ರಜತ್- ಮಾಜಿ ಗೆಳತಿ ಫೋಟೋ ಇಟ್ಕೊಂಡು ವಸೂಲಿಗಿಳಿದ ಟ್ರೋಲರ್ಸ್.. ಫಿನಾಲೆ ವೇಳೆ ಹೊಸ ತಲೆನೋವು

author-image
Bheemappa
Updated On
ರಜತ್- ಮಾಜಿ ಗೆಳತಿ ಫೋಟೋ ಇಟ್ಕೊಂಡು ವಸೂಲಿಗಿಳಿದ ಟ್ರೋಲರ್ಸ್.. ಫಿನಾಲೆ ವೇಳೆ ಹೊಸ ತಲೆನೋವು
Advertisment
  • ಫೋಟೋ ಡಿಲೀಟ್ ಮಾಡಲು ಕೇಳಿದಾಗ ಹಣಕ್ಕೆ ಡಿಮ್ಯಾಂಡ್
  • ಯಾರದಾದ್ರು ಫೋಟೋ ಅಪ್​ಲೋಡ್ ಮಾಡುವಾಗ ಹುಷಾರ್
  • ರಜತ್ ಪತ್ನಿಯಿಂದ ಹಣ ಪಡೆದ ಟ್ರೋಲರ್​ ಎಸ್ಕೇಪ್, ಶೋಧ

ಬೆಂಗಳೂರು: ಟ್ರೋಲರ್ಸ್​ ಯಾವಗಲೂ ಯಾರನ್ನಾದರೂ ಕೆದಕುತ್ತಿರುತ್ತಾರೆ. ಕೇವಲ ಒಂದು ವಿಡಿಯೋ, ಫೋಟೋ ಸಿಕ್ಕರೆ ಸಾಕು ಅದನ್ನೇ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿ.. ಪೋಸ್ಟ್ ಮಾಡಿ.. ತೊಂದರೆ ಕೊಡುತ್ತಾರೆ. ಈ ಟ್ರೋಲರ್ಸ್​ ಬಿಗ್​ಬಾಸ್​ ಸ್ಪರ್ಧಿಗಳನ್ನು ಬಿಟ್ಟಿಲ್ಲ. ಬರೀ ಟ್ರೋಲ್ ಮಾಡ್ತಾರೆ ಅಂದುಕೊಂಡರೇ, ನೇರ ಹಣ ವಸೂಲಿಗೂ ಇಳಿದು ಬಿಟ್ಟಿದ್ದಾರೆ.

ಕನ್ನಡದ ಬಿಗ್​ಬಾಸ್ ಸೀಸನ್​ 11 ರಲ್ಲಿ ಸ್ಪರ್ಧಿಯಾಗಿ ಆಡುತ್ತಿರುವ ರಜತ್​ ಅವರಿಗೆ ಟ್ರೋಲರ್ಸ್​ ತಲೆ ನೋವಾಗಿ ಕಾಡುತ್ತಿದ್ದಾರೆ. ರಜತ್ ಹಾಗೂ ಅವರ ಮಾಜಿ ಗೆಳತಿಯ ಫೋಟೋ ಶೇರ್ ಮಾಡಿ ತೊಂದರೆ ಮಾಡಿದ್ದಾರೆ. ಮಾಜಿ ಗೆಳತಿ- ರಜತ್ ಇರುವ ಫೋಟೋ ಅಪ್​ಲೋಡ್ ಮಾಡಿ ಟ್ರೋಲ್ ಮಾಡುತ್ತಿದ್ದರು. ಇದಕ್ಕೆ ರಜತ್ ಅವರ ಪತ್ನಿ ಅಕ್ಷಿತಾ ಅವರು ಫೋಟೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.

publive-image

ಇದನ್ನೂ ಓದಿ: Bigg Bossಗೆ ಸುದೀಪ್​ ವಿದಾಯ.. ಕೊನೆಯ ನಿರೂಪಣೆ ಬಗ್ಗೆ ಕಿಚ್ಚ ಭಾವುಕ ಪೋಸ್ಟ್​​

ರಜತ್ ಪತ್ನಿ ಫೋಟೋ ಡಿಲೀಟ್​ಗೆ ಮನವಿ ಮಾಡುತ್ತಿದ್ದಂತೆ ಟ್ರೋಲರ್ಸ್​ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಅದರಂತೆ ಟ್ರೋಲರ್​ ಒಬ್ಬ ಕಳುಹಿಸಿದ ಯುಪಿಐ ಐಡಿಗೆ ರಜತ್ ಪತ್ನಿ, 6,500 ರೂಪಾಯಿಗಳನ್ನು ಕುಳುಹಿಸಿದ್ದಾರೆ. ಈ ಹಣ ಹಾಕಿದ ಮೇಲೆ ಮತ್ತೆ ಬೇರೆ ಟ್ರೋಲರ್​ ಪೇಜ್​ಗಳಲ್ಲಿ ಫೋಟೋ ಅಪ್​ಲೋಡ್ ಮಾಡಲಾಗಿದೆ. ಮತ್ತೆ ಫೋಟೋ ಡಿಲೀಟ್ ಮಾಡಲು ಮನವಿ ಮಾಡಿದಾಗ ಟ್ರೋಲರ್ಸ್​ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ.

ಇದರಿಂದ ಬೇಸತ್ತ ರಜತ್ ಪತ್ನಿ ಕೊನೆಗೆ 10ಕ್ಕೂ ಹೆಚ್ಚು ಟ್ರೋಲ್ ಪೇಜ್​ಗಳ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಿದ್ದಾರೆ. ಠಾಣೆಯಲ್ಲಿ ಕೇಸ್ ದಾಖಲು ಆಗುತ್ತಿದ್ದಂತೆ ಎಲ್ಲ ಪೇಜ್​ಗಳಲ್ಲಿ ಫೋಟೋ ಡಿಲೀಟ್ ಮಾಡಲಾಗಿದೆ. ಅಲ್ಲದೇ ಅಕೌಂಟ್​ ಅನ್ನು ಡಿಆ್ಯಕ್ಟಿವ್ ಮಾಡಿದ್ದಾರೆ. ಇನ್ನು ಪೊಲೀಸರು ಬ್ಲಾಕ್ ಮೇಲ್ ಮಾಡಿ ಹಣ ಸೂಲಿಗೆ ಮಾಡಿದ ಅಪರಿಚಿತ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment