/newsfirstlive-kannada/media/post_attachments/wp-content/uploads/2025/01/TRIVIKRAM-1.jpg)
ಬಿಗ್ಬಾಸ್ನ ವಾರದ ಕೊನೆಯಲ್ಲಿ ಡಬಲ್ ಎಲಿಮಿನೇಷನ್ನಲ್ಲಿ ಗೌತಮಿ ಜಾಧವ್ ಹಾಗೂ ಧನರಾಜ್ ಮನೆ ಖಾಲಿ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ಕೇವಲ 6 ಸ್ಪರ್ಧಿಗಳು ಉಳಿದಿದ್ದು ಇದರಲ್ಲಿ ಒಬ್ಬರಿಗೆ ಗೇಟ್ ಪಾಸ್ ಕೊಡುವ ನಿರೀಕ್ಷೆ ಇದೆ. ಆದರೆ ಅದು ಹೇಗೆ, ಯಾರು ಎಂಬುದು ನಿಖರವಾಗಿಲ್ಲ. ಇದಕ್ಕೆ ಅಂತಿಮ ವಾರದಲ್ಲಿ ಉತ್ತರ ಪ್ರೇಕ್ಷಕರಿಗೆ ಸಿಗಬಹುದು. ವೇಟ್ ಆ್ಯಂಡ್ ಸೀ ಅಷ್ಟೇ.
ಮನದಲ್ಲಿ ಉದುಗಿರುವ ಕೋಪ, ಬೇಸರ, ಅತಾಶೆಯನ್ನು ಹೊಡೆಯುತ್ತಾ ಮನದೊಳಗೆ ಇರುವ ಭಾರವನ್ನು ಇಳಿಸಬೇಕು. ಬಿಗ್ಬಾಸ್ ಹೇಳಿರುವುದು ಏನೆಂದರೆ ಮನೆಯೊಳಗೆ ನಮಗೆ, ಯಾರ ಮೇಲೆ ಕೋಪ ಇದೆಯೋ ಅವರ ಫೋಟೋವನ್ನು ಗೊಂಬೆ ತಲೆಯಾಗಿರುವ ಮಡಿಕೆಗೆ ಅಂಟಿಸಿ, ಕೋಲಿನಿಂದ ಹೊಡೆಯಬೇಕು ಎಂದು ಟಾಸ್ಕ್ ಕೊಡಲಾಗಿದೆ.
ಇದನ್ನೂ ಓದಿ:ಚೊಚ್ಚಲ ವಿಶ್ವಕಪ್ಗೆ ಮುತ್ತಿಟ್ಟ ಭಾರತ.. ಖೋ ಖೋದಲ್ಲಿ ಮಹಿಳೆಯರು, ಪುರುಷರು ಇಬ್ಬರಿಗೂ ವರ್ಲ್ಡ್ಕಪ್
ಈ ಟಾಸ್ಕ್ನಲ್ಲಿ ಭವ್ಯ ಅವರು ತ್ರಿವಿಕ್ರಮ್ ಅವರ ಫೋಟೋ ಅಂಟಿಸಿ ತಮಗೆ ಇಷ್ಟ ಬಂದಂತೆ ಹೊಡೆದಿದ್ದಾರೆ. ಇದರಿಂದ ಈ ಇಬ್ಬರ ಮಧ್ಯೆದ ಸ್ನೇಹ ಯಾವುದು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಮೋಕ್ಷಿತಾ ಕೂಡ ತ್ರಿವಿಕ್ರಮ್ ಫೋಟೋಗೆ ದೊಡ್ಡ ಏಟು ಹಾಕಿ ಮಡಿಕೆಯನ್ನು ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ತ್ರಿವಿಕ್ರಮ್ ಮೇಲೆ ಕೋಪ-ತಾಪ, ಹತಾಶೆ ಎಲ್ಲವನ್ನು ಭವ್ಯ, ಮೋಕ್ಷಿತಾ ಇಟ್ಟುಕೊಂಡಿದ್ದರು ಎನ್ನುವುದು ಸ್ಪಷ್ಟವಾಗಿದೆ.
ಭವ್ಯದೋ ಅಥವಾ ಮೋಕ್ಷಿತಾದೋ ಈ ಇಬ್ಬರಲ್ಲಿ ಒಬ್ಬರ ಫೋಟೋಕ್ಕೆ ಹನುಮಂತು ಹೊಡೆದು ಮಡಿಕೆಯನ್ನ ನಾಶ ಮಾಡಿದ್ದಾರೆ. ಅಲ್ಲದೇ ರಜತ್ ಕೂಡ ಹನುಮಂತು ಫೋಟೋಗೆ ಹೊಡೆದಂತೆ ಇದೆ. ಆದರೆ ರಜತ್ ಹಾಗೂ ಹನುಮಂತು ಯಾರ ಫೋಟೋಗೆ ಹೊಡೆದಿದ್ದಾರೆ ಎನ್ನುವುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಇನ್ನು ಉಗ್ರಂ ಮಂಜು, ರಜತ್ ಫೋಟೋಗೆ ಹೊಡೆದು ಕೆಂಡ ಕಾರಿದ್ದಾರೆ. ರಜತ್ ಹಾಗೂ ಮಂಜುವಿನ ನಡುವೆ ದೊಡ್ಡ ಮಾತಿನ ಸಮರವೇ ನಡೆದಿದೆ. ಮನೆಯಲ್ಲಿ ಈ ಹಿಂದೆ ನಡೆದಂತ ಕೆಲ ಘಟನೆಗಳನ್ನ ನೆನಪಿಸಿ ಇಬ್ಬರು ಬೈದಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ