Advertisment

Bigg Bossಗೆ ಸುದೀಪ್​ ವಿದಾಯ.. ಕೊನೆಯ ನಿರೂಪಣೆ ಬಗ್ಗೆ ಕಿಚ್ಚ ಭಾವುಕ ಪೋಸ್ಟ್​​

author-image
Bheemappa
Updated On
BBK11 ಐವರು ನಾಮಿನೇಟ್​.. ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್​ಪಾಸ್​ ಯಾರಿಗೆ..?
Advertisment
  • ನಿಮ್ಮೆಲ್ಲರ ಮೇಲೆ ಅಪಾರವಾದ ಪ್ರೀತಿ, ಗೌರವವಿದೆ- ಸುದೀಪ್
  • ತಮ್ಮ ಮಾತಿನ ಶೈಲಿಯಿಂದಲೇ ಅಭಿಮಾನಿಗಳನ್ನ ಸೆಳೆದಿದ್ದರು
  • ಸುದೀಪ್ ಅವರ ಕೊನೆಯ ಸೀಸನ್ ಬಿಗ್​ಬಾಸ್ ಸೀಸನ್ 11

ಬೆಂಗಳೂರು: ಕಿಚ್ಚ ಸುದೀಪ್ ಅವರು ದೊಡ್ಡ ತೆರೆಯಲ್ಲಿ ಎಷ್ಟೋ ಹೆಸರು, ಖ್ಯಾತಿ ಪಡೆದಿದ್ದಾರೋ ಅಷ್ಟೇ ಕಿರುತೆರೆಯಲ್ಲೂ ನಾಡಿನ ಮನೆ.. ಮನೆಗಳಲ್ಲಿ ಮಾತಾಗಿದ್ದಾರೆ. ಅಭಿಮಾನಿಗಳಿಂದ ಹಿಡಿದು ಎಲ್ಲರನ್ನೂ ಪ್ರೀತಿಯಿಂದ ನೋಡುವ ಅವರು ಸದ್ಯ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದೇ ನನ್ನ ಕೊನೆಯ ಬಿಗ್​ಬಾಸ್ ಸೀಸನ್​ ಎಂದು ಸ್ವತಹ ಕಿಚ್ಚ ಸುದೀಪ್ ಅವರೇ ಈ ಹಿಂದೆ ಖಚಿತ ಪಡಿಸಿದ್ದರು.

Advertisment

ಇದೀಗ ಮತ್ತೆ ಸುದೀಪ್ ಅವರು ಸೋಶೀಯಲ್ ಮೀಡಿಯಾದಲ್ಲಿ ಕಲರ್ಸ್​ ಕನ್ನಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಕನ್ನಡದಲ್ಲಿ ಬಿಗ್​ಬಾಸ್​ ಶೋ ಅನ್ನು ಆರಂಭದಿಂದಲೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 11 ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬಿಗ್​ ಬಾಸ್​​ ಶೋ ವೇಳೆ ತಮ್ಮ ಮಾತಿನ ಚಮತ್ಕಾರದಿಂದಲೇ ಇಡೀ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರು. ಸ್ಪರ್ಧಿಗಳಿಗೆ ಯಾವುದನ್ನು ಹೇಗೆ ಹೇಳಬೇಕು ಹಾಗೇ ಹೇಳಿ, ಕೊನೆಗೆ ಉತ್ತರ ಕೊಡುತ್ತಿದ್ದರು.

publive-image

ಇದನ್ನೂ ಓದಿ: BBK11; ಮನೆಯಲ್ಲಿ ಬಿಗ್​ ಫೈಟ್​.. ತ್ರಿವಿಕ್ರಮ್​​ನೇ ಟಾರ್ಗೆಟ್ ಮಾಡಿದ್ರಾ ಭವ್ಯ, ಮೋಕ್ಷಿತಾ ಪೈ, ಯಾಕೆ?

ಸದ್ಯ ಈಗ ನಡೆಯುತ್ತಿರುವ ಬಿಗ್​ಬಾಸ್​ ಸೀಸನ್​ 11ರ ಶೋನಲ್ಲೂ ಸುದೀಪ್ ಅಚ್ಚುಕಟ್ಟಾಗಿ ಎಲ್ಲವನ್ನು ನಿಭಾಯಿಸಿ ಯಶಸ್ವಿ ಕಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆ ಬಿಗ್​ಬಾಸ್ ಶೋ ಎಂದು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಿಂದ ಈ 11ರ ಸೀಸನ್​​ವರೆಗೆ ಬಿಗ್​ಬಾಸ್ ಅನ್ನು ಎಂಜಾಯ್ ಮಾಡಿದ್ದೇನೆ. ಶೋನಲ್ಲಿ ಪ್ರೀತಿ, ಅಭಿಮಾನ ತೋರಿಸಿದ್ದಕ್ಕೆ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

Advertisment

ಮುಂದಿನ ಶನಿವಾರ, ಭಾನುವಾರ ನಡೆಯುವ ಗ್ರ್ಯಾಂಡ್ ಫಿನಾಲೆ ನಾನು ನಡೆಸಿಕೊಡುವ ಕೊನೆಯ ಶೋ ಆಗಿರಲಿದೆ. ಎಲ್ಲರನ್ನು ಚೆನ್ನಾಗಿ ರಂಜಿಸಿದ್ದೇನೆ ಎಂದು ಭಾವಿಸುತ್ತೇನೆ. ಇದೊಂದು ಮರೆಯಲಾಗದ ಜರ್ನಿಯಾಗಿದೆ. ನನಗೆ ಸಾಧ್ಯವಾದಷ್ಟು ಎಲ್ಲವನ್ನು ಉತ್ತಮವಾಗಿ ನಡೆಸಿಕೊಟ್ಟಿದ್ದೇನೆಂದು ತಿಳಿಯುತ್ತೇನೆ. ಇಂತಹ ಒಳ್ಳೆಯ ಅವಕಾಶ ಕೊಟ್ಟಿದ್ದಕ್ಕೆ ಕಲರ್ಸ್​ ಕನ್ನಡದವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ, ಗೌರವವಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.


">January 19, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment