/newsfirstlive-kannada/media/post_attachments/wp-content/uploads/2025/01/MANJU_GOUTHAMI.jpg)
ಬಿಗ್ ಬಾಸ್ ಮುಗಿಸದ ಮೇಲೆ ಎಲ್ಲ ಸ್ಪರ್ಧಿಗಳು ಫುಲ್ ಜಾಲಿ ಮೂಡ್​ನಲ್ಲಿ ಫ್ಯಾಮಿಲಿ, ಸ್ನೇಹಿತರು, ಸಂಬಂಧಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಲ ಸ್ಪರ್ಧಿಗಳು ಕಿರುತೆರೆಯ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಬಿಗ್​ಬಾಸ್ ಕಂಟೆಸ್ಟೆಂಟ್​ ಮಂಜು ಅವರು ಗೌತಮಿ ಜೊತೆ ಫ್ರೆಂಡ್​ಶಿಪ್ ಕಟ್ ಮಾಡದಿರುವುದು ಏಕೆ ಎಂಬುದರ ಬಗ್ಗೆ ಕಾರಣ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/01/SUDEEP_1-2.jpg)
ನ್ಯೂಸ್​ಫಸ್ಟ್​ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬಿಗ್​ಬಾಸ್ ಸ್ಪರ್ಧಿ ಮಂಜು ಅವರು, ಸುದೀಪ್ ಸರ್ ಏನು ಹೇಳುತ್ತಿದ್ದಾರೆ ಎನ್ನುವುದು ಅರ್ಥ ಆಗುತ್ತಿತ್ತು. ಆದರೆ ಹೊರಗಡೆ ಏನು ಆಗುತ್ತಿದೆ ಎಂಬುದು ಗೊತ್ತಿರಲಿಲ್ಲ. ಏಕೆಂದರೆ ರಿಯಾಲಿಟಿ ಶೋ ಬಗ್ಗೆ ಐಡಿಯಾ ಇರಲಿಲ್ಲ. ಒಂದು ಹೊತ್ತು ಊಟ ಹಾಕಿದ್ದೀರಿ ಎಂದರೆ ಅದನ್ನು ಗೇಮ್ ಸಲುವಾಗೆ ಬದಲಾವಣೆ ಮಾಡಿಕೊಳ್ಳಲ್ಲ. ಒಂದೇ ಮನೆಯಲ್ಲಿ ಇರುತ್ತೇವೆ. ಹಾಗೆಲ್ಲಾ ಮಡೋಕೆ ನನಗೆ ಬರಲ್ಲ ಎಂದು ಹೇಳಿದ್ದಾರೆ.
ಯಾರೂ ಇಲ್ಲದಿದ್ದಾಗ ಯಾರೋ ಒಬ್ಬ ವ್ಯಕ್ತಿ ಸಹಾಯ ಮಾಡುತ್ತಾನೆ ಎಂದರೆ ಒಂದೇ ಮನೆಯಲ್ಲಿರುವಾಗ ತಕ್ಷಣ ಗೌತಮಿ ಜೊತೆ ಫ್ರೆಂಡ್​ಶಿಪ್ ಕಟ್ ಮಾಡೋಕೆ ಆಗಲ್ಲ. ಆಚೆ ಕಡೆ ಹೋಗಿ ನೋಡಿಕೊಳ್ಳೋಣ ಎನ್ನುವುದಕ್ಕೆ ಆಗಲ್ಲ. ಇಷ್ಟು ದಿನ ಇದ್ದಿದ್ದ ಸ್ನೇಹ ಏನಾಗುತ್ತದೆ?. ಪ್ರತಿಯೊಂದಕ್ಕೂ ರೀಸನ್ ಕೊಟ್ಟರೇ ಗೌತಮಿ ಜೊತೆ ನನ್ನನ್ನು ಆಚೆ ಇಡುತ್ತಾರೆ. ಕ್ಯಾಪ್ಟನ್ಸಿಯಲ್ಲಿ ಗೌತಮಿ ಆಡಿಯೇ ವಿನ್ ಆಗಿರೋದು. ನನ್ನ ಆಟ ನಾನು ಆಡಿ ಗೆದ್ದಿರೋದು ಅಷ್ಟೇ ಎಂದರು.
ಇಬ್ಬರದು ಬೇರೆ ಬೇರೆ. ನಾಮಿನೇಷನ್​ಗೆ ಮಾತನಾಡಿಕೊಂಡಿದ್ವಾ, ಪ್ಲಾನ್ ಮಾಡಿದ್ವಾ ಎನ್ನುವುದು ಏನು ಇಲ್ಲ. ಕಳಪೆ ಕೊಡುವುದರಲ್ಲಿ, ಉತ್ತಮ ಕೊಡುವುದರಲ್ಲಿ ಯಾವುದೇ ಮಾತನಾಡಿಕೊಂಡಿಲ್ಲ. ಇದೆಲ್ಲಕ್ಕಿಂತ ಮೇಲಾಗಿ ಬೇರೆಯವರ ಬಗ್ಗೆ ಕೆಟ್ಟದಾಗಿ ನಾವು ಮಾತನಾಡಿಲ್ಲ. ನಮ್ಮ ಕಷ್ಟ-ಸುಖ ಏನಿದೆಯೋ ಅದನ್ನ ಮಾತ್ರ ಮಾತನಾಡಿಕೊಂಡಿದ್ದು. ಹೀಗೆ ನಾವಿಬ್ಬರು ಒಳ್ಳೆಯವರು ಆಗಿದ್ದೇವು. ಸಡನ್ ಆಗಿ ಫ್ರೆಂಡ್​ಶಿಪ್ ಕಟ್ ಮಾಡೋದು ಬೇಸರ ಆಗುತ್ತದೆ ಎಂದು ಮಂಜು ಅವರು ಹೇಳಿದರು.
ಇದನ್ನೂ ಓದಿ: ಧನರಾಜ್​ಗೆ BIGG BOSS ಟ್ರೋಫಿ ಕೊಟ್ಟ ಹನುಮಂತ.. ದೋಸ್ತನ ಹಾಡಿ ಹೊಗಳಿದ ಪ್ರಾಣ ಸ್ನೇಹಿತ
ಗೌತಮಿಗೂ ಕಿಚ್ಚ ಸುದೀಪ್ ಅವರು ಹೇಳಿದ್ದರು. ಮಂಜು ಹೈವೇ ಅಲ್ಲಿ ಹೋಗುತ್ತಿದ್ದಾನೆ. ನೀನು ಪೆಟ್ಟಿ ಅಂಗಡಿಯಲ್ಲಿ ಇನ್ನು ಇರುತ್ತಿಯಾ ಅಂತ ಹೇಳಿದ್ರು. ಇದಕ್ಕೆ ಕ್ಯಾಪ್ಟನ್ ಆಗಿದ್ದಾಗ ಗೌತಮಿ ತಮ್ಮದೇ ಆದ ಸ್ವಂತ ನಿರ್ಧಾರ ತೆಗೆದುಕೊಂಡಿದ್ದರು. ಆ ಮೇಲೆ ಸರ್.. ನನಗೆ ಯೂ ಟರ್ನ್ ತಗೋ ಎಂದರು ಅದು ನನಗೆ ಅರ್ಥ ಆಗಿ ಆಟ ಬದಲಿಸಿದೆ. ಆಟಕ್ಕಾಗಿ ಬೇಕಂತಲೇ ಜಗಳ ಆಡೋದು, ನಾಮಿನೇಷನ್ ಮಾಡೋದು, ಮಾತಾಡದೇ ಇರೋದು ಇದೆಲ್ಲಾ ನನ್ನ ವ್ಯಕ್ತಿತ್ವಕ್ಕೆ ಬರಲ್ಲ. ಹೀಗಾಗಿ ಫ್ರೆಂಡ್​ಶಿಪ್ ಕಟ್ ಮಾಡೋಕೆ ಆಗಲಿಲ್ಲ ಎಂದು ಹೇಳಿದರು.
/newsfirstlive-kannada/media/post_attachments/wp-content/uploads/2025/01/MANJU_BIGG_BOSS_2.jpg)
ಕೊನೆ ವಾರದಲ್ಲಿ ಸೇವ್ ಆಗಬೇಕಾದರೆ ಸುದೀಪ್ ಸರ್​ಗೆ ಹೇಳಿದೆ. ಆಟಕ್ಕಾಗಿ ಸ್ನೇಹವನ್ನು ನಾನು ರೂಪಿಸಿಕೊಂಡಿಲ್ಲ. ನಿಜ ಜೀವನಕ್ಕೆ, ಮನೆಯಿಂದ ಹೊರಗೆ ಬಂದರೆ, ಖಂಡಿತ ನೀವು ಹೇಳಿದ್ದನ್ನು ಪಾಲಿಸುತ್ತೇನೆ ಎಂದು ಹೇಳಿದ್ದೆ. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಕೊಡದಿದ್ದಕ್ಕೆ ಕ್ಷಮಿಸಿ ಬಿಡಿ ಎಂದು ಸುದೀಪ್ ಸರ್ ಬಳಿ ಕೇಳಿಕೊಂಡಿದ್ದೆ ಎಂದು ಮಂಜು ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us