ಚೈತ್ರಾ ಕಣ್ಣೀರು, ಧನು-ರಜತ್ ಬಿಗ್ ಫೈಟ್​; ಇಂದು ಕಿಚ್ಚನ ಕ್ಲಾಸ್ ಯಾರಿಗೆ..? ವೀಕ್ಷಕರು ಎಕ್ಸೈಟ್..!

author-image
Veena Gangani
Updated On
ಚೈತ್ರಾ ಕಣ್ಣೀರು, ಧನು-ರಜತ್ ಬಿಗ್ ಫೈಟ್​; ಇಂದು ಕಿಚ್ಚನ ಕ್ಲಾಸ್ ಯಾರಿಗೆ..? ವೀಕ್ಷಕರು ಎಕ್ಸೈಟ್..!
Advertisment
  • ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಯಾರಿಗೆ ಕ್ಲಾಸ್​, ಯಾರಿಗೆ ಕ್ಲ್ಯಾಪ್?
  • ಈ ವಾರ ಸೇಫ್​ ಆಗಿ ಮುಂದಿನ ವಾರ ಇರೋ ಸ್ಪರ್ಧಿಗಳು ಯಾರು?
  • 8 ಮಂದಿ ಪೈಕಿ ಓರ್ವ ಸ್ಪರ್ಧಿಗೆ ​ಬಿಗ್​ಬಾಸ್​ ಬಾಗಿಲು ಓಪನ್

ಕನ್ನಡ ಬಿಗ್​ಬಾಸ್​ 12ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. 8 ಮಂದಿಯಲ್ಲಿ ಈ ವಾರ ಓರ್ವ ಸ್ಪರ್ಧಿಗೆ ಬಿಗ್​ಬಾಸ್ ಮನೆಯಿಂದ ಆಚೆ ಹೋಗಲು ಬಾಗಿಲು ಓಪನ್ ಆಗಲಿದೆ.

ಇದನ್ನೂ ಓದಿ: ಮೆಹಂದಿ ಮಾಸುವ ಮುನ್ನವೇ ಶೂಟಿಂಗ್​ ಸೆಟ್​ಗೆ ಬಂದ ಚಿನ್ನುಮರಿ ಜಾಹ್ನವಿ; ಫ್ಯಾನ್ಸ್​ ಫುಲ್​ ಖುಷ್

publive-image

ನೋಡ ನೋಡುತ್ತಿದ್ದಂತೆ ಬಿಗ್​ಬಾಸ್​ ಸೀಸನ್​ 11, 75ನೇ ದಿನಕ್ಕೆ ಕಲಿಟ್ಟಿದೆ. ಶನಿವಾರದ ಪಂಜಾಯ್ತಿಗೆ ಕಿಚ್ಚ ಸುದೀಪ ಎಂಟ್ರಿಗಾಗಿ ಅಭಿಮಾನಿಗಳು ಹಾಗೂ ಸ್ಪರ್ಧಿಗಳು ಕಾಯುತ್ತಿದ್ದಾರೆ. ಈ ವಾರ ಸೇಫ್​ ಆಗಿರೋ ಸ್ಪರ್ಧಿಗಳ ಹೆಸರನ್ನು ಕಿಚ್ಚ ಸುದೀಪ್​ ಘೋಷಣೆ ಮಾಡಲಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಓರ್ವ ಸ್ಪರ್ಧಿಯನ್ನು ಬಿಗ್​ಬಾಸ್​ ಮನೆಯಿಂದ ಆಚೆ ಕಳುಹಿಸಲಿದ್ದಾರೆ.

publive-image

ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್​, ರಜತ್​, ಧನರಾಜ್​ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್​ ಆಗಿದ್ದಾರೆ. ಜೊತೆಗೆ ಕ್ಯಾಪ್ಟನ್​ ಗೌತಮಿ ಜಾಧವ್​ ನೇರವಾಗಿ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ.

ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಡಲು ಸೀಸನ್ 10ರ ಸ್ಪರ್ಧಿಗಳಾದ ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್​ ಮಹೇಶ್​ ಹಾಗೂ ನಮ್ರತಾ ಗೌಡ ಬಿಗ್​ಬಾಸ್​ ಮನೆಗೆ ಬಂದಿದ್ದರು. ಸ್ಪರ್ಧಿಗಳಿಗೆ ಒಂದೊಂದು ಟಾಸ್ಕ್​ ಕೊಟ್ಟು ನಾಮಿನೇಷನ್ ಪ್ರಕ್ರಿಯೆ ಪೂರ್ಣ ಮಾಡಿದ್ದಾರೆ.

publive-image

ಇದಾದ ಬಳಿಕ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಗೆಳತಿ.. ಗೆಳತಿ ಅಂದುಕೊಂಡಿದ್ದ ಮಂಜು ಹಾಗೂ ಗೌತಮಿ ಮಧ್ಯೆ ಬಿರುಕು ಮೂಡಿದೆ. ಮತ್ತೊಂದು ಕಡೆ ವೈಲ್ಡ್ ಕಾರ್ಡ್​ ಸ್ಪರ್ಧಿ ರಜತ್​ ಏಕಾಏಕಿ ಧನರಾಜ್​ ಆಚಾರ್ಯ ಮೇಲೆ ಕೈ ಮಾಡಲು ಹೋಗಿದ್ದರು. ಕಳೆದ ವಾರ ನಾಮಿನೇಷನ್​ನಿಂದ ಸೇಫ್​ ಆಗಿದ್ದ ಚೈತ್ರಾ ಕುಂದಾಪುರ ಈ ಬಾರಿ ಏನಾಗ್ತಾರೆ ಅಂತ ಇಂದಿನ ವಾರದ ಕತೆ ಕಿಚ್ಚನ ಪಂಜಾಯ್ತಿಯಲ್ಲಿ ತಿಳಿದು ಬರಲಿದೆ. ಅಲ್ಲದೇ ಕಿಚ್ಚ ಸುದೀಪ್ ತಮ್ಮ ಪಂಚಾಯ್ತಿಯಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಾರೆ. ಹಾಗೆಯೇ ತಪ್ಪು ಮಾಡಿದ ಯಾವ ಸ್ಪರ್ಧಿಗೆ ಕ್ಲಾಸ್​ ತೆಗೆದುಕೊಳ್ತಾರೆ ಅಂತಾ ತಿಳಿದುಕೊಳ್ಳಲು ವೀಕ್ಷಕರು ಎಕ್ಸೈಟ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment