BIGG BOSS; ಗೆದ್ದವರಿಗೆ ಗ್ರ್ಯಾಂಡ್​ ಫಿನಾಲೆ ಟಿಕೆಟ್.. ಬಿಗ್ ಬಾಸ್ ಕೊಟ್ಟ ಟಾಸ್ಕ್ ಹೇಗಿದೆ?

author-image
Bheemappa
Updated On
BIGG BOSS; ಗೆದ್ದವರಿಗೆ ಗ್ರ್ಯಾಂಡ್​ ಫಿನಾಲೆ ಟಿಕೆಟ್.. ಬಿಗ್ ಬಾಸ್ ಕೊಟ್ಟ ಟಾಸ್ಕ್ ಹೇಗಿದೆ?
Advertisment
  • ಪ್ರತಿ ಟಾಸ್ಕ್​ನಲ್ಲಿ ಸ್ಪರ್ಧಿಯ ಪ್ರತಿ ಹೆಜ್ಜೆಯೂ ಅತಿ ಮುಖ್ಯ
  • ಆಡುವಾಗ ನಿಯಮ ಪಾಲನೆ ಮಾಡಲಿಲ್ವಾ ಸ್ಪರ್ಧಿಗಳು?
  • ವಾರದ ಕೊನೆಯಲ್ಲಿ ಯಾರು ಮನೆಯಿಂದ ಹೋಗ್ತಾರೆ?

ಕನ್ನಡದ ಬಿಗ್​​ ಬಾಸ್​ ಶೋನಲ್ಲಿ ಕಳೆದ ವಾರ ಯಾರನ್ನೂ ಮನೆಯಿಂದ ಆಚೆ ಕಳಿಸಿಲ್ಲ. ಆದರೆ ಈ ವಾರ 9 ಸ್ಪರ್ಧಿಗಳಲ್ಲಿ ಯಾರದರೂ ಗೇಟ್ ಪಾಸ್ ಪಡೆದುಕೊಳ್ಳುತ್ತಾರೆ. ಅದು ಯಾರು ಎಂಬುದೇ ಪ್ರೇಕ್ಷಕರ ಕುತೂಹಲವಾಗಿತ್ತದೆ. ಹೀಗಾಗಿಯೇ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಯನ್ನು ಹೊರಗೆ ಕಳಿಸಿಕೊಡುತ್ತಾರೆ. ಗ್ರ್ಯಾಂಡ್ ಫಿನಾಲೆ ಸಮೀಪಿಸುತ್ತಿದ್ದು ಸ್ಪರ್ಧಿಗಳಿಗೆ ಒತ್ತಡ ಹೆಚ್ಚಾಗಿದೆ. ಇದರ ಜೊತೆ ಟಾಸ್ಕ್​ಗಳಲ್ಲೂ ಗೆಲುವು ಪಡೆಯಬೇಕಾಗಿದೆ.

ಮನೆಯಲ್ಲಿನ ಸದಸ್ಯರಿಗೆ ಇಂದು ನೀಡಿರುವ ಟಾಸ್ಕ್​ನಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದೆ ಹೆಚ್ಚು ಕಾಣುತ್ತದೆ. ಟಾಸ್ಕ್​ ಪ್ರಕಾರ ಒಂದು ಕೈಯಲ್ಲಿ ಪೋಲ್ ಮತ್ತೊಂದು ಕೈಯಲ್ಲಿ ಬಣ್ಣದ ನೀರಿನ ಬಾಟಲ್ ಕೊಟ್ಟಿರುತ್ತಾರೆ. ಒಂದು ಬಾರಿಗೆ ಇಬ್ಬರು ಸ್ಪರ್ಧಿಗಳು ಆಡಬೇಕು. ಕೈಯಲ್ಲಿರುವ ಪೋಲ್​ನಿಂದ ಹೊಡೆದು ಬಾಟಲ್ ಒಳಗಿನ ಬಣ್ಣದ ನೀರಿನ್ನು ಚೆಲ್ಲಬೇಕು. ಯಾರ ನೀರು ಹೆಚ್ಚಿಗೆ ಚೆಲ್ಲುತ್ತಾವೋ ಅವರು ಸೋತಂತೆ. ಒಂದು ವೇಳೆ ಬಾಟಲ್ ಕೆಳಗೆ ಬಿದ್ದರೂ ಸ್ಪರ್ಧಿ ಸೋತಾಗೆ.

publive-image

ಇದನ್ನೂ ಓದಿ:BBK11; ಟಾಸ್ಕ್​ನಲ್ಲಿ ತ್ರಿವಿಕ್ರಮ್- ಮಂಜು ಮಧ್ಯೆ ಹೊಡೆದಾಟ.. ರೂಲ್ಸ್ ಬ್ರೇಕ್ ಮಾಡಿದ್ರಾ?

ಸದ್ಯ ಈ ರೀತಿಯ ಗೇಮ್ ಆಡುವಾಗ ತ್ರಿವಿಕ್ರಮ್ ಮುಖ, ಮುಖಕ್ಕೆ ಮಂಜು ಪೋಲ್​ನಿಂದ ಹೊಡೆದರು. ಹೆಂಗೆ ಬಿತ್ತು, ಹೇಗೆ ಬಿತ್ತು ಎಂದು ಹೇಳಿದರೆ, ಹೀಗೆ ಹೊಡೆದರೆ ಹೆಂಗೆ?. ನಾನು ಹೊಡೆಯುತ್ತೇನೆ ಎಂದು 2 ಸೆಕೆಂಡ್​ಗೆ ಮಂಜು ಕೈಯಲ್ಲಿನ ಬಾಟಲ್ ಬೀಳಿಸುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ. ಪೋಲ್​ನಿಂದ ತ್ರಿವಿಕ್ರಮ್ ಹೊಡೆದಿರುವುದು ವಿಡಿಯೋದಲ್ಲಿದೆ. ಆದರೆ ಮಂಜು ಕೈಯಿಂದ ಬಾಟಲ್ ಕೆಳಗೆ ಬಿದ್ದಿಲ್ಲ. ಆಡುವಾಗ ಎಲ್ಲ ಸ್ಪರ್ಧಿಗಳು ನಿಯಮ ಮೀರಿದ್ದಾರೆ ಎನ್ನಲಾಗಿದೆ. ಆದರೆ ಈ ಟಾಸ್ಕ್​ನಲ್ಲಿ ಯಾರು ಗೆದ್ದಿದಾರೆ ಎನ್ನುವುದು ಕುತೂಹಲ ವಿದೆ.

ಇನ್ನು ತ್ರಿವಿಕ್ರಮ್ ಹಾಗೂ ಮಂಜು ನಡುವೆ ಮಾತಿನ ಸಮರ ನಡೆದಿದ್ದು ಟಾಸ್ಕ್​ನಲ್ಲೂ ಇಬ್ಬರು ಕೋಪದಲ್ಲೇ ಆಡಿದ್ದಾರೆ. ಮನೆ ಕ್ಯಾಪ್ಟನ್ ಆಗಿರುವ ರಜತ್ ಅವರು ಏನು ಮಾಡೋಕೆ ಆಗಲ್ಲ ಗುರು, ಕಾಪಾಡಿಕೋ ಎಂದು ಮಂಜುಗೆ ಹೇಳಿದ್ದಾರೆ. ಬಿಗ್​ಬಾಸ್ ಪ್ರಕಾರ ಯಾರು ಟಾಸ್ಕ್​ ಚೆನ್ನಾಗಿ ಪೂರ್ಣಗೊಳಿಸಿ ಗೆಲವು ಪಡೆಯುತ್ತಾರೋ ಅವರಿಗೆ ಫಿನಾಲೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಯಾರು ಆ ಅದೃಷ್ಣಶಾಲಿಗಳು ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment