ತ್ರಿವಿಕ್ರಮ್ ಬಗ್ಗೆ ಶಾಕಿಂಗ್​ ವಿಚಾರ ಬಿಚ್ಚಿಟ್ಟ ಅನುಷಾ ರೈ; ಬಿಗ್​ಬಾಸ್ ಮುಗಿಯೋವರೆಗೂ ಯಾರಿಗೂ ಗೊತ್ತೇ ಇರಲಿಲ್ಲ!

author-image
Veena Gangani
Updated On
ತ್ರಿವಿಕ್ರಮ್ ಬಗ್ಗೆ ಶಾಕಿಂಗ್​ ವಿಚಾರ ಬಿಚ್ಚಿಟ್ಟ ಅನುಷಾ ರೈ; ಬಿಗ್​ಬಾಸ್ ಮುಗಿಯೋವರೆಗೂ ಯಾರಿಗೂ ಗೊತ್ತೇ ಇರಲಿಲ್ಲ!
Advertisment
  • ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ಸ್ಪರ್ಧಿಗಳು ಈಗ ಮಾಡ್ತಿರೋದೇನು?
  • ಬಿಗ್​ಬಾಸ್​ನಿಂದ ಆಚೆ ಬಂದ ಬೆನ್ನಲ್ಲೇ ಸಖತ್​ ಬ್ಯುಸಿಯಾದ ಸ್ಪರ್ಧಿಗಳು
  • ಯಾರಿಗೂ ಗೊತ್ತಿಲ್ಲದ ಶಾಕಿಂಗ್​ ವಿಚಾರವನ್ನು ಬಹಿರಂಗ ಮಾಡಿದ ಅನುಷಾ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11ರ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಬಿಗ್​ಬಾಸ್​ನಿಂದ ಆಚೆ ಬಂದು ಸಂದರ್ಶನ ಕೊಡುವುದು, ಅಭಿಮಾನಿಗಳನ್ನು ಭೇಟಿಯಾಗುವುರಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ಮಧ್ಯೆ ಬಿಗ್​ಬಾಸ್​ ಸೀಸನ್ 11ರ ರನ್ನರ್​ ಅಪ್​ ಆಗಿದ್ದ ತ್ರಿವಿಕ್ರಮ್​ ಬಗ್ಗೆ ಅನುಷಾ ರೈ ಅವರು ಶಾಕಿಂಗ್​ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಸರಿಗಮಪ ವೇದಿಕೆಗೆ ಶಿವಣ್ಣ ಸಡನ್ ಎಂಟ್ರಿ ಕೊಡಲು ಒಂದು ಬಹುಮುಖ್ಯ ಕಾರಣವಿತ್ತು; ಏನದು?

publive-image

ಹೌದು, ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಟ್ಟಿದ್ದ ಅನುಷಾ ರೈ, ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿಗೆ ಭೇಟಿ ಕೊಟ್ಟು ಅಭಿಮಾನಿಗಳ ಜೊತೆಗೆ ಕಾಲ ಕಳೆದಿದ್ದಾರೆ. ಬಿಗ್​ಬಾಸ್​ನಿಂದ ಆಚೆ ಬಂದ ಬೆನ್ನಲ್ಲೇ ಸ್ಪರ್ಧಿಗಳಾದ ತ್ರಿವಿಕ್ರಂ, ಭವ್ಯಾ ಗೌಡ ಹಾಗೂ ಅನುಷಾ ರೈ ಗುಬ್ಬಿ ತಾಲೂಕಿಗೆ ಭೇಟಿ ಕೊಟ್ಟಿದ್ದಾರೆ.

publive-image

ಇನ್ನು, ಬಿಗ್​ಬಾಸ್​ ಮನೆಯಲ್ಲಿದ್ದಾ ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಅದು ಏನೆಂದರೆ, ತ್ರಿವಿಕ್ರಮ್​ ಹಾಗೂ ಅನುಷಾ ರೈ ಅವರು ಒಂದೇ ಊರಿನವರಾಗಿದ್ದಾರೆ. ಅಂದರೆ ತ್ರಿವಿಕ್ರಮ್​ ಹಾಗೂ ಅನುಷಾ ರೈ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಈ ಇಬ್ಬರು ಒಂದೇ ಶಾಲೆ ಹಾಗೂ ಒಂದೇ ಕಾಲೇಜು ವಿದ್ಯಾಭ್ಯಾಸ ಮಾಡಿದ್ದಾರಂತೆ. ಅಷ್ಟೇ ಅಲ್ಲ  ತ್ರಿವಿಕ್ರಮ್ ಸೀನಿಯರ್ ಆಗಿದ್ದು, ಅನುಷಾ ರೈ ಜೂನಿಯರ್ ಆಗಿದ್ದರಂತೆ. ಈ ಬಗ್ಗೆ ಖುದ್ದು ಅನುಷಾ ರೈ ಅವರೇ ತಮ್ಮ ಯ್ಯೂಟೂಬ್ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment