BBK10 ಮುಗಿದ ಬಳಿಕ​ ವಿನ್ನರ್​ ಕಾರ್ತಿಕ್​ ಮಹೇಶ್ ಏನ್ಮಾಡ್ತಿದ್ದಾರೆ ಗೊತ್ತಾ?​

author-image
Veena Gangani
Updated On
BBK10 ಮುಗಿದ ಬಳಿಕ​ ವಿನ್ನರ್​ ಕಾರ್ತಿಕ್​ ಮಹೇಶ್ ಏನ್ಮಾಡ್ತಿದ್ದಾರೆ ಗೊತ್ತಾ?​
Advertisment
  • ಬಿಗ್​ಬಾಸ್​ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ಸ್ಪರ್ಧಿ
  • ಕೆಲವೊಂದು ಸುಂದರ ಕ್ಷಣಗಳನ್ನು ಶೇರ್ ಮಾಡಿಕೊಂಡ ಕಾರ್ತಿಕ್ ಮಹೇಶ್​
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬಿಗ್​ಬಾಸ್​ ವಿನ್ನರ್​ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಕಾರ್ತಿಕ್ ಮಹೇಶ್ ಹೆಚ್ಚಾಗಿ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಬಿಗ್​ಬಾಸ್​ ಮುಗಿದ ವಿನ್ನರ್​ ಕಾರ್ತಿಕ್ ಮಹೇಶ್ ಮೇಲೆ ಏನು ಮಾಡ್ತಿದ್ದಾರೆ ಅಂತ ಅಭಿಮಾನಿಗಳು ಯೋಚನೆ ಮಾಡುತ್ತಾ ಇರುತ್ತಾರೆ.

ಇದನ್ನೂ ಓದಿ:‘ದರ್ಶನ್ ತುಂಬಾ ಮುಗ್ಧ ಹುಡುಗ’.. ದಾಸನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಗಿರಿಜಾ ಲೋಕೇಶ್​

publive-image

ಆದರೆ ಇದೀಗ ಕಾರ್ತಿಕ್ ಅವರು ಏನು ಮಾಡ್ತಾ ಇರುತ್ತಾರೆ ಎಂಬುವುದಕ್ಕೆ ಉತ್ತರ ಸಿಕ್ಕಿದೆ. ಸಿನಿಮಾಗಳ ಮೂಲಕ ಮಿಂಚೋಕೆ ತಯಾರಿ ಮಾಡಿಕೊಳ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೀರೋ ಆಗಿ ಅದ್ಧೂರಿಯಾಗಿ ಲಾಂಚ್​ ಆಗಲಿದ್ದಾರೆ. ಈ ನಡುವೆ ಕಾರ್ತಿಕ್ ಮಹೇಶ್ ಅವರು​ ಕಾಣಿಸಿಕೊಂಡಿದ್ದು ಮುದ್ದು ಅಳಿಯನ ಜೊತೆ.

ಬಿಗ್​ಬಾಸ್​ ಫಾಲೋ ಮಾಡಿರೋರಿಗೆ ಈ ವಿಚಾರ ಗೊತ್ತಿರೋತ್ತೆ. ಕಾರ್ತಿಕ್​ ಬಿಗ್​ಬಾಸ್​ ಮನೆಯಲ್ಲಿದ್ದಾಗ ತಂಗಿಗೆ ಮಗು ಬಗ್ಗೆಯೇ ಮಾತಾಡುತ್ತಿದ್ದರು. ಸದ್ಯ ಆ ಪುಟಾಣಿ ದೊಡ್ಡದಾಗಿದ್ದು, ಕಾರ್ತಿಕ್ ಅವರು​ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಮುದ್ದಿನ ಅಳಿಯನಿಗಾಗಿ ಮಿಸಲಿಟ್ಟಿದ್ದಾರೆ. ಅಮ್ಮ, ತಂಗಿಯನ್ನ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಕಳೆದ ಒಂದಿಷ್ಟು ಸುಂದರ ಕ್ಷಣಗಳನ್ನ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಪ್ಪನೇ ಮರಳಿ ಜನ್ಮತಾಳಿರೋ ಸಂಭ್ರಮದಲ್ಲಿ ಕಾರ್ತಿಕ್ ಅವರು ಇದ್ದಾರೆ. ಬಿಗ್​ಬಾಸ್​ ಶೋ​ ಬಳಿಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ಕಾರ್ತಿಕ್ ಮಹೇಶ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment