/newsfirstlive-kannada/media/post_attachments/wp-content/uploads/2025/01/BBK11_1-1.jpg)
ಕನ್ನಡದ ಬಿಗ್ ಬಾಸ್ ಶೋನಲ್ಲಿ ಕಳೆದ ವಾರ ಚೈತ್ರಾ ಅವರನ್ನು ಮನೆಯಿಂದ ಆಚೆ ಕಳಿಸಲಾಗಿದೆ. ಈಗಾಗಲೇ ಗ್ರ್ಯಾಂಡ್ ಫಿನಾಲೆಗೆ ಸಿದ್ಧತೆ ನಡೆದಿದ್ದು ಕ್ಯಾಪ್ಟನ್ ಹನುಮಂತು ಅವರನ್ನು ಬಿಟ್ಟು ಉಳಿದ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ವಾರದ ಪ್ರತಿಯೊಂದು ಟಾಸ್ಕ್ ಕೂಡ ಹೆಚ್ಚು ಮಹತ್ವ ಪಡೆದಿರುತ್ತದೆ. ಸ್ಪರ್ಧಿಗಳು ಕೂಡ ಗೆಲ್ಲಲು ಸಾಕಷ್ಟು ಪೈಪೋಟಿ ನಡೆಸುತ್ತಿದ್ದಾರೆ. ಇದರ ನಡುವೆ ಭವ್ಯ ಹಾಗೂ ತ್ರಿವಿಕ್ರಮ್ ಮಧ್ಯೆ ಮಾತಿನ ಸಮರ ನಡೆದಿದೆ.
ಸ್ಪರ್ಧಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಬಿಗ್ಬಾಸ್ನಲ್ಲಿ ಇನ್ನೊಬ್ಬರ ಮೇಲೆ ದೂರಬೇಕಾದ ಅನಿವಾರ್ಯ ಎದುರಾಗಿದೆ. ಇಷ್ಟು ದಿನ ಜೋಡಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದ ತ್ರಿವಿಕ್ರಮ್ ಹಾಗೂ ಭವ್ಯ ನಡುವೆ ಬಿರುಕು ಮೂಡಿದೆ. ಯಾರು ಯಾರನ್ನ ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಕುರಿತು ಇಬ್ಬರ ನಡುವೆ ಬಿರುಸಿನ ಚರ್ಚೆ ನಡೆದಿದೆ.
ಇದನ್ನೂ ಓದಿ:BIGG BOSS; ಮಾರಿಹಬ್ಬ ಜಾತ್ರೆಯಲ್ಲಿ ಕುರಿನ ಬಲಿ ಕೊಟ್ಟಾಯಿತು.. ಧನರಾಜ್ ಬಗ್ಗೆ ಭವ್ಯ ವ್ಯಂಗ್ಯ
105 ದಿನದಿಂದ ಇರದಿರುವ ಬಾಂಡಿಂಗ್ ಈಗ ಇನ್ನೊಬ್ಬರ ಜೊತೆ ಸೇರಿಕೊಂಡು ಆಚೆ ಇಡುತ್ತಿದ್ದೀಯ. ತುಂಬಾ ಬಂಡವಾಳಗಳು ಗೊತ್ತಾದಾಗ ಯಾರು ಏನು ಮಾಡೋಕೆ ಆಗಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಭವ್ಯಗೌಡ, ನೀನು ಏನೇನೋ ತಲೆಗೆ ಹಾಕ್ಕೊಂಡು ಮಾತನಾಡಬೇಡ. ನೀವೇ ಹಾಳಾಗುತ್ತಿದ್ದೀರಾ ಅಷ್ಟೇ. ಈ ವೇಳೆ ತ್ರಿವಿಕ್ರಮ್, ನೀನೇನೂ ನನಗೆ ಹೇಳುವುದು?, ಇಷ್ಟೆಲ್ಲಾ ಪುಂಗೋ ಅವಶ್ಯಕತೆ ಇಲ್ಲ. ಫಸ್ಟ್ ಡೇ ಇದ್ದಾಗೆ ಈಗ ನೀನಿಲ್ಲ ಎಂದು ಭವ್ಯಗೆ ನೇರವಾಗಿಯೇ ಹೇಳಿದ್ದಾರೆ.
ತ್ರಿವಿಕ್ರಮ್ ಹಾಗೂ ಭವ್ಯ ಇಬ್ಬರು ಸೋಫಾ ಮೇಲೆ ಕುಳಿತು ಈ ರೀತಿಯಾಗಿ ಮಾತನಾಡಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಭವ್ಯ ಎದ್ದು ಹೋಗಿದ್ದಾರೆ. ಸದ್ಯ ಇಬ್ಬರ ನಡುವಿನ ಸ್ನೇಹ, ಪ್ರೀತಿ ಈಗ ಇಲ್ಲ ಎಂದು ಅನಿಸುತ್ತಿದೆ. ಟ್ರೋಫಿ ಗೆಲ್ಲುವ ಉದ್ದೇಶದಿಂದ ಹೀಗೆ ಒಬ್ಬರನೊಬ್ಬರು ದೂರ ಮಾಡಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಟಾಸ್ಕ್ಗಳಂತೂ ಇಬ್ಬರು ಎಚ್ಚರವಾಗಿಯೇ ಆಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ