/newsfirstlive-kannada/media/post_attachments/wp-content/uploads/2025/02/MOKSHITHA-3.jpg)
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಮೋಕ್ಷಿತಾ ಪೈ ಅವರು ಸದ್ಯ ಶೂಟಿಂಗ್, ಇಂಟರ್ವ್ಯೂವ್ ಎಂದು ಫುಲ್ ಬ್ಯುಸಿ ಇದ್ದಾರೆ. ಅವರು ಎಲ್ಲಿ ಹೋದರೂ ನೋಡಲು ಜನ ಮುಗಿಬೀಳುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಫೈನಲ್ವರೆಗೆ ಫೈಟ್ ಕೊಟ್ಟಿದ್ದ ಮೋಕ್ಷಿತಾ ಕೊನೆ ಹಂತದಲ್ಲಿ ಹೊರಗೆ ಬಂದರು. ಬಿಗ್ಬಾಸ್ ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವ ಕುರಿತು ಮೋಕ್ಷಿತಾ ಮಾತನಾಡಿದ್ದಾರೆ.
ನ್ಯೂಸ್ಫಸ್ಟ್ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬಿಗ್ ಬಾಸ್ ಸ್ಪರ್ಧಿ ಮೋಕ್ಷಿತಾ ಪೈ ಅವರು, ನಾನು ಮನೆಯಲ್ಲಿ ಹೇಗಿದ್ದೇ, ಏನಂತ ಬಿಗ್ಬಾಸ್ ಹೇಳಿದ್ದಾರೆ. ಅವರನ್ನೇ ಪ್ರಶ್ನೆ ಮಾಡಬೇಕು ಎನ್ನುವುದು ಏನು ಇಲ್ಲವೇ ಇಲ್ಲ. ಬಿಗ್ ಬಾಸ್ ಸೂಪರ್ ಪವರ್ ಕೊಟ್ಟರೇ, ನನ್ನ ಗೆಳೆಯರನ್ನು ಕರೆದುಕೊಂಡು ಹೋಗಿ ಬಿಗ್ ಬಾಸ್ ಮನೆಯನ್ನು ತೋರಿಸಬೇಕು ಎನ್ನುವುದು ಆಸೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: T20 ತಂಡದಲ್ಲಿ ಇಂದು ಮಹತ್ವದ ಬದಲಾವಣೆ.. ಪಂದ್ಯ ನಡೆಯುವುದು ಎಲ್ಲಿ, ಯಾವಾಗ?
ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವ ಆಫರ್ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ಪ್ರೋಫೆಷನಲ್ ಬೇರೆ, ಪರ್ಸನಲ್ ಬೇರೆ. ಹಾಗಾಗಿ ಎರಡನ್ನೂ ಕಂಬೈನ್ ಮಾಡೋಕೆ ಆಗಲ್ಲ. ಆದ್ದರಿಂದ ಸಿನಿಮಾ ಮಾಡುವ ಅವಕಾಶ ಬಂದರೆ ಮಾಡುತ್ತೇನೆ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ.
ಇನ್ನು ಬಿಗ್ಬಾಸ್ ಮನೆಯಲ್ಲಿ ಸಂಕ್ರಾಂತಿ ಹಬ್ಬದಂದು ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಇಬ್ಬರು ಒಂದು ಸಾಂಗ್ಗೆ ಡ್ಯಾನ್ಸ್ ಮಾಡಿದ್ದರು. ಅದು ಯಾವ ಹಾಡು ಎಂದು ಪ್ರೇಕ್ಷಕರಿಗೆ ಗೊತ್ತಿರಲಿಲ್ಲ. ಅದಕ್ಕೆ ಉತ್ತರಿಸಿದ ಮೋಕ್ಷಿತಾ, ‘ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ, ಹೆಣ್ಣು ಹೈಕ್ಳು ದೂರ ಇರಿ ಸ್ವಲ್ಪ ಇವನಿಂದ’ ಎನ್ನುವ ಹಾಡಿಗೆ ಇಬ್ಬರು ಡ್ಯಾನ್ಸ್ ಮಾಡಿದ್ವಿ ಎಂದು ನಾಚುತ್ತ, ನಗುತ್ತ ಮೋಕ್ಷಿತಾ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ