/newsfirstlive-kannada/media/post_attachments/wp-content/uploads/2024/10/BBK11.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ 11 ದಿನಕ್ಕೊಂದು ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಶೋ ಶುರುವಾದ ಮೊದಲ ದಿನದಿಂದಲೇ ಬಿಗ್​ ಮನೆಯಲ್ಲಿ ನಾಮಿನೇಷನ್​ ಸಣ್ಣ ಕಿಡಿ ಹೊತ್ತಿಕೊಂಡಿತ್ತು.
ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ಅತಿ ದೊಡ್ಡ ಎಡವಟ್ಟು.. ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಕಠಿಣ ಶಿಕ್ಷೆ; ಏನಾಯ್ತು?
/newsfirstlive-kannada/media/post_attachments/wp-content/uploads/2024/10/BBK11-2.jpg)
ಬಿಗ್​ಬಾಸ್​ ಮನೆಗೆ ಪ್ರತಿ ಸ್ಪರ್ಧಿಯು ನಾಮಿನೇಷನ್​ನಿಂದ ಪಾರಾಗಾಲು ಸಾಧ್ಯವಿಲ್ಲ. ಒಂದಲ್ಲಾ ಒಂದು ವಿಚಾರ ಕೊಟ್ಟು ಬಿಗ್​ಬಾಸ್​ ಮನೆಯ ಸ್ಪರ್ಧಿಗಳು ನಾಮಿನೇಟ್ ಆಗುತ್ತಲೇ ಇರುತ್ತಾರೆ. ನಾಮಿನೇಟ್​ ಆದ ಸ್ಪರ್ಧಿಗಳನ್ನು ನಾಮಿನೇಷನ್​ನಿಂದ ವೀಕ್ಷಕರು ಪಾರು ಮಾಡುತ್ತಾರೆ.
/newsfirstlive-kannada/media/post_attachments/wp-content/uploads/2024/09/BBK11-17-contestants.jpg)
ಆದರೆ ಈ ವಾರ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್​ ಆಗಿದ್ದರು. ಈ ಪೈಕಿ ಟಾಸ್ಕ್​ ಮೂಲಕವೇ ನಾಮಿನೇಟ್​ ಆದ ಸ್ಪರ್ಧಿಗಳನ್ನು ನಾಮಿನೇಷನ್​ನಿಂದ ಪಾರು ಮಾಡಬಹುದಾಗಿತ್ತು. ಆದರೆ ಇದೀಗ ವೋಟಿಂಗ್​ ಪೋಲ್​ ಅನ್ನು ತೆಗೆದುಹಾಕಲಾಗಿದೆ. ಪ್ರತಿ ಬಾರಿಯೂ ವೀಕ್ಷಕರು ನಾಮಿನೇಷನ್​ನಿಂದ ಸ್ಪರ್ಧಿಗಳನ್ನು ಪಾರು ಮಾಡಲು ಜಿಯೋ ಸಿನಿಮಾಗೆ ಹೋಗಿ ವೋಟ್ ಮಾಡ್ತಾ ಇದ್ದರು. ಆದರೆ ಈ ಬಾರಿ ಜಿಯೋ ಸಿನಿಮಾದಲ್ಲಿ ವೋಟಿಂಗ್​ ಪೋಲ್ ಅನ್ನು ತೆಗೆದು ಹಾಕಲಾಗಿದೆ.
/newsfirstlive-kannada/media/post_attachments/wp-content/uploads/2024/09/bbk11.jpg)
ಹೀಗಾಗಿ ಈ ವಾರ ಎಲಿಮಿನೇಷನ್ ಇರುವುದಿಲ್ಲ ಅಂತ ಹೇಳಲಾಗುತ್ತಿದೆ. ಆದರೆ ಕೊನೆ ಕ್ಷಣದಲ್ಲಿ ಬಿಗ್​ಬಾಸ್​ನಲ್ಲಿ ಟ್ವಿಸ್ಟ್​ ಇರಬಹುದು. ಇದಕ್ಕೆ ಭಾನುವಾರದ ಎಪಿಸೋಡ್​ನಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us