/newsfirstlive-kannada/media/post_attachments/wp-content/uploads/2025/01/HANU_DHANU.jpg)
ಬಿಗ್ ಬಾಸ್ ಆರಂಭವಾದರೆ ಸ್ಪರ್ಧಿಗಳ ಮಧ್ಯೆ ಗೆಳೆತನ, ಸ್ನೇಹ, ಪ್ರೀತಿ ಹೂವಿನಂತೆ ಅರಳಿ ಬಿಡುತ್ತೆ. ಎಲಿಮಿನೇಟ್ ಆದ ಮೇಲೆ ಮನೆ ಬಿಟ್ಟು ಹೋಗುವಾಗ ಸ್ಪರ್ಧಿಗಳು ಕಣ್ಣೀರಿನ ವಿದಾಯ ಹೇಳುವುದೇ ಹೆಚ್ಚು. ಮನೆ ಬಿಟ್ಟು ಹೋಗುತ್ತಿದ್ದೇನೆ ಎನ್ನುವುದು ಒಂದಾದರೆ, ಸ್ನೇಹಿತರ ಸಂಬಂಧ ಕಡಿದುಕೊಂಡು ಹೋಗುತ್ತಿದ್ದೇನೆಲ್ಲ ಎನ್ನುವ ಇನ್ನೊಂದು ನೋವು. ಇದೇ ರೀತಿ ಧನರಾಜ್ ಮನೆ ಬಿಟ್ಟು ಹೋಗುವಾಗ ಹನುಮಂತು ಭಾವುಕರಾಗಿದ್ದಾರೆ.
ಹನುಮಂತು ಹಾಗೂ ಧನರಾಜ್ ನಡುವೆ ಏರ್ಪಟ್ಟಿರುವ ಸ್ನೇಹ ಬಿಡಿಸಲಾಗದ ಸಂಬಂಧ ಎಂದು ಹೇಳಬಹುದು. ಬಿಗ್ಬಾಸ್ ಸೀಸನ್ 11ರಲ್ಲಿ ಇಬ್ಬರು ಪ್ರಾಣ ಸ್ನೇಹಿತರು ಎನ್ನುವುದು ಇಡೀ ನಾಡಿದ್ಯಾಂತ ಈಗಾಗಲೇ ಗೊತ್ತಾಗಿದೆ. ಈ ಸಲದ ಬಿಗ್ಬಾಸ್ಗೆ ಮೆರುಗು ಬಂದಿದ್ದು ಎಂದರೆ ‘ದೋಸ್ತ’ ಎನ್ನುವ ಪದದಿಂದ ಎನ್ನಬಹುದು. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಧನು-ಹನು ಇಬ್ಬರು ಎಲ್ಲಿ ಇದ್ದರೂ ದೋಸ್ತ.. ದೋಸ್ತ ಎನ್ನುವ ಪದನೇ ಹೆಚ್ಚು ಕೇಳಿ ಬಂದಿದೆ. ಕಾಮಿಡಿ ಮಾಡುವಾಗಲೂ ದೋಸ್ತ ಎನ್ನುವ ಪದ ಉಚ್ಛಾರಣೆ ಆಗಿತ್ತು. ಸುದೀಪ್ ಅವರು, ನಿಮ್ಮ ದೋಸ್ತನ ಬಗ್ಗೆ ಏನು ಹೇಳುತ್ತೀರಾ ಎಂದು ಕೂಡ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ:BIGG BOSS; ನೇರಾನೇರ ಫೈಟ್.. ರಜತ್- ಮಂಜು ನಡುವೆ ಮಿತಿ ಮೀರಿದ ಬೈಗುಳ, ಪಂಥಾಹ್ವಾನ
ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಸಮೀಪದಲ್ಲಿ ಬಂದಾಗಲೇ ಧನರಾಜ್ ಆಚಾರ್ ಎಲಿಮಿನೇಟ್ ಆಗಿರುವುದು ನೋವಿನ ಸಂಗತಿ. ಏಕೆಂದರೆ ಇಬ್ಬರು ಜೋಡಿಯಾಗಿ ಇನ್ನೊಂದು ವಾರ ಇದ್ದಿದ್ದರೇ ಬಿಗ್ಬಾಸ್ ಶೋನೇ ಮುಗಿದು ಹೋಗುತ್ತಿತ್ತು. ಧನು-ಹನು ಇಬ್ಬರು ಅಳುವ ಸಂದರ್ಭನೇ ಬರುತ್ತಿರಲಿಲ್ಲ. ಆದರೆ ಕೊನೆ ವಾರದಲ್ಲಿ ಧನರಾಜ್ ಮನೆ ಬಿಟ್ಟು ಹೋಗುವಾಗ ಹನುಮಂತು ಕಣ್ಣೀರು ಹಾಕಿದ್ದಾರೆ. ಈ ವೇಳೆ ಭವ್ಯ ಅವರು, ಹನಮಂತನ ಸಮಾಧಾನ ಮಾಡಿದ್ದಾರೆ. ಏನಕ್ಕೆ ಅಳುತ್ತಿಯಾ, ಅಳಬೇಡ, ಇನ್ನೊಂದು ವಾರ ಅಷ್ಟೇ. ನಾವೆಲ್ಲ ಇದಿವಿಯಲ್ಲ ಎಂದಿದ್ದಾರೆ. ಆದರೆ ಹನುಮಂತನ ಅಳು ಮಾತ್ರ ಮತ್ತಷ್ಟು ಹೆಚ್ಚಾಗಿತ್ತು ಎನ್ನುವುದು ವಿಡಿಯೋದಿಂದ ಗೊತ್ತಾಗುತ್ತದೆ.
ಇನ್ನು ಕಿಚ್ಚ ಸುದೀಪ್ ಮುಂದೆ ಧನರಾಜ್ ಕೂಡ ಕಣ್ಣೀರು ಹಾಕಿರುವುದು ಪ್ರೇಕ್ಷಕರ ಮನ ಕದಡಿದೆ. ಧನರಾಜ್ ಭಾವುಕದಲ್ಲೇ ಮಾತನಾಡಿ, ಇಲ್ಲಿಯವರೆಗೆ ಮನೆಯಲ್ಲಿದ್ದಿದ್ದು ಖುಷಿ ನೀಡಿದೆ. ಈ ವೇಳೆ ಹನುಮಂತನ ಅಳು ನೋಡಲಾಗದೇ ‘ದೋಸ್ತಾ.. ನನ್ನ ಪ್ರಾಣ ಕಣೋ ನೀನು’ ಎಂದು ಜೋರಾಗಿ ಧನು ಕೂಗಿ ಹೇಳಿದ್ದಾರೆ. ಈ ವೇದಿಕೆಯಲ್ಲಿ ನಿಮ್ಮ ಜೊತೆ ಮಾತನಾಡಿದ್ದು ಪುಣ್ಯ. ಹನುಮಂತ ನನ್ನ ಜೀವನ. ಅವನು ಶಕ್ತಿ. ಜೊತೆಯಲ್ಲೇ ನಿಂತಿದ್ದ ಎಂದು ಸುದೀಪ್ ಬಳಿ ಧನು ಹೇಳಿದ್ದಾರೆ. ಅಲ್ಲದೇ ಧನು-ಹನುನ ನೋಡಿ ವೇದಿಕೆಯಲ್ಲಿ ಸುದೀಪ್ ಅವರು ಸೈಲೆಂಟ್ ಆದಂತೆ ಕಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ