/newsfirstlive-kannada/media/post_attachments/wp-content/uploads/2025/01/BBK-1.jpg)
ಬಿಗ್ಬಾಸ್ ಮನೆಯಲ್ಲಿ ಫಿನಾಲೆ ಟಿಕೆಟ್ ಬಗ್ಗೆ ಟಾಸ್ಕ್ ನಡೆದಿದ್ದವು. ಎಲ್ಲ ಸ್ಪರ್ಧಿಗಳು ಸಾಕಷ್ಟು ಕಷ್ಟಪಟ್ಟು ಟಾಸ್ಕ್ಗಳನ್ನು ಪೂರ್ಣಗೊಳಿಸಿದ್ದರು. ಸದ್ಯ ಮನೆಯಲ್ಲಿರುವ 9 ಸ್ಪರ್ಧಿಗಳಲ್ಲಿ ಯಾರು ಬಿಗ್ಬಾಸ್ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಇದಕ್ಕೆ ಉತ್ತರ ಕೂಡ ಈಗಾಗಲೇ ಸಿಕ್ಕಾಗಿದೆ. ಗ್ರ್ಯಾಂಡ್ ಫಿನಾಲೆ ಟಿಕೆಟ್ ಅನ್ನು ಒಟ್ಟು ನಾಲ್ವರು ಸ್ಪರ್ಧಿಗಳು ಪಡೆದುಕೊಂಡಿದ್ದಾರೆ.
ಸೀಸನ್ 11ರ ಬಿಗ್ಬಾಸ್ ಮನೆಯಲ್ಲಿನ ಟಾಸ್ಕ್ಗಳು ತುಂಬಾ ಕಷ್ಟ ಇದ್ದವು ಎನ್ನಬಹುದು. ಸ್ಪರ್ಧಿಗಳು ನಾನು, ನೀನು ಎನ್ನುವಂತೆ ಟಾಸ್ಕ್ಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ ಅಚ್ಚರಿ ಎಂದರೆ ಬಿಗ್ಬಾಸ್ನಲ್ಲಿ ಸಖತ್ ಬಲಿಷ್ಠ ಎನ್ನಲಾಗಿದ್ದ ಗೌತಮಿ ಹಾಗೂ ಉಗ್ರಂ ಮಂಜು ಟಿಕೆಟ್ ಟು ಫಿನಾಲೆಗೆ ಆಯ್ಕೆ ಆಗಿಲ್ಲ. ಧನರಾಜ್, ಚೈತ್ರಾ ಈ ಮೊದಲೇ ಟಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ಈ ಬಾರಿ ಬಿಗ್ಬಾಸ್ ಟಿಕೆಟ್ ಟು ಫಿನಾಲೆ ಟಾಸ್ಕ್ಗೆ ಕ್ಯಾಪ್ಟನ್ ರಜತ್, ಭವ್ಯ, ಹನುಮಂತ ಹಾಗೂ ತ್ರಿವಿಕ್ರಮ್ ಆಯ್ಕೆಯಾಗಿದ್ದಾರೆ. ಮೋಕ್ಷಿತಾ ಕೂಡ ಟಿಕೆಟ್ ಟು ಫಿನಾಲೆ ಟಾಸ್ಕ್ ಅನ್ನು ಮಿಸ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:BIGG BOSS; ಮಾರಿಹಬ್ಬ ಜಾತ್ರೆಯಲ್ಲಿ ಕುರಿನ ಬಲಿ ಕೊಟ್ಟಾಯಿತು.. ಧನರಾಜ್ ಬಗ್ಗೆ ಭವ್ಯ ವ್ಯಂಗ್ಯ
ರಜತ್, ಹನುಮಂತ, ಭವ್ಯ ಹಾಗೂ ತ್ರಿವಿಕ್ರಮ್ ಇವರಲ್ಲಿ ಒಬ್ಬರಿಗೆ ಇಂದು ಗ್ರ್ಯಾಂಡ್ ಫಿನಾಲೆ ಟಿಕೆಟ್ ಸಿಗಲಿದೆ. ಇದಕ್ಕಾಗಿ ಕನ್ನಡ ಸಿನಿ ರಂಗದ ಖ್ಯಾತ ನಟ, ನಟಿ ಬಿಗ್ಬಾಸ್ ಮನೆಗೆ ಬರುವ ಸಾಧ್ಯತೆ ಇದೆ. ಏಕೆಂದರೆ ಗ್ರ್ಯಾಂಡ್ ಫಿನಾಲೆ ಟಿಕೆಟ್ ಅನ್ನು ಸೆಲೆಬ್ರಿಟಿಗಳಿಂದ ಕೊಡಿಸುವುದು ಸಾಮಾನ್ಯವಾಗಿದೆ. ಬಿಗ್ಬಾಸ್ ಕೊಡುವ ಟಾಸ್ಕ್ಗಳನ್ನು ಈ ನಾಲ್ವರು ಸ್ಪರ್ಧಿಗಳು ಎಷ್ಟು ವೇಗವಾಗಿ, ಎಷ್ಟು ಚೆನ್ನಾಗಿ, ಯಾವುದೇ ರೂಲ್ ಬ್ರೇಕ್ ಮಾಡದಂತೆ ಕಡಿಮೆ ಅವಧಿಯಲ್ಲಿ ಮುಗಿಸುತ್ತಾರೋ ಅವರಿಗೆ ಫಿನಾಲೆ ಬಾಗಿಲು ಓಪನ್ ಆಗಿರುತ್ತದೆ.
ಮುಂದಿನ ವಾರದಲ್ಲಿ ಯಾರು ಉತ್ತಮವಾಗಿ ಟಾಸ್ಕ್ನಲ್ಲಿ ಆಡುತ್ತಾರೋ ಅವರಿಗೆ ಫಿನಾಲೆ ಟಿಕೆಟ್ ನೀಡಲಾಗುತ್ತದೆ. ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಿಗ್ಬಾಸ್ ನಡೆಯುತ್ತದೆ. ಪ್ರೇಕ್ಷಕರು ಫಿನಾಲೆಯಲ್ಲಿ ಯಾರು ಗೆಲುವು ಸಾಧಿಸಬಹುದು ಎಂದು ಕಾದು ನೋಡುತ್ತಿದ್ದಾರೆ. ಅಂತಿಮ ನಿರ್ಧಾರ ಏನಾಗಲಿದೆ ಎನ್ನುವುದು ಎಲ್ಲರ ಕುತೂಹಲ ಅಂತೂ ಕೆರಳಿಸಿದೆ. ಈ ವಾರದ ಕಿಚ್ಚನ ಪಂಚಾಯತಿ ಭಾರೀ ಮಹತ್ವ ಪಡೆದುಕೊಳ್ಳಲಿದೆ. ಇದರ ಜೊತೆಗೆ ಈ ವಾರ ಒಬ್ಬರು ಅಥವಾ ಇಬ್ಬರು ಮನೆಯಿಂದ ಹೊರಗಡೆ ಬರಲಿದ್ದಾರೆ. ಈ ಎಲ್ಲದಕ್ಕೂ ಉತ್ತರ ಬೇಕೆಂದರೆ ನಾವು, ನೀವು ಎಲ್ಲ ಸೇರಿ ಸಮಯವನ್ನು ಕಾಯಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ