update February 3, 2024 at 5:41pm

    ದಿನ ಕಳೆದಂತೆ ಕನ್ನಡವನ್ನು ಓದುವುದಕ್ಕೂ ಶುರು ಮಾಡಿದ ಮೈಕಲ್​

    ಬಿಗ್​​ ಮನೆಯಲ್ಲಿದ್ದಾಗ ಮಣ್ಣಿನ ಮಗ ಎಂಬ ಬಿರುದು ಪಡೆದಿದ್ದ ಅಜಯ್​

    ನಾ ಮುಂದು ತಾ ಮುಂದು ಅಂತ ಕಮೆಂಟ್ ಮಾಡಿದ ಅಭಿಮಾನಿಗಳು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಮುಕ್ತಾಯಗೊಂಡಿದೆ. ಪ್ರತಿ ಸೀಸನ್​ಗಳಂತೆ ಈ ಸೀಸನ್​​ನ ಬಿಗ್​ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಬಂದ ಬಳಿಕ ತಮ್ಮ ಬಾಂಧವ್ಯ ಮುಂದುವರೆಸಿದ್ದಾರೆ. ಒಬ್ಬರನ್ನೊಬ್ಬರು ಭೇಟಿ ಮಾಡುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಪಾರ್ಟಿ ಮಾಡುತ್ತಿದ್ದಾರೆ. ಅದರಲ್ಲೂ ಱಪರ್​ ಇಶಾನಿ, ಮೈಕಲ್, ರಕ್ಷಕ್, ಸ್ನೇಹಿತ್, ನೀತೂ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ತನಿಷಾ, ವಿನಯ್​​ ಹೀಗೆ ಬಿಗ್​ಬಾಸ್ ಮನೆಯೊಳಗೆ ಆತ್ಮೀಯವಾಗಿದ್ದವರ ಬಾಂಧವ್ಯ ಮನೆಯಿಂದ ಹೊರಗೆ ಬಂದ ಮೇಲೂ ಮುಂದುವರೆದಿದೆ.

ಇದೀಗ ಬಿಗ್​ಬಾಸ್​ ಸ್ಪರ್ಧಿ ನೀತು ವನಜಾಕ್ಷಿ ಅವರ ಕೈಯಿಂದ ಮೈಕಲ್​​ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹೌದು, ಬಿಗ್​ಬಾಸ್​ ಮನೆಗೆ ಹೋಗುವ ಮೊದಲು ನೀತು ಹಾಗೂ ಮೈಕಲ್​ ಸ್ಮೇಹಿತರಾಗಿದ್ದರು. ಬಿಗ್​ಬಾಸ್​​ ಬಳಿಕ ಮತ್ತೆ ಒಂದಾಗಿದ್ದಾರೆ. ಅದೇ ರೀತಿ ಮೈಕಲ್​ ಅವರು ಈ ಮೊದಲು ಅವರ ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ಅದನ್ನು ಹಾಕಿದ್ದು ಬೇರೆ ಯಾರು ಅಲ್ಲ. ಅದು ಕೂಡ ನೀತು ಅವರೇ ಹಾಕಿದ್ದು. ಇದೀಗ ಮತ್ತೆ ತಮ್ಮ ಕೈಮೇಲೆ ನೀತು ಕೈಯಿಂದ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಇದನ್ನು ಓದಿ: BBK10: ಬಿಗ್‌ಬಾಸ್ ‘ಆನೆ’ಯ ಗುಂಪಿನಲ್ಲಿ ನಮ್ರತಾ, ಮೈಕಲ್, ಇಶಾನಿ, ರಕ್ಷಕ್‌; ಸ್ನೇಹಿತ್ ಮಾತ್ರ ಕಾಣೆ!

ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ಮೈಕಲ್ ಅವರಿಗೆ ಸರಿಯಾಗಿ ಕನ್ನಡ ಗೊತ್ತಿರಲಿಲ್ಲ. ಆದರೆ, ದಿನ ಕಳೆದಂತೆ ಅವರಿಗಿದ್ದ ಕನ್ನಡದ ಮೇಲಿನ ಪ್ರೇಮ ಬಿಗ್​ಬಾಸ್ ಜರ್ನಿ ಮುಗಿಯುವುದರೊಳಗೆ ಹೆಚ್ಚಿನ ಮಟ್ಟದಲ್ಲಿಯೇ ಕನ್ನಡ ಕಲಿತುಕೊಂಡರು. ಕನ್ನಡವನ್ನು ಚೆನ್ನಾಗಿ ಮಾತನಾಡುವ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಮೈಕೆಲ್‌ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡರು. ಈಗ ನೀತೂ ಶಾಪ್‌ಗೆ ಭೇಟಿ ನೀಡಿದ್ದ ಮೈಕೆಲ್ ‘ಮಣ್ಣಿನ ಮಗ’ ಎಂಬ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಆ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಜೊತೆಗೆ ನಾನೀಗ ಹಾಕಿಸಿಕೊಳ್ಳುತ್ತಿರುವ ಟ್ಯಾಟೂ ಯಾವುದೆಂದು ನೀವೂ ಗೆಸ್ ಮಾಡಿದರೆ ಒಂದು ಸ್ಪೆಷಲ್ ಗಿಫ್ಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅದರಂತೆ ಟ್ಯಾಟೂ ಊಹಿಸಿದ ಅಭಿಮಾನಿಗೆ ಗಿಫ್ಟ್ ಕೊಟ್ಟಿದ್ದಾರೆ. ಸದ್ಯ ಮೈಕೆಲ್ ಬರ್ಗರ್ ಶಾಪ್ ಇಟ್ಟುಕೊಂಡಿದ್ದಾರೆ. ಬಿಗ್​ಬಾಸ್ ಮನೆಯಿಂದ ಹೊರ ಬಂದ ಮೇಲೆ ಅವರ ಬರ್ಗರ್ ಶಾಪ್‌ಗೆ ನೀತೂ ಭೇಟಿ ನೀಡಿದ್ದರು. ನೀತು ಅವರ ಶಾಪ್​ಗೆ ಮೈಕಲ್​ ಕೂಡ ಭೇಟಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಮೈಕಲ್​ಗೆ ಮತ್ತೆ ಟ್ಯಾಟೂ ಹಾಕಿದ ಬಿಗ್‌ಬಾಸ್ ನೀತು; ಅದರಲ್ಲಿ ಏನಿದೆ ಗೊತ್ತಾ?

https://newsfirstlive.com/wp-content/uploads/2024/02/bigg-boss-10.jpg

Load More