newsfirstkannada.com

ಬಿಗ್​​ ಬಾಸ್ ಟ್ರೋಫಿ ಗೆದ್ದ ಸ್ಪರ್ಧಿಗೆ ಸಿಗೋ ದುಡ್ಡು ಎಷ್ಟು? ಈ ಬಾರಿ ಇರಲಿದ್ಯಾ ಸಮ್​ಥಿಂಗ್ ಸ್ಪೆಷಲ್!

Share :

Published January 22, 2024 at 6:28am

    ಬಿಗ್ ​ಬಾಸ್ ಟ್ರೋಫಿ ಗೆದ್ದವರಿಗೆ ಕಾನ್ಫಿಡೆಂಟ್ ಗ್ರೂಪ್​ ಎಷ್ಟು​​ ಕೊಡುತ್ತೆ ಗೊತ್ತಾ?

    ಕೊನೆಗೂ ಟಾಪ್ 6 ಫೈನಲ್​ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ ನೋಡಿ

    100 ದಿನಗಳ ಜರ್ನಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸ್ಪರ್ಧಿಗಳು

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 10 ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಸೀಸನ್​ 10ರ ಫೈನಲ್​ಗೆ ಬಂದು ವಾರ ಅಷ್ಟೇ ಬಾಕಿ ಉಳಿದಿದೆ. ಇನ್ನೂ ಕಿಚ್ಚನ ಕೊನೆಯ ಪಂಚಾಯ್ತಿಯಲ್ಲಿ ಬಿಗ್​ ಬಾಸ್​​ ಗೆಲ್ಲುವ ಸ್ಪರ್ಧಿಗೆ ಕೊಡುವ ಟ್ರೋಫಿ ಅನಾವರಣಗೊಳಿಸಿದ್ದಾರೆ. ಇದರ ಜೊತೆಗೆ ಕಿಚ್ಚ ಸುದೀಪ್​ ಅವರಿಂದ ಈ ಸೀಸನ್​​ ಕೊನೆಯ ಘಟ್ಟದಲ್ಲಿ ಸ್ಪರ್ಧಿಗಳಿಗೆ ಮೋಟಿವೇಷನಲ್ ಮಾತುಗಳನ್ನು ಆಡಿದ್ದಾರೆ.

ಬಿಗ್​​ ಬಾಸ್​ ಗೆದ್ದ ಸ್ಪರ್ಧಿಗಳಿಗೆ ಸಿಗುವ ಹಣ ಎಷ್ಟು?

ಬಿಗ್​​ ಬಾಸ್​ ನೂರು ದಿನಗಳ ಜರ್ನಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಜನರ ಮನಗೆದ್ದವರು ಬಿಗ್​​ಬಾಸ್​ ವಿನ್ನರ್​ ಆಗಲಿದ್ದಾರೆ. ಬಿಗ್​ಬಾಸ್​ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡವರಿಗೆ ಪ್ರತಿ ಸೀಸನ್​ನಲ್ಲೂ 50 ಲಕ್ಷ ಪ್ರೈಸ್ ಮನಿ ನೀಡಲಾಗುತ್ತದೆ. ಜೊತೆಗೆ ಬಿಗ್​ಬಾಸ್ ಟ್ರೋಫಿ ಗೆದ್ದವರಿಗೆ ಕಾನ್ಫಿಡೆಂಟ್ ಗ್ರೂಪ್​ನಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಮಾರುತಿ ಸಂಸ್ಥೆಯ ಬ್ರೆಜಾ ಕಾರು ಉಡುಗೊರೆಯಾಗಿ ಸಿಗಲಿದೆ. ಅದಾದ ಬಳಿಕ ಎಲೆಕ್ಟ್ರಿಕ್ ಸ್ಕೂಟರ್ ಸಹ ಸಿಗಲಿದೆ.

ಸದ್ಯ ಬಿಗ್​ಬಾಸ್​ ಮನೆಯಲ್ಲಿ ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ಕಾರ್ತಿಕ್​, ಡ್ರೋನ್​ ಪ್ರತಾಪ್​​​, ಸಂಗೀತಾ ಹಾಗೂ ವಿನಯ್​​ ಗೌಡ ಉಳಿದುಕೊಂಡಿದ್ದಾರೆ. ಇನ್ನು, ಕೊನೆಯ ಹಂತದಲ್ಲಿ ಬಿಗ್​ಬಾಸ್​ ಮನೆಯಿಂದ ನಮ್ರತಾ ಗೌಡ ಆಚೆ ಬಂದಿದ್ದಾರೆ.  ಕೊನೆಯ ಹಂತದಲ್ಲಿ ಡ್ರೋನ್​ ಪ್ರತಾಪ್​, ವಿನಯ್​ ಗೌಡ ಹಾಗೂ ಕಾರ್ತಿಕ್​​ ಮಹೇಶ್​​ ಎಲಿಮಿನೇಶನ್​ನಿಂದ ಸೇಫ್​ ಆಗಿದ್ದರು. ಬಿಗ್​​ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳಲ್ಲಿ ಈಗ 6 ಜನರು ಉಳಿದುಕೊಂಡಿದ್ದಾರೆ. ಈ ಆರು ಜನರಲ್ಲಿ ಮಿಡ್​ ವೀಕ್​ ಕೂಡ ಇರಲಿದೆ. ಅದರಲ್ಲಿ ಯಾವ ಸ್ಪರ್ಧಿ ಆಚೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ಸದ್ಯ ಪ್ರೇಕ್ಷಕರು ಬಿಗ್​ಬಾಸ್​ ಸೀಸನ್​ 10ರ ಟ್ರೋಫಿ ಯಾರ ಕೈಯಲ್ಲಿ ಇರಲಿದೆ ಎಂದು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ ಬಾಸ್ ಟ್ರೋಫಿ ಗೆದ್ದ ಸ್ಪರ್ಧಿಗೆ ಸಿಗೋ ದುಡ್ಡು ಎಷ್ಟು? ಈ ಬಾರಿ ಇರಲಿದ್ಯಾ ಸಮ್​ಥಿಂಗ್ ಸ್ಪೆಷಲ್!

https://newsfirstlive.com/wp-content/uploads/2024/01/bigg-boss-2024-01-21T224500.923.jpg

Load More