ಹೊಸ ಲುಕ್​ನಲ್ಲಿ ಲಕಲಕ ಮಿಂಚಿದ ಬಿಗ್​ಬಾಸ್​ ಸ್ಪರ್ಧಿ ಅನುಷಾ ರೈ; ಫ್ಯಾನ್ಸ್ ಏನಂದ್ರು ಗೊತ್ತಾ?

author-image
Veena Gangani
Updated On
ಹೊಸ ಲುಕ್​ನಲ್ಲಿ ಲಕಲಕ ಮಿಂಚಿದ ಬಿಗ್​ಬಾಸ್​ ಸ್ಪರ್ಧಿ ಅನುಷಾ ರೈ; ಫ್ಯಾನ್ಸ್ ಏನಂದ್ರು ಗೊತ್ತಾ?
Advertisment
  • ಬಿಗ್​ಬಾಸ್​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಅನುಷಾ ರೈ
  • 7ನೇ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಟಿ
  • ಬಿಗ್​ಬಾಸ್ ಮೂಲಕವೇ ಫ್ಯಾನ್ಸ್​ಗಳನ್ನು ಸಂಪಾದಿಸಿಕೊಂಡ ಸ್ಪರ್ಧಿ

ಸ್ಯಾಂಡಲ್​ವುಡ್​ ನಟಿ, ಬಿಗ್​ಬಾಸ್​ ಸೀಸನ್​ 11ರ ಸ್ಪರ್ಧಿ ಅನುಷಾ ರೈ ಸಖತ್​ ಮಿಂಚುತ್ತಿದ್ದಾರೆ. ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಸ್ಪರ್ಧಿ ಅನುಷಾ ಅವರು ಅಚ್ಚರಿಯ ರೀತಿಯಲ್ಲಿ ಆಚೆ ಬಂದಿದ್ದರು. ಶೋನಿಂದ ಆಚೆ ಬಂದ ಕೂಡಲೇ ಅನುಷಾ ಅವರಿಗೆ ಸಾಕಷ್ಟು ಜನರ ಪ್ರೀತಿ ಸಿಕ್ಕಿದೆ.

ಇದನ್ನೂ ಓದಿ:BBK11: ಬಿಗ್​ಬಾಸ್​ ಖ್ಯಾತಿಯ ಅನುಷಾ ರೈಗೆ ವಿದ್ಯಾರ್ಥಿಗಳಿಂದ ಭರಪೂರ ಸ್ವಾಗತ​; ಹೋಗಿದ್ದೆಲ್ಲಿಗೆ?

publive-image

ಬಿಗ್​ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ಬೇಸರ ಕೂಡ ಹೊರ ಹಾಕಿದ್ದರು. ನನಗೆ ಇಷ್ಟು ಬೇಗ ಬಿಗ್​ಬಾಸ್​ ಮನೆಯಿಂದ ಆಚೆ ಬರೋದಕ್ಕೆ ಇಷ್ಟ ಇರಲಿಲ್ಲ. ಇನ್ನೂ ಸಾಕಷ್ಟು ಟಾಸ್ಕ್​ಗಳನ್ನು ಆಡಬೇಕಿತ್ತು ಅಂತ ಹೇಳಿ ಕಣ್ಣೀರು ಹಾಕಿದ್ದರು. ಆದರೆ ವೀಕ್ಷಕರಿಂದ ಕಡಿಮೆ ವೋಟ್​ ಬಂದ ಕಾರಣಕ್ಕೆ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದರು ಅನುಷಾ ರೈ.

publive-image

ಬಿಗ್​ಬಾಸ್​ನಿಂದ ಆಚೆ ಬಂದ ನಟಿಗೆ ಅಭಿಮಾನಿಗಳು ಗ್ರ್ಯಾಂಡ್​ ಆಗಿ ವೆಲ್​ಕಮ್​ ಮಾಡಿದ್ದರು. ಬಿಗ್​ಬಾಸ್​ನಿಂದ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದನೇ ಮಾಡಿಕೊಂಡಿರೋ ಅನುಷಾ ರೈ ಸಿದ್ದಗಂಗಾ ಮಠಕ್ಕೂ ಭೇಟಿ ಕೊಟ್ಟಿದ್ದರು. ಇದೀಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಚಂದನ್ ಶೆಟ್ಟಿ ಅವರ ಕಾಟನ್ ಕ್ಯಾಂಡಿ ಹಾಡಿಗೆ ರೀಲ್ಸ್ ಮಾಡಿ ಪೋಸ್ಟ್​ ಮಾಡಿದ್ದಾರೆ. ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಅನುಷಾ ಅವರ ಫೋಟೋಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಅಕ್ಕ ನೀವು ಯಾವ ಡ್ರೆಸ್​ ಹಾಕಿದ್ರು ಚೆನ್ನಾಗಿ ಕಾಣಿಸುತ್ತಿರ, ವಾವ್​ ಸಖತ್​ ಹಾಟ್​, ಸೂಪರ್ ಫೋಟೋಶೂಟ್​ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಸದ್ಯ ಇದೇ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment