BBK11; ಚೈತ್ರಾ- ಐಶ್ವರ್ಯ ನಡುವೆ ಬಿಸಿ ಬಿಸಿ ವಾಕ್ಸಮರ.. ಬಳೆಗಳನ್ನ ಒಡೆದುಕೊಂಡ ಸ್ಪರ್ಧಿ

author-image
Bheemappa
Updated On
BBK11; ಚೈತ್ರಾ- ಐಶ್ವರ್ಯ ನಡುವೆ ಬಿಸಿ ಬಿಸಿ ವಾಕ್ಸಮರ.. ಬಳೆಗಳನ್ನ ಒಡೆದುಕೊಂಡ ಸ್ಪರ್ಧಿ
Advertisment
  • ಸ್ಪರ್ಧಿಗಳ ಮುಖಕ್ಕೆ ಚಹಾ ಚೆಲ್ಲಿರುವ ಕೆಲ ಸ್ಪರ್ಧಿಗಳು, ಯಾಕೆ?
  • ಚೈತ್ರಾ- ಐಶ್ವರ್ಯ ಜಗಳದಲ್ಲಿ ಸಹಾಯಕ್ಕೆ ಬಂದಿರುವ ಭವ್ಯಗೌಡ
  • ಚೈತ್ರಾ- ಐಶ್ವರ್ಯ ಮಧ್ಯೆ ಜಗಳ, ಮನೆಯಲ್ಲಿ ಏನ್ ಆಗುತ್ತಿದೆ?

ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋ ಅಂದರೆ ಅದು ಬಿಗ್​​ಬಾಸ್. ಕನ್ನಡಿಗರ ಮನ ಗೆದ್ದಿರುವ ಈ ಶೋ ದಿನದಿಂದ ದಿನಕ್ಕೆ ವೀಕ್ಷಕರನ್ನು ಸೆಳೆಯುತ್ತಿದೆ. ಸ್ಪರ್ಧಿಗಳು ಕೂಡ ಅಷ್ಟೇ ಯೋಚಿಸಿ ಟಾಸ್ಕ್​ಗಳನ್ನು ಆಡುತ್ತಿದ್ದು ವಾರದ ಕೊನೆಯಲ್ಲಿ ಕಿಚ್ಚ ಬಂದು ಬಿಸಿ ಮುಟ್ಟಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ವಾರದ ಉಳಿದ ದಿನಗಳಲ್ಲಿ ಸ್ಪರ್ಧಿಗಳು ಒಬ್ಬರ ಮೇಲೆ ಒಬ್ಬರು ರೋಷ, ಆಕ್ರೋಶ ಹೊರ ಹಾಕುತ್ತಾರೆ. ಅದರಂತೆ ಬಿಗ್ ಮನೆಯಲ್ಲಿ ಚೈತ್ರಾ ಕುಂದಾಪುರ- ಐಶ್ವರ್ಯ ನಡುವೆ ಮಾತಿನ ಮಲ್ಲಯುದ್ಧವೇ ನಡೆದಿದೆ.

ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಬಿಗ್​ಬಾಸ್​ 14ನೇ ವಾರದಲ್ಲಿ ಸಾಗುತ್ತಿದ್ದು ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗಿದ್ದು ಒಬ್ಬರ ಮೇಲೆ ಒಬ್ಬರು ಕುದಿಯುತ್ತಿದ್ದಾರೆ. ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಹೀಗಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಉಗ್ರಂ ಮಂಜು ಚೈತ್ರಾ ಮುಖಕ್ಕೆ ಟೀ ಚೆಲ್ಲಿದ್ದಾರೆ. ಐಶ್ವರ್ಯ ಮುಖಕ್ಕೆ ಭವ್ಯ ಕೂಡ ಎಚ್ಚೆತ್ತುಕೋ ಎಂದು ಚಹಾ ಚೆಲ್ಲಿದರು. ಆದರೆ ಮನೆಯಲ್ಲಿ ಟಾರ್ಗೆಟ್ ನಾಮಿನೇಷನ್ ವಿಷಯವಾಗಿ ಐಶರ್ಯ ಹಾಗೂ ಚೈತ್ರಾ ನಡುವೆ ಟಾಕ್ ವಾರ್ ನಡೆದಿದೆ.

ಇದನ್ನೂ ಓದಿ: BBK11; ಕಿಚ್ಚನಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಟೀ ಚೆಲ್ಲಿದ ಭವ್ಯಗೌಡ

publive-image

ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ಈ ವಾರ ನಿಮ್ಮ ಆಟಗಳಿಗೆ ನಾನು ಬಲಿಪಶು ಆದೆ ಅಂತ ಐಶ್ವರ್ಯ ಹಿಂದಿನ ಖ್ಯಾತೆ ತೆಗೆದು ಕೋಪದಲ್ಲಿ ಜೋರು ಧ್ವನಿಯಲ್ಲಿ , ಚೈತ್ರಾಗೆ ಹೇಳಿದ್ದಾರೆ. ಇಬ್ಬರ ನಡುವೆ ಮಾತಿನ ಯುದ್ಧವೇ ನಡೆದಿದ್ದು ಎಷ್ಟೇ.. ಮಾತನಾಡುತ್ತಿಯಾ ಎಂದು ಭವ್ಯ ಹೇಳಿದ್ದಾರೆ. ಬಾಯಿ ಮುಚ್ಚೆ ಅಂತ ಐಶ್ವರ್ಯ ಹೇಳಿದಾಗ ಚೈತ್ರಾ ಕೈಯನ್ನು ಜೋರಾಗಿ ಟೇಬಲ್​ಗೆ ಗುದ್ದಿದ್ದರಿಂದ ಕೈಯಲ್ಲಿದ್ದ ಬಳೆಗಳು ಪೀಸ್ ಪೀಸ್ ಆಗಿವೆ. ಮುಚ್ಚುಕೊಂಡು ಇರೇ.. ನೀವು ಎಂದು, ಚೈತ್ರಾ ಹೇಳಿದ್ದಾರೆ.

ಕೋಪದಲ್ಲೇ ಇಬ್ಬರು ಜಗಳ ಮಾಡಿದ್ದು ಮನೆಯಲ್ಲಿದ್ದ ಉಳಿದವರು ಸುಮ್ಮನೆ ನೋಡುತ್ತಿದ್ದರು. ಭವ್ಯ ಮಾತ್ರ ಐಶ್ವರ್ಯ ಸಹಾಯಕ್ಕೆ ಬಂದಂತೆ ವಿಡಿಯೋದಲ್ಲಿ ಕಾಣುತ್ತಿದೆ. ಇದೆಲ್ಲಾ ಏನೇನು ಆಗುತ್ತದೆ ಎಂದು ಗೊತ್ತಾಗಬೇಕು ಅಂದರೆ ಇಂದಿನ ಎಪಿಸೋಡ್ ಮಿಸ್ ಮಾಡಲೇಬಾರದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment