/newsfirstlive-kannada/media/post_attachments/wp-content/uploads/2023/10/bigg-boss-15.jpg)
ಕಿರುತೆರೆ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಅದು ಬಿಗ್​ಬಾಸ್​ ಸೀಸನ್​ 10ರ ಲಾಂಚ್. ಪ್ರೋಮೋ ಬಂದಿದ್ದೆ ತಡ ವೀಕ್ಷಕರ ಕೂತುಹಲ ದುಪ್ಪಾಟ್ಟಾಗಿದೆ. ಇನ್ನೂ, ಬಿಗ್​ಬಾಸ್​ ಸೀಸನ್ 10ರ ಗ್ರ್ಯಾಂಡ್ ಪ್ರೀಮಿಯರ್​ನ ಪ್ರೆಸ್ ಮೀಟ್ ನಡೆದಿದೆ. ಇನ್ನೂ, ಈ ಪ್ರೆಸ್​ ಮೀಟ್​ಗೆ ಕಿಚ್ಚ ಸುದೀಪ್ ಅವರು ಕೂಡ ಹಾಜರಾಗಿದ್ದರು. ಮಾಧ್ಯಮದ ಒಂದಷ್ಟು ಪ್ರಶ್ನೆಗಳಿಗೆ ಕಿಚ್ಚ ಉತ್ತರಿಸಿದ್ದಾರೆ.
ಬಿಗ್​ಬಾಸ್​ ಸ್ಪರ್ಧಿಗಳ ಬಗ್ಗೆ ನಿಮಗೆ ಯಾವ ರೀತಿಯಾದ್ರೂ ಕ್ಲ್ಯೂ ಇರುತ್ತಾ ಅನ್ನೋ ಪ್ರೆಶ್ನೆಗೆ ಕಿಚ್ಚ ಸುದೀಪ್​ ಉತ್ತರಿಸಿದ್ದು ಹೀಗೆ. ಬಿಗ್​ಬಾಸ್​ ಅನ್ನೋದು ನನಗೂ ಒಂದು ಕ್ಯೂರಿಯಾಸಿಟಿ ಹುಟ್ಟಿಸೋ ರಿಯಾಲಿಟಿ ಶೋ. ನಾನೊಬ್ಬ ನಿರೂಪಕರಾಗಿದ್ದರು ಕೂಡ ಪ್ರೇಕ್ಷಕನಾಗಿ ಶೋ ನೋಡುತ್ತೇನೆ.
/newsfirstlive-kannada/media/post_attachments/wp-content/uploads/2023/10/bigg-boss-14.jpg)
ಬಿಗ್​ಬಾಸ್​ ಗ್ರ್ಯಾಂಡ್ ಲಾಂಚ್ ಆಗಿ ಸ್ಪರ್ಧಿಗಳು ಒಬ್ಬೊಬ್ಬರಾಗಿ ವೇದಿಕೆಗೆ ಬರೋ ಮುನ್ನವಷ್ಟೇ ಅವರ ಹೆಸರು ಅವರ ಬಗ್ಗೆ ಮಾಹಿತಿ ಸಿಗುತ್ತದೆ. ಇದು ಬಿಟ್ಟರೆ ಮುಂಚಿತವಾಗಿ ನನಗೆ ಯಾವುದೇ ಕಂಟೆಸ್ಟೆಂಟ್ಸ್ ಗಳ ಬಗ್ಗೆ ಸುಳಿವು ಕೂಡ ಇರುವುದಿಲ್ಲ. ನಾನೂ ಬಿಗ್​ಬಾಸ್​ ಟೀಮ್​ಗೆ ಕೇಳುವುದಕ್ಕೆ ಹೋಗುವುದಿಲ್ಲ. ವೈಯಕ್ತಿಕವಾಗಿ ನನಗೆ ಅದು ಇಷ್ಟ ಆಗೋದಿಲ್ಲ ಎಂದು ಕಿಚ್ಚ ಉತ್ತರಿಸಿದ್ದಾರೆ. ಎಲಿಮಿನೇಟ್​​ ಆಗೋ ವಿಚಾರ ಕೂಡ ನನಗೆ ಗೊತ್ತಿರಲ್ಲ. ಯಾಕಂದ್ರೆ, ಎಲಿಮಿನೇಟ್ ಆಗೋ ಸ್ಪರ್ಧಿಯ ಹೆಸರು ಗೊತ್ತಾದರೆ, ನನ್ನ ಥಾಟ್ ಪ್ರೋಸೆಸ್ ಕೂಡ ಬದಲಾಗುತ್ತೆ.
/newsfirstlive-kannada/media/post_attachments/wp-content/uploads/2023/09/bigg-boss.jpg)
ಹಾಗಾಗಿ ಅವರುಗಳು ಹೊರಡೋ ಟೈಮ್ ಬಂದಾಗ ನನಗೆ ಪಿಸಿಆರ್​ನಿಂದ ಹೆಸರು ಹೇಳ್ತಾರೆ ಅದನ್ನ ನಾನು ವೇದಿಕೆ ಮೇಲೆ ಹೇಳಿ ಸೇವ್​ ಹಾಗೂ ಎಲಿಮಿನೇಟ್ ಪ್ರೋಸೆಸ್ ಮಾಡುತ್ತೇನೆ. ಈ ರೀತಿ ನನಗೆ ನಾನೇ ರೂಲ್ಸ್ ಮಾಡಿಕೊಂಡಿದ್ದೇನೆ. ಒಂದು ದೊಡ್ಡ ರಿಯಾಲಿಟಿ ಶೋಗೆ ಒಬ್ಬ ಹೋಸ್ಟ್ ಆಗಿ ಒಂದಷ್ಟು ಜವಾಬ್ದಾರಿಗಳು ಇರುತ್ತೆ. ಅದನ್ನ ಒಳ್ಳೆಯ ರೀತಿಯಲ್ಲಿ ನಿಭಾಯಿಸೋ ಎಲ್ಲಾ ಪ್ರಯತ್ನಗಳನ್ನ ನಾನು ಮಾಡುತ್ತೇನೆ ಎಂದು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us