/newsfirstlive-kannada/media/post_attachments/wp-content/uploads/2025/01/RAJATH_KISHAN-1.jpg)
ಬಿಗ್ಬಾಸ್ ಕೊನೆಯ ವಾರ, ಅಂತಿಮ ದಿನಗಳಲ್ಲಿ ಮನೆಯ ಸ್ಪರ್ಧಿಗಳು ಟಾಸ್ಕ್ಗಳಲ್ಲಿ ಫುಲ್ ಅಲರ್ಟ್ ಆಗಿದ್ದಾರೆ. ಇಷ್ಟು ದಿನ ಆಡಿದ್ದಕ್ಕಿಂತ ಈ ವಾರದಲ್ಲಿ ಆಡುವುದು ಅತ್ಯಂತ ಮುಖ್ಯವಾಗಿದೆ. ಡಬಲ್ ಎಲಿಮಿನೇಷನ್ನಲ್ಲಿ ಗೌತಮಿ ಜಾಧವ್ ಹಾಗೂ ಧನರಾಜ್ ಮನೆ ಖಾಲಿ ಮಾಡಿದ್ದಾರೆ. ಸದ್ಯ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು, ಟಾಸ್ಕ್ ವೇಳೆ ಮಾತಿನ ಮಲ್ಲಯುದ್ಧವನ್ನೇ ಮಾಡಿದ್ದಾರೆ.
ಇಷ್ಟು ದಿನ ಬಿಗ್ಬಾಸ್ನಲ್ಲಿ ಆಡುವಾಗ ಸ್ಪರ್ಧಿಗಳಿಗೆ ಬೇರೆ ಯಾರ ಮೇಲಾದ್ರೂ ಕೋಪ, ಬೇಸರ, ಹತಾಶೆ ಕಾಡುತ್ತಿದ್ದರೇ ಅದನ್ನು ತೀರಿಸಿಕೊಳ್ಳಲು ಬಿಗ್ಬಾಸ್ ಅನುಮತಿ ಕೊಟ್ಟಿದ್ದರು. ಇದಕ್ಕಾಗಿ ಟಾಸ್ನಲ್ಲಿ ಫೋಟೋವನ್ನು ಮಡಿಕೆಗೆ ಅಂಟಿಸಿ ಹೊಡೆದು ಸ್ಪರ್ಧಿಗಳು ಕೋಪ ತೀರಿಸಿಕೊಳ್ಳಬಹುದು. ಇಂತಹ ಟಾಸ್ಕ್ನಲ್ಲಿ ಸ್ಪರ್ಧಿಗಳು ತಮ್ಮ ವಿರೋಧಿಯ ಫೋಟೋ ಅಂಟಿಸಿ ಮನ ಬಂದಂತೆ ಚಚ್ಚಿ ಬಿಸಾಕಿದ್ದಾರೆ.
ಇದನ್ನೂ ಓದಿ: ರಜತ್- ಮಾಜಿ ಗೆಳತಿ ಫೋಟೋ ಇಟ್ಕೊಂಡು ವಸೂಲಿಗಿಳಿದ ಟ್ರೋಲರ್ಸ್.. ಫಿನಾಲೆ ವೇಳೆ ಹೊಸ ತಲೆನೋವು
ಮೋಕ್ಷಿತಾ, ಭವ್ಯ ಇಬ್ಬರು ತ್ರಿವಿಕ್ರಮ್ ಫೋಟೋಗೆ ಹೊಡೆದು ತಮ್ಮ ಕೋಪ ತಣ್ಣಗೆ ಮಾಡಿಕೊಂಡಿದ್ದಾರೆ. ರಜತ್ ಕೂಡ ಯಾರದೋ ಫೋಟೋಗೆ ಹೊಡೆದಿದ್ದಾರೆ. ಅದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಅದರಂತೆ ಮಂಜು ಅವರು ರಜತ್ ಫೋಟೋವನ್ನ ಮಡಿಕೆಗೆ ಅಂಟಿಸಿ ಮನಸೋ ಇಚ್ಛೆ ಹೊಡೆದಿದ್ದಾರೆ. ಈ ವೇಳೆ ರಜತ್ ಹಾಗೂ ಮಂಜು ನಡುವೆ ವಾಕ್ಸಮರ ನಡೆದು ಹೋಗಿದೆ.
ರಜತ್ ಫೋಟೋ ಇರುವ ಮಡಿಕೆ ಹೊಡೆದ ಮಂಜು ಕೋಪದಲ್ಲೇ, ಮನೆಗೆ ಬಂದಾಗ ಗ್ಯಾಂಗ್ಗಳನ್ನ ಹರಿದು ಹಾಕ್ತಿನಿ, ಕಿತ್ತಾಕ್ತೀನಿ ಅಂತ ಹೇಳಿದ್ರಿ. ಮುಂಚೆ ನಂದು, ಗೌತಮಿಯ ಫ್ರೆಂಡ್ಶಿಪ್ನ ಏನೂ ಮಾಡೋಕೆ ಆಗಿಲ್ಲ. ಇದಕ್ಕೆ ರಜತ್ ಮೊದಲು 7-8 ವಾರ ನೀನು ಗುಳ್ಳೆ ನರಿ ತರ ಇದ್ದೆ ಎಂದು ಹಂಗಿಸಿದ್ದಾರೆ. ಹೀಗೆ ಅನ್ನುತ್ತಿದ್ದಂತೆ ನಿನ್ನ ವ್ಯಕ್ತಿತ್ವ ನೀನು ನೋಡಿಕೋ ಹೋಗೋಲೇ.. ಎಂದು ಮಂಜು ಏಕವಚನದಲ್ಲೇ ಬೈದಿದ್ದಾರೆ. ಬೈಗುಳ ಹೀಗೆ ತಾರಕಕ್ಕೇರಿದ್ದು ರಜತ್ ಸೆಡೆ ... ... ಎಂದು ಬೈದಿದ್ದಾರೆ. ನಿನ್ನ ಯೋಗ್ಯತೆ ಅಷ್ಟೇ, ಬರ್ತಿಯೇನೋ ಒನ್ ಆ್ಯಂಡ್ ಒನ್ ಬರ್ತಿಯಾ ಎಂದು ರಜತ್, ಜಗಳಕ್ಕೆ ಮಂಜುನಾ ಕರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ