/newsfirstlive-kannada/media/post_attachments/wp-content/uploads/2024/11/bbk1152.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 8ನೇ ವಾರಕ್ಕೆ ಕಾಲಿಡುತ್ತದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಓರ್ವ ಸ್ಪರ್ಧಿ ಆಚೆ ಬಂದಿದ್ದಾರೆ. ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಬರುತ್ತಾರೆ ಅಂತ ವೀಕ್ಷಕರು ಲೆಕ್ಕ ಹಾಕುತ್ತಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಯಿಂದ ಅನುಷಾ ರೈ ಔಟ್ ಆಗಿದ್ದಾರೆ.
ಇದನ್ನೂ ಓದಿ: ಚಳಿಗಾಲ, ಹಲವು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಈ ವಿಷಯಗಳಲ್ಲಿ ನೀವು ತುಂಬಾ ಹುಷಾರಾಗಿರಿ
/newsfirstlive-kannada/media/post_attachments/wp-content/uploads/2024/11/bbk1151.jpg)
ಈಗಾಗಲೇ ಬಿಗ್​ಬಾಸ್ ಮನೆಯಿಂದ 5 ಸ್ಪರ್ಧಿಗಳು ಆಚೆ ಹೋಗಿದ್ದಾರೆ. ನಟಿ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ರಂಜಿತ್, ಹಂಸ ಹಾಗೂ ಮಾನಸಾ ಔಟ್ ಆಗಿದ್ದಾರೆ. ಆದರೆ 6ನೇ ವಾರದಲ್ಲಿ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಕೂಡ ಆಚೆ ಬಂದಿರಲಿಲ್ಲ. ಆದರೆ 7ನೇ ವಾರಕ್ಕೆ ಬಿಗ್​ಬಾಸ್ ಮನೆಯ ಆಟವನ್ನು ಮುಗಿಸಿದ್ದಾರೆ ಸ್ಪರ್ಧಿ ಅನುಷಾ ರೈ.
/newsfirstlive-kannada/media/post_attachments/wp-content/uploads/2024/11/bbk1150.jpg)
ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 10 ಮಂದಿ ನಾಮಿನೇಟ್​ ಆಗಿದ್ದರು. ಈ ಪೈಕಿ ನಿನ್ನೆಯ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಧನರಾಜ್​, ಮೋಕ್ಷಿತಾ ಹಾಗೂ ಗೋಲ್ಡ್​ ಸುರೇಶ್ ಈ ಮೂವರನ್ನು​ ಸೇಫ್​ ಮಾಡಿದ್ದರು. ಆದರೆ ಗೌತಮಿ ಜಾಧವ್​, ಉಗ್ರಂ ಮಂಜು, ಶಿಶಿರ್​, ಅನುಷಾ ರೈ, ಧರ್ಮ ಕೀರ್ತಿರಾಜ್​, ಹನುಮಂತ ಹಾಗೂ ಭವ್ಯಾ ಗೌಡ ಇವರಲ್ಲಿ ಈ ವಾರ ಅನುಷಾ ರೈ ಆಚೆ ಬಂದಿದ್ದಾರೆ. ಇನ್ನೂ ಅನುಷಾ ರೈ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವ ವಿಚಾರ ಕೇಳಿ ಉಳಿದ ಸ್ಪರ್ಧಿಗಳು ಬೇಸರಗೊಂಡಿದ್ದಾರೆ.
ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ದಿನ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದರು ಅನುಷಾ ರೈ ಹಾಗೂ ಧರ್ಮ ಕೀರ್ತಿ ರಾಜ್​. ಆದರೆ ಕೊನೆಯ ಕ್ಷಣದಲ್ಲೂ ಈ ಇಬ್ಬರು ಜೋಡಿಯಾಗಿ ಇದ್ದಿದ್ದ ಇಬ್ಬರಲ್ಲಿ ಅನುಷಾ ರೈ ಆಚೆ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us