/newsfirstlive-kannada/media/post_attachments/wp-content/uploads/2025/01/SUDEEP-5.jpg)
ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಯಶಸ್ವಿಯಾಗಿ ಸಾಗುತ್ತಿದ್ದು ಇನ್ನೇನು ಕೊನೆ ಹಂತಕ್ಕೆ ಬಂದಿದೆ. ಹನುಮಂತು ಅವರು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದು ಗೌತಮಿ, ಭವ್ಯ, ಧನರಾಜ್, ರಜತ್ ಕಿಶನ್, ಮೋಕ್ಷಿತಾ, ಮಂಜು ಹಾಗೂ ತ್ರಿವಿಕ್ರಮ್ ಈ 7 ಸ್ಪರ್ಧಿಗಳಲ್ಲಿ ಒಬ್ಬರು ಈ ವಾರ ಎಲಿಮಿನೇಟ್ ಆಗಿ ಹೊರ ಬರುವುದು ಖಚಿತವಾಗಿದೆ. ಇದರ ಮಧ್ಯೆ ಇದೇ ಸೀಸನ್ನಲ್ಲಿದ್ದ ಕೆಲ ಸ್ಪರ್ಧಿಗಳು ಮತ್ತೆ ಬಿಗ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಇದ್ದು ಇಂತಹ ಸಂದರ್ಭದಲ್ಲಿ ಮನೆಯಿಂದ ಸ್ಪರ್ಧಿಗಳು ಹೊರ ಬಂದರೆ ದೊಡ್ಡ ನಷ್ಟ ಉಂಟಾಗುತ್ತದೆ. ಈ ವಾರ ಬಿಗ್ಬಾಸ್ ಸ್ಪರ್ಧಿಗಳಿಗೆ ಮುಖ್ಯವಾದ ಟರ್ನಿಂಗ್ ಪಾಯಿಂಟ್ ಆಗಿದೆ. ಇದಕ್ಕಾಗಿ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳಿಗೆ ಇನ್ನಷ್ಟು ಎನರ್ಜಿ, ಖುಷಿ ತುಂಬಲು ಈಗಾಗಲೇ ಮನೆಯಿಂದ ಹೊರ ಬಂದಿರುವ ಸ್ಪರ್ಧಿಗಳು ಅತಿಥಿಗಳಾಗಿ ವಾಪಸ್ ಮನೆಗೆ ತೆರಳಲಿದ್ದಾರೆ.
ಶಿಶಿರ್, ಗೋಲ್ಡ್ ಸುರೇಶ್, ಐಶ್ವರ್ಯ, ಚೈತ್ರಾ, ಲಾಯರ್ ಜಗದೀಶ್, ಹಂಸ, ಮಾನಸ, ಧರ್ಮ ಕೀರ್ತಿರಾಜ್ ಈ ಎಲಿಮಿನೇಟ್ ಸ್ಪರ್ಧಿಗಳಲ್ಲಿ ಯಾರದರೂ ಮತ್ತೆ ಬಿಗ್ಬಾಸ್ ಮನೆಗೆ ಹೋಗುವ ಸಾಧ್ಯತೆ ಇದೆ. ಇವರು ಒಳಗೆ ಹೋಗಿ ಸ್ಪರ್ಧಿಗಳಿಗೆ ಎನರ್ಜಿ ತುಂಬುತ್ತಾರೆ. ಮಾಡುತ್ತಿರುವ ತಪ್ಪುಗಳ ಕುರಿತು ಮನವರಿಕೆ ಮಾಡಿಕೊಡುತ್ತಾರೆ. ಮನೆಯಲ್ಲಿ ವರ್ತನೆ ಯಾವ ರೀತಿ ಇದೆ ಎನ್ನುವುದನ್ನು ತಿಳಿ ಹೇಳಿ ವಾಪಸ್ ಆಗುತ್ತಾರೆ ಎನ್ನಲಾಗಿದೆ.
ಆದರೆ ಹೊರಗೆ ಬಂದ ಈ ಸ್ಪರ್ಧಿಗಳಲ್ಲಿ ಯಾರು ಮತ್ತೆ ಎಂಟ್ರಿ ಕೊಡುತ್ತಾರೆ ಎನ್ನುವುದು ಕುತೂಹಲವಾಗಿದೆ. ಸೀಸನ್ 10ರ ಕೆಲ ಸ್ಪರ್ಧಿಗಳು ಈಗಾಗಲೇ ಬಿಗ್ಬಾಸ್ ಮನೆಗೆ ಬಂದು ಹೋಗಿದ್ದಾರೆ. ಸ್ಯಾಂಡಲ್ವುಡ್ನ ಬ್ಯೂಟಿ ಅದಿತಿ ಪ್ರಭುದೇವ್, ಶರಣ್ ಅವರು ಬಂದು ಗ್ರ್ಯಾಂಡ್ ಫಿನಾಲೆ ಟಿಕೆಟ್ ಅನ್ನು ಹನುಮಂತುಗೆ ಕೊಟ್ಟು ಶುಭ ಹೇಳಿದ್ದಾರೆ. ಸಂಕ್ರಾಂತಿ ಸಡಗರದಲ್ಲಿ ಹಿರಿಯ ನಟಿ ತಾರಾ ಕೂಡ ಮನೆಗೆ ಬಂದು ಎಲ್ಲರ ಜೊತೆ ಸಮಯ ಕಳೆದಿದ್ದಾರೆ. ಬಿಗ್ಬಾಸ್ನ ಕೊನೆಯ ದಿನಗಳಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಎಂಟ್ರಿ ಕೊಡುವುದು ಪ್ರೇಕ್ಷಕರ ಕುತೂಹಲ ಇಮ್ಮಡಿಗೊಳಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ