ಬೆನ್ನಿಗೆ ಚೂರಿ ಹಾಕೋರು ಮುಂದೆ ಸ್ನೇಹಿತರಾಗಬಹುದು ಎಂದ ಕಿಚ್ಚ.. ಈ ಮಾತನ್ನು ಹೇಳಿದ್ದು ಮತ್ಯಾರಿಗೂ ಅಲ್ಲ..!

author-image
Veena Gangani
Updated On
ಬೆನ್ನಿಗೆ ಚೂರಿ ಹಾಕೋರು ಮುಂದೆ ಸ್ನೇಹಿತರಾಗಬಹುದು ಎಂದ ಕಿಚ್ಚ.. ಈ ಮಾತನ್ನು ಹೇಳಿದ್ದು ಮತ್ಯಾರಿಗೂ ಅಲ್ಲ..!
Advertisment
  • ಪ್ರೋಮೋ ರಿಲೀಸ್ ಮಾಡಿ​ ಕುತೂಹಲ ಮೂಡಿಸಿದ ಬಿಗ್​ಬಾಸ್​
  • ಬೆಂಕಿ, ನೀರು ಸಮ್ಮಿಲನದೊಂದಿಗೆ ಬರ್ತಿದೆ ಬಿಗ್​ಬಾಸ್​ ಸೀಸನ್​ 11
  • ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಸ್ಪರ್ಧಿಗಳು ಬರಬಹುದು?

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಬಂದೇ ಬಿಡ್ತು. ಇದೇ ಸೆಪ್ಟೆಂಬರ್ 29ರಿಂದ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ಇದೆ. ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಬಿಗ್​ಬಾಸ್​ ಬಗ್ಗೆ ಒಂದೊಂದಾಗಿ ಅಪ್ಡೇಟ್ ಗೊತ್ತಾಗುತ್ತಿದೆ. ಇಷ್ಟು ದಿನ ಇದಕ್ಕಾಗಿಯೇ ಕಾಯುತ್ತಿದ್ದ ವೀಕ್ಷಕರು ಫುಲ್​ ಖುಷ್ ಆಗಿದ್ದಾರೆ. ಬಿಗ್​ಬಾಸ್​ ಸೀಸನ್​ 11ರ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ.

ಇದನ್ನೂ ಓದಿ:VIDEO: ಬೆಂಕಿ, ನೀರು ಸಮ್ಮಿಲನದೊಂದಿಗೆ ಬರ್ತಿದೆ ಬಿಗ್​ಬಾಸ್​ ಸೀಸನ್​ 11; ಈ ಬಾರಿಯ ವಿಶೇಷತೆ ಏನು?

ಬಹುನಿರೀಕ್ಷಿತ ಕನ್ನಡದ ಬಿಗ್​ಬಾಸ್ ಸೀಸನ್​ 11ಕ್ಕೆ ದಿನಗಣನೆ ಶುರುವಾಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್​ಬಾಸ್​ ತಂಡ ತೆರೆ ಮರೆ ಹಿಂದೆ ಎಲ್ಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಈಗ ಕಲರ್ಸ್​ ಕನ್ನಡ ತನ್ನ ಅಧಿಕೃತ ಖಾತೆಯಲ್ಲಿ ಬಿಗ್​ಬಾಸ್​​ ಪ್ರೋಮೋಗಳನ್ನು ಬಿಡುಗಡೆ ಮಾಡುವ ಮೂಲಕ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದ್ದಾರೆ.

publive-image

ಮೊದಲ ಸೀಸನ್​ನಿಂದ ಹಿಡಿದು ಹತ್ತು ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ ಸೀಸನ್​ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್​​ಬಾಸ್​ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು ಕಡೆ ನೀರು ಇದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅಂದರೆ ಬಿಗ್​ಬಾಸ್ ಮನೆಯೊಳಗೆ ಸ್ಪರ್ಧಿಗಳ ಆಕ್ರೋಶ, ಜಗಳ, ಕಿತ್ತಾಟ, ಕಣ್ಣೀರು, ಭಾವನಾತ್ಮಕ ನಂಟಿನ ಸಾರವನ್ನು ಹೇಳ್ತಿದೆ.

ಜೊತೆಗೆ ರಿಲೀಸ್ ಆದ ನೂತನ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಹೊಸ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ. ಬೆಳಕು, ಸಂತೋಷ, ಸುಖ, ನೆಮ್ಮದಿ ಸ್ವರ್ಗ. ಕತ್ತಲು, ನೋವು, ಕಷ್ಟ, ಹಿಂಸೆ, ನರಕ. ಸ್ವರ್ಗದಲ್ಲಿ ಇರಬೇಕದವರು ನರಕದಲ್ಲಿ ಇರಬಹುದು. ನರಕದಲ್ಲಿ ಇರಬೇಕಾದವರು ಸ್ವರ್ಗದಲ್ಲಿ ಇರಬಹುದು. ಬೆನ್ನಿಗೆ ಚೂರಿ ಹಾಕ್ತಾರೆ ಅಂತ ಅನ್ಕೊಂಡವರು ಮುಂದೆ ಹೋಗಿ ನಿಮ್ಮ ಸ್ನೇಹಿತರು ಆಗಬಹುದು. ಸ್ನೇಹಿತರಾಗಿರುತ್ತಾರೆ ಅನ್ಕೊಂಡವರು ಮುಂದೆ ಹೋಗಿ..? ಇದು ಬಿಗ್​ ಬಾಸ್​ನ ಹೊಸ ಅಧ್ಯಾಯ. ಸ್ವರ್ಗ, ನರಕ ಎರಡು ಇದೆ. ಎರಡರಲ್ಲೂ ಕಿಚ್ಚು ಅಷ್ಟೇ ಇದೆ ಎಂದು ಹೇಳಿದ್ದಾರೆ. ಇದೇ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಮಾತು ಡೈಲಾಂಗ್​ ಹೇಳಿದ ವೀಕ್ಷಕರು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

publive-image

ಇನ್ನು, ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸ್ಟಾರ್​ ನಟ, ನಟಿಯರು, ಸೋಷಿಯಲ್​ ಮೀಡಿಯಾ ಸ್ಟಾರ್​ಗಳ ಪಟ್ಟಿಗಳಲ್ಲಿ ಕೆಲವೊಂದು ಹೆಸರುಗಳು ಹರಿದಾಡುತ್ತಿವೆ. ಅವುಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment