/newsfirstlive-kannada/media/post_attachments/wp-content/uploads/2024/11/bbk1129.jpg)
ಕನ್ನಡ ಬಿಗ್​ಬಾಸ್​ ಸೀಸನ್​ 11ರಲ್ಲಿ ಸದ್ಯ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 13 ಜನರಲ್ಲಿ ಓರ್ವ ಸ್ಪರ್ಧಿ ವಾರಾಂತ್ಯದಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲಿದ್ದಾರೆ. ಆದರೆ 7 ವಾರಗಳು ಕಳೆದರು ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಒಬ್ಬರಿಗೊಬ್ಬರು ಇನ್ನೂ ಅರ್ಥ ಮಾಡಿಕೊಂಡಿಲ್ಲ.
/newsfirstlive-kannada/media/post_attachments/wp-content/uploads/2024/11/bbk1127.jpg)
ಹೌದು, ಮನೆ ನಡೆದ ಜೋಡಿ ಟಾಸ್ಕ್​ನಲ್ಲಿ ಹೀಗೆ ಆಗಿದೆ. ಬಿಗ್​ಬಾಸ್​ ಮನೆ ಮಂದಿಗೆ ಒಂದು ಆಫರ್ ಕೊಟ್ಟಿದ್ದರು. ನಿಮ್ಮ ಜೋಡಿಯನ್ನು ಮುರಿದು ಮತ್ತೊಬ್ಬನ ಜೊತೆಗೆ ಜೊತೆಯಾಗಬೇಕು ಅಂತ ಹೇಳಿದ್ದರು. ಆಗ ಮನೆಯ ಮಹಿಳಾ ಸ್ಪರ್ಧಿಗಳು ತ್ರಿವಿಕ್ರಮ್​ ಜೊತೆಗೆ ನಾನು ಜೋಡಿಯಾಗುತ್ತೇನೆ ಅಂತ ಮುಗಿಬಿದ್ದಿದ್ದರು.
/newsfirstlive-kannada/media/post_attachments/wp-content/uploads/2024/11/bbk1126.jpg)
ಆದರೆ ಅವರ ಪೈಕಿ ಗೌತಮಿ ಜಾಧವ್​ ಕೂಡ ಒಬ್ಬರು. ಗೌತಮಿ, ಹನುಮಂತನ ಬದಲಿಗೆ ತ್ರಿವಿಕ್ರಮ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ತ್ರಿವಿಕ್ರಮ್ ಮಾತ್ರ ಭವ್ಯಾಳನ್ನು ಅನ್ನು ಆಯ್ಕೆ ಮಾಡಿಕೊಂಡರು. ಆದರೆ ಅವರ ವಿರುದ್ಧವೇ ಆಡಿ ಗೌತಮಿ ಹಾಗೂ ಹನುಮಂತ ಟಾಸ್ಕ್ ಆಡಿ ಗೆದ್ದಿದ್ದಾರೆ. ಆದರೆ ತಾನು ಹನುಮಂತು ಬದಲಿಗೆ ತ್ರಿವಿಕ್ರಮ್ ಅನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದ ಬಗ್ಗೆ ಗೌತಮಿಗೆ ಬೇಸರ ಹೊರ ಹಾಕಿದ್ದಾರೆ.
View this post on Instagram
ಬಿಗ್​ಬಾಸ್ ಕನ್ನಡ ಸೀಸನ್ 11 ಈ ವಾರದ ಟಾಸ್ಕ್​ನಲ್ಲಿ ಹನುಮಂತು ಹಾಗೂ ಗೌತಮಿ ಜೋಡಿಯಾಗಿದ್ದಾರೆ. ಗೌತಮಿ ಅಳುತ್ತಾ ಹನುಮಂತು ಬಳಿ ಕ್ಷಮೆ ಕೇಳಿದ್ದಾರೆ. ಹನುಮಂತನ ಬಳಿ ಈ ಬಗ್ಗೆ ಪ್ರಸ್ಥಾಪಿಸಿ ಕ್ಷಮೆ ಸಹ ಕೇಳಿದ್ದಾರೆ. ಆಗ ಹನುಮಂತ ಕ್ಷಮಿಸಿ ನೀನು ನನ್ನ ಅಕ್ಕ. ಅವರು ಹೇಳಿದನ್ನು ಸುಳ್ಳು ಮಾಡಿ ಗೆದ್ದಿದ್ದಿವಿ ಅಲ್ವಾ ಅಳಬೇಡ ಅಕ್ಕ ಅಂತ ಸಮಾಧಾನ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us