/newsfirstlive-kannada/media/post_attachments/wp-content/uploads/2025/01/HANUMANTU_MOKSHITHA.jpg)
ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್​ ಫಿನಾಲೆಗೆ ಇನ್ನೇನು ಕೇವಲ ಎರಡು ದಿನಗಳು ಮಾತ್ರ ಉಳಿದಿದ್ದು ಇಡೀ ನಾಡಿನ ಕುತೂಹಲ ಹೆಚ್ಚಿಸಿದೆ. ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವುದು ಫಿನಾಲೆಯಲ್ಲೇ ಗೊತ್ತಾಗಲಿದೆ. ಸದ್ಯ ವೋಟ್​ಗಾಗಿ ಕಂಟೆಸ್ಟೆಂಟ್ಸ್​ ಪ್ರೇಕ್ಷಕರ ಬಳಿ ಮನವಿ ಮಾಡಿಕೊಳ್ಳಲಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನನಗೆ ವೋಟ್ ಕೊಡಿ ಎಂದು ಕೇಳಿಕೊಂಡಿದ್ದಾರೆ.
ಹನುಮಂತು, ಮೋಕ್ಷಿತಾ, ಭವ್ಯ, ತ್ರಿವಿಕ್ರಮ್, ಮಂಜು ಹಾಗೂ ರಜತ್ ಕಿಶನ್ ಇವರೆಲ್ಲಾ ಇಂದು ಬಿಗ್​ ಬಾಸ್​ ಮನೆಯಲ್ಲಿನ ತಮ್ಮ ಅನುಭವಗಳನ್ನು ಜನರ ಜೊತೆ ಹಂಚಿಕೊಳ್ಳಲಿದ್ದಾರೆ. ಬಿಗ್​ಬಾಸ್ ಜರ್ನಿ ಹೇಗಿತ್ತು, ಅಲ್ಲಿನ ಅಡೆತಡೆಗಳು ಏನು, ಯಾರು ಟಾರ್ಗೆಟ್ ಮಾಡಿದರು, ಟಾಸ್ಕ್​ಗಳನ್ನು ಹೇಗೆಲ್ಲಾ ಆಡಲಾಯಿತು ಎನ್ನುವ ಮಾಹಿತಿ ಶೇರ್ ಮಾಡಿಕೊಳ್ಳಲಿದ್ದಾರೆ. ನನಗೆ ವೋಟ್ ಮಾಡಿ ಗೆಲ್ಲಿಸಿ ಎಂದು ತಮ್ಮದೇ ಮಾದರಿಯಲ್ಲಿ ಬಿಗ್​ಬಾಸ್ ಸ್ಪರ್ಧಿಗಳು ವೋಟ್​ ಕೇಳಲಿದ್ದಾರೆ.
ಇದೇ ವೇಳೆ ಪ್ರೇಕ್ಷರಕ ಮುಂದೆ ಮಾತನಾಡಿದ ತ್ರಿವಿಕ್ರಮ್ ಲವ್​ ಯು ಆಲ್. ಎಲ್ಲ ಅಡೆತಡೆಗಳನ್ನು ದಾಟಿ ಇಲ್ಲಿಗೆ ಬಂದು ನಿಂತುಕೊಂಡರೆ ನಿಮ್ಮ ಅಣ್ಣನೋ, ತಮ್ಮನೋ ಈ ತರ ಇರುತ್ತಾನೆಂದು ತಿಳಿದುಕೊಳ್ಳಿ ಎಂದು ಹೇಳಿ ವೋಟ್​ಗಾಗಿ ಮನವಿ ಮಾಡಿದ್ದಾರೆ. ಹನುಮಂತು ಮಾತ್ರ ಪ್ರೇಕ್ಷಕರನ್ನು ನಗಿಸಿದ್ದಾರೆ. ಭಯ ಬಂದೈತಿ, ನಿಮ್ಮ ನೋಡಿ ಹೆದರಿಕೆ ಬರ್ತೈತಿ ಎಂದು ರಾಯಚೂರು ಸ್ಲ್ಯಾಂಗ್​ ಅಲ್ಲೇ ಮಾತನಾಡಿದ್ದಾರೆ.
ಮೋಕ್ಷಿತಾ ಕೂಡ ಮಾತನಾಡಿ ಇಲ್ಲಿಗೆ ಬಂದಿರೋದು ನಾವೊಬ್ಬರೇ, ಆಟ ಆಡಿರೋದು ನಾವೋಬ್ಬರೇ, ಗೆಲ್ಲೋದು ಒಬ್ಬರೇ ಎಂದು ಹೇಳಿದ್ದಾರೆ. ಈ ವೇಳೆ ಪ್ರೇಕ್ಷಕರೆಲ್ಲಾ ಹೋ.. ಎಂದು ಕೂಗಿದ್ದಾರೆ. ಸೀಸನ್​ 11ರಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕೊಂಚ ಕಷ್ಟ. ಏಕೆಂದರೆ ಎಲ್ಲರೂ ತಮ್ಮ ಟಾಸ್ಕ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಕ್ಯಾಪ್ಟನ್​ ಆಗಿದ್ದಾರೆ, ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈ ಎಲ್ಲದರ ಮಧ್ಯೆ ಕೊನೆಯಲ್ಲಿ ಮತದಾರ ಪ್ರಭುಗಳು ಯಾರ ಕಡೆ ಹೆಚ್ಚು ಒಲುವು ತೋರಿದ್ದಾರೆ ಎಂದು ಗೊತ್ತಾಗುವುದು ಬಾಕಿ ಇದೆ. ಇದು ಗೊತ್ತಾದರೆ ಬಿಗ್​ಬಾಸ್ ವಿನ್ನರ್ ಹೆಸರು ಸ್ಪಷ್ಟವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ