/newsfirstlive-kannada/media/post_attachments/wp-content/uploads/2024/10/JAGADISH-1.jpg)
ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮದಿಂದ ಲಾಯರ್ ಜಗದೀಶ್ ಮತ್ತು ರಂಜಿತ್ ಹೊರಬಂದಿದ್ದಾರೆ. ಕಿಚ್ಚ ನಿರೂಪಣೆಯ ರಿಯಾಲಿಟಿ ಶೋದಲ್ಲಿ ಹೊಡೆದಾಡಿಕೊಂಡ ಹಿನ್ನೆಲೆ ಇಬ್ಬರನ್ನು ಬಿಗ್ಬಾಸ್ ಮನೆಯಿಂದ ಹೊರ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಕನ್ನಡ ಪ್ರಾರಂಭವಾಗಿ 3 ವಾರ ಕಳೆದಿದೆ. ಆದರೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರಾರಂಭದಿಂದಲೂ ಮಾತಿನ ಚಕಮಕಿ ನಡೆಯುತ್ತಾ ಬಂದಿದೆ. ಅದರಲ್ಲೂ ಲಾಯರ್ ಜಗದೀಶ್ ಮತ್ತು ಮನೆಯ ಇತರೆ ಸ್ಪರ್ಧಿಗಳ ನಡುವೆ ಕೊಂಚ ವೈಮನಸ್ಸು ಬೆಳೆದಿತ್ತು. ಆದರೀಗ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವಷ್ಟರಮಟ್ಟಿಗೆ ಹೋಗಿದೆ.
ಬಿಗ್ ಬಾಸ್ ಮನೆಯಲ್ಲಿ ಏನಾಯ್ತ?
ನಿನ್ನೆ ಎಪಿಸೋಡ್ನಲ್ಲೂ ಕೂಡ ಸ್ಪರ್ಧಿಗಳ ನಡುವೆ ದೊಡ್ಡ ಜಗಳವಾಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳ ಏರ್ಪಟ್ಟಿತ್ತು. ಆ ಬಳಿಕ ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಮಾತುಕತೆ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕಿಚ್ಚನ ಕೊನೆಯ ಸೀಸನ್
ಇತ್ತೀಚೆಗೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಫ್ಯಾನ್ಸ್ಗೆ ಶಾಕ್ ನೀಡಿದ್ದರು. ಬಿಗ್ ಬಾಸ್ ಸೀಸನ್ 11 ನನ್ನ ಕೊನೆಯ ಸೀಸನ್ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದಾದ ಬಳಿಕ ಇದೀಗ ಸ್ಪರ್ಧಿಗಳ ನಡುವಿನ ಜಗಳ ಬಿಗ್ ಬಾಸ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಹುಚ್ಚಾ ವೆಂಕಟ್ ಔಟ್
ಹುಚ್ಚಾ ವೆಂಕಟ್ ಕೂಡ ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯೊಬ್ಬರ ಮೇಲೆ ಕೈ ಮಾಡಿದ್ದರು. ಕಿಚ್ಚನ ಕಾರ್ಯಕ್ರಮದಲ್ಲಿಯೇ ಕೈ ಮಿಲಾಯಿಸಿಕೊಂಡಿದ್ದರು. ಇದನ್ನು ನೋಡಿದ ಕಿಚ್ಚ ಸುದೀಪ್ ನೇರವಾಗಿ ಹುಚ್ಚಾ ವೆಂಕಟ್ ಅವರನ್ನ ಮನೆಯಿಂದ ಹೊರ ಹಾಕಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ