/newsfirstlive-kannada/media/post_attachments/wp-content/uploads/2025/01/TRIVIKRAM.jpg)
ಬಿಗ್ ಬಾಸ್ ಶೋ ಇನ್ನೇನು ಕೆಲವು ವಾರಗಳಲ್ಲಿ ಅಂತ್ಯ ಕಾಣಲಿದೆ. ಮನೆ ಒಳಗಿನ ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಹೋಗಲು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೇಗೆಂದರೆ ಬಿಗ್ ಬಾಸ್ ಕೊಡುವ ಪ್ರತಿ ಟಾಸ್ಕ್ನಲ್ಲೂ ಅತ್ಯುತ್ತಮ ಪರ್ಫಾಮೆನ್ಸ್ ನೀಡಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಎದುರಾಳಿಗಳನ್ನು ಹೆದರಿಸಿಕೊಂಡು ಮನೆಯೊಳಗೆ ಟಾಸ್ಕ್ ಆಡುತ್ತಿದ್ದಾರೆ. ಅದರಂತೆ ಬಿಗ್ಬಾಸ್ನಲ್ಲಿ ಸರಣಿ ಟಾಸ್ಕ್ಗಳು ಆರಂಭವಾಗಿವೆ.
ಮನೆಯಲ್ಲಿರುವ ಎಲ್ಲ 9 ಸ್ಪರ್ಧಿಗಳಿಗೆ ಬಿಗ್ ಬಾಸ್ ಸರಣಿ ಟಾಸ್ಕ್ಗಳನ್ನು ನೀಡಲಿದ್ದಾರೆ. ಈ ಟಾಸ್ಕ್ಗಳಲ್ಲಿ ಹೆಚ್ಚು ಚೆನ್ನಾಗಿ ಆಡಿ, ಯಾವುದೇ ಮೋಸ ಮಾಡದೇ ಗೆಲುವು ಸಾಧಿಸಬೇಕು. ಟಾಸ್ಕ್ಗಳಲ್ಲಿ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಿ ಗೆಲುವನ್ನು ಪಡೆಯುವ ಸ್ಪರ್ಧಿಗಳಿಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್ ಬಿಗ್ ಬಾಸ್ ನೀಡುತ್ತಾರೆ. ಅಂದರೆ ಸ್ಪರ್ಧಿಗಳು ಆಡುವ ಟಾಸ್ಕ್ ಮೇಲೆ ಅವರ ಫಿನಾಲೆ ಟಿಕೆಟ್ ಖಾತರಿಯಾಗುತ್ತದೆ ಎಂದು ಬಿಗ್ಬಾಸ್ ಹೇಳಿದ್ದಾರೆ.
ಇದನ್ನೂ ಓದಿ:BIGG BOSS ಗ್ರ್ಯಾಂಡ್ ಫಿನಾಲೆಗೆ ಈ ನಾಲ್ವರು ಹೋಗೋದು ಫಿಕ್ಸ್.. ಟಾಸ್ಕ್ನಲ್ಲಿ ರಜತ್ ಆಯ್ಕೆ ಸರಿನಾ?
ಟಾಸ್ಕ್ನಲ್ಲಿ ಚೆನ್ನಾಗಿ ಆಡದೇ ಇರುವವರು ಫಿನಾಲೆಗೆ ಹೋಗುವ ಆಸೆಯನ್ನು ಕೈಬಿಡಬೇಕು ಆಗುತ್ತದೆ. ಏನೇ ಆಗಲಿ ರಜತ್ ಮನೆಯ ಕ್ಯಾಪ್ಟನ್ ಆದ ಮೇಲೆ ಬಿಗ್ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್ಗಳು ವೇಗ ಪಡೆದುಕೊಂಡಿವೆ. ಫಿನಾಲೆಗೆ ಹೋಗುವ ಆಸೆಯಿಂದ ಎಲ್ಲರೂ ಟಾಸ್ಕ್ ಪೂರ್ಣಗೊಳಿಸುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇಷ್ಟು ದಿನ ಆಡಿದ್ದಕ್ಕಿಂತ ಈ ಕೊನೆ ಮೂರು ವಾರಗಳಲ್ಲಿ 9 ಸ್ಪರ್ಧಿಗಳು ಆಡುವ ಟಾಸ್ಕ್ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತವೆ.
View this post on Instagram
ಇನ್ನು ಇಂದಿನ ಟಾಸ್ಕ್ನಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಸಖತ್ ಟಾಕ್ ವಾರ್ ನಡೆದಿದೆ. ಟಾಸ್ಕ್ನಲ್ಲಿ ತ್ರಿವಿಕ್ರಮ್ ಮುಖ ಮುಖಕ್ಕೆ ಉಗ್ರಂ ಮಂಜು ಹೊಡೆದಿದ್ದಾರೆ. ಇದಕ್ಕೆ ಕೋಪಗೊಂಡಿರುವ ತ್ರಿವಿಕ್ರಮ್ ಅಷ್ಟು ಜೋರಾಗಿ ಹೊಡೆದರೆ ಹೆಂಗೆ ಎಂದು ಪ್ರಶ್ನೆ ಮಾಡಿದ್ದಲ್ಲದೇ ನಾನು ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮಂಜು ನಾನು ಎಲ್ಲಿ ತಳ್ಳಾಡಿದೆ, ಎಲ್ಲಿ ಹೊಡೆದಾಡಿದೆ ಎಂದು ಕೇಳಿದ್ದಾರೆ. ಬಳಿಕ ಟಾಸ್ಕ್ನಲ್ಲಿ ಉಗ್ರಂ ಮಂಜುಗೆ ತ್ರಿವಿಕ್ರಮ್ ಓಡಾಡಿಸಿ ಹೊಡೆದಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿದ್ರಾ ಎನ್ನುವ ಪ್ರಶ್ನೆ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ