/newsfirstlive-kannada/media/post_attachments/wp-content/uploads/2025/01/HANUMANTU-2.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11, ಗ್ರ್ಯಾಂಡ್​ ಫಿನಾಲೆಗೆ ಮತ್ತಷ್ಟು ರಂಗು ಹೆಚ್ಚಾಗುತ್ತಿದೆ. ಕಳೆದ ಬಿಗ್ ಬಾಸ್​ನಂತೆ ಈ ಬಾರಿಯ ಫಿನಾಲೆಗೆ 6 ಸ್ಪರ್ಧಿಗಳು ಉಳಿದುಕೊಂಡಿದ್ದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದರಲ್ಲಿ ಒಬ್ಬರಿಗೆ ಮಾತ್ರ ಆ ಅದೃಷ್ಟ ಒಲಿದು ಬರಲಿದೆ. ಅದು ಯಾರೆಂಬುದು ಕುತೂಹಲ ಮೂಡಿಸಿದೆ.
ಬಿಗ್​ಬಾಸ್​ ಮನೆಯ ಜರ್ನಿ ಹೇಗಿತ್ತು ಎಂದು ಅಭಿಮಾನಿಗಳ ಜೊತೆ ಇಂದು ರಾತ್ರಿಯ ಎಪಿಸೋಡ್​ನಲ್ಲಿ ಕಂಟೆಸ್ಟೆಂಟ್ಸ್ ಹಂಚಿಕೊಳ್ಳಲಿದ್ದಾರೆ. ಮೆನಯಲ್ಲಿ ಹೇಗೆಲ್ಲಾ ಇದ್ದೀವಿ, ಏನೆಲ್ಲಾ ಆಯಿತು, ಯಾರು ತಮ್ಮನ್ನು ಟಾರ್ಗೆಟ್ ಮಾಡಿದ್ರು, ಯಾವ್ಯಾವ ಅಡೆತಡೆಗಳು ಇದ್ದವು, ಹೇಗೆ ಫಿನಾಲೆ ಹಂತಕ್ಕೆ ಬರಲು ಸಾಧ್ಯವಾಯಿತು ಹೀಗೆ ಹಲವಾರು ಮಾಹಿತಿಗಳನ್ನು ಪ್ರೇಕ್ಷಕರ ಜೊತೆ ಸ್ಪರ್ಧಿಗಳು ಹಂಚಿಕೊಳ್ಳಲಿದ್ದಾರೆ. ಇದು ಅಲ್ಲದೇ ನನಗೆ ವೋಟ್ ಕೊಡಿ ಎಂದು ಎಲ್ಲ ಸ್ಪರ್ಧಿಗಳು ವೀಕ್ಷಕರಲ್ಲಿ ಪೈಪೋಟಿ ಬಿದ್ದಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಅದೇ ಇವತ್ತಿನ ಎಪಿಸೋಡ್​ನ ಸ್ಪೆಷಲ್ ಆಗಿರಲಿದೆ.
ಇದನ್ನೂ ಓದಿ: Update; ಚಲಿಸುತ್ತಿದ್ದ ರೈಲಿನಿಂದ ಜಂಪ್.. 12 ಪ್ರಯಾಣಿಕರ ಜೀವ ಘೋರ ಅಂತ್ಯ
ಇದೇ ವೇಳೆ ಪ್ರೇಕ್ಷಕ ಮಹಾಪ್ರಭುಗಳಿಂದ ನನಗೆ ವೋಟ್ ಮಾಡಿ ಎಂದು ಬಿಗ್​ಬಾಸ್​ ಕಂಟೆಸ್ಟೆಂಟ್ಸ್ ಮನವಿ ಮಾಡಿಕೊಳ್ಳಲಿದ್ದಾರೆ. ಪ್ರೋಮೋದಲ್ಲಿ ಹನುಮಂತು ಹೇಳಿರುವ ಅದೊಂದು ಡೈಲಾಗ್​ನಿಂದ ಪ್ರೇಕ್ಷಕ ಪ್ರಭುಗಳೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಇನ್ನು ಎಲ್ಲರೂ ಅಂದುಕೊಂಡಂತೆ ಈ ಸಲದ ಬಿಗ್​​ಬಾಸ್ ಟ್ರೋಫಿ ಹನುಮಂತು ಗೆಲ್ಲುತ್ತಾನೆ ಎಂದು ಹೇಳಲಾಗುತ್ತಿದೆ. ಇದೆಲ್ಲದಕ್ಕೂ ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ ಉತ್ತರ ಕೊಡಲಿದೆ. ಕಾಯಬೇಕು ಅಷ್ಟೇ.
ಮನೆಯಲ್ಲಿ ಉಳಿದಿರುವ ಕಂಟೆಸ್ಟೆಂಟ್​ಗಳ ಪೈಕಿ ಒಬ್ಬರು ಮಾತ್ರ ವಿನ್ನರ್ ಆಗಲಿದ್ದಾರೆ. ಇದಕ್ಕಾಗಿ ಇಷ್ಟು ದಿನ ಮನೆಯಲ್ಲಿ ಸಾಕಷ್ಟು ಟಾಸ್ಕ್​ಗಳಲ್ಲಿ ಯಶಸ್ಸು ಗಳಿಸಿಕೊಂಡು ಕೊನೆ ಹಂತಕ್ಕೆ ಬಂದಿದ್ದಾರೆ. 17 ಸ್ಪರ್ಧಿಗಳ ಪೈಕಿ ಈಗ 6 ಸ್ಪರ್ಧಿಗಳು ಉಳಿದುಕೊಂಡಿದ್ದು ಈ ಆರರಲ್ಲಿ ಓರ್ವ ಸ್ಪರ್ಧಿ ವಿಜಯಶಾಲಿ ಆಗಲಿದ್ದಾರೆ. ಗೆದ್ದ ಸ್ಪರ್ಧಿಗೆ ಬಿಗ್​ಬಾಸ್​ ಟ್ರೋಫಿ ಜೊತೆಗೆ ಬಹುಮಾನಗಳು ಹರಿದು ಬರುವುದು ಖಚಿತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ